ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ವಾಣಿಜ್ಯ ಕಟ್ಟಡ ಉನ್ನತಿ ಇದರ ಉದ್ಘಾಟನಾ ಸಮಾರಂಭವು ಜೂ.21 ರಂದು ಧರ್ಮಸ್ಥಳ ಕಲ್ಲೇರಿ ಸಂಘದ ವಠಾರ ನಡೆಯಿತು.
ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿ ಮಾತನಾಡಿ ಸಹಕಾರಿ ರಂಗ ಗಟ್ಟಿಯಾಗಬೇಕು ಮತ್ತು ಬಲಿಷ್ಠವಾಗಬೇಕು.ಧರ್ಮಸ್ಥಳ ಕ್ಷೇತ್ರದಲ್ಲಿರುವ ಸಂಸ್ಥೆ ಒಳ್ಳೆಯ ರೀತಿಯಲ್ಲಿ ನಡೆದು ಸರ್ವಾಂಗೀಣ ಪ್ರಗತಿ ಸಾಗಿಸಿದೆ.ಸಹಕಾರಿ ರಂಗ ಮತ್ತು ಧರ್ಮಸ್ಥಳದ ಸ್ವಸಹಾಯ ಸಂಘಗಳು ಜೊತೆ ಜೊತೆಯಾಗಿ ನಡೆಯುತ್ತಿದೆ ಎಂದರು.
ರೈತ ಸಭಾ ಭವನ ಹಾಗೂ ಊಟದ ಸಭಾಂಗಣ ಉದ್ಘಾಟನೆಯನ್ನು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಬೆಂಗಳೂರು ಅಧ್ಯಕ್ಷ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ನೆರವೇರಿಸಿದರು..
ಅಧ್ಯಕ್ಷತೆಯನ್ನು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ. ವಹಿಸಿದರು.
ಮುಖ್ಯ ಅಥಿತಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,ವಿಧಾನಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ,ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಬಿ ವಿ ಪ್ರತೀಮಾ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲ,ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಿ ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಸತೀಶ್ ಹೊಳ್ಳ ,ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್,ನಿರ್ದೇಶಕರಾದ ಶಾಂಭವಿ ರೈ,ನೀಲಾಧರ ಶೆಟ್ಟಿ, ಶೀನ,ಚಂದ್ರಶೇಖರ,ಉಮಾನಾಥ,ಪ್ರಭಾಕರ ಗೌಡ ಬೊಳ್ಮ,ವಿಕ್ರಮ್,ಧನಲಕ್ಷ್ಮಿ,ಪ್ರಸನ್ನ ಹೆಬ್ಬಾರ್,ತಂಗಚ್ಚನ್ ಎನ್.ಪಿ,ಡಿ.ಸಿ.ಸಿ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಪ್ರಾಪ್ತಿ ಶೆಟ್ಟಿ, ವಂಶಿಕ ಇವರು ಪ್ರಾರ್ಥಿಸಿದರು. ಕಟ್ಟಡ ಸಮಿತಿ ಸದಸ್ಯರು, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಲೋಕೇಶ್ ಶೆಟ್ಟಿ ಮತ್ತು ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.