April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 10ನೇ ವರ್ಷದ ಯೋಗ ದಿನಾಚರಣೆ

ಧಮ೯ಸ್ಥಳ : ಎಸ್. ಡಿ.ಎಂ. ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವತಿಯಿಂದ 10 ನೇ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮ ಜೂ.21ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.


ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಬೇರೆ ದೇಶಗಳಿಂದ ಔಷಧಿಯನ್ನು ತರಿಸುತ್ತೇವೆ. ನಾವು ನಮ್ಮ ದೇಶದಿಂದ ರಪ್ತು ಮಾಡುವುದು ಔಷಧಿ ರಹಿತ ಚಿಕಿತ್ಸೆ ಯೋಗವನ್ನು, ಯೋಗದಿಂದ ಕೊರೋನಾವನ್ನು ಎದುರಿಸಬಹುದು. ಯೋಗವನ್ನು ಎಲ್ಲಾ ವಯೋಮಾನದವರು ಮಾಡಬಹುದು. ಯೋಗ ವಿಶ್ವ ವ್ಯಾಪಿಯಾಗಲಿ ಎಂದು ಹಾರೈಸಿದರು.


ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮಾತನಾಡಿ ಆತ್ಮ, ಆಧ್ಯಾತ್ಮ ನಮ್ಮ ಒಳಗೆ ಇದೆ ಎಂಬುದನ್ನು ಯೋಗದಿಂದ ತಿಳಿಯ ಬಹುದಾಗಿದೆ ಎಂದರು.
ಡಾ. ಜಾನ್ ಎಬ್ನೇಜರ್ ಮೂಲೆ ಶಸ್ತ್ರ ಚಿಕಿತ್ಸಕ ಪರಿಮಳ ಹೆಲ್ತ್ ಕೇರ್ ಸವಿ೯ಸ್ ಬೆಂಗಳೂರು ಇವರು ಮಾತನಾಡಿ, ಯೋಗ ಭಾರತೀಯ ಸಂಸ್ಕೃತಿ, ಪತಾಂಜಲಿ ಅವರು ಇದನ್ನು ಬೆಳೆಸಿದವರು, ಇಂದು ವಿಶ್ವದಲ್ಲಿ ಯೋಗ ದಿನಾಚರಣೆ ಆಚರಿಸಲು ಕಾರಣ ರಾದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಬೇಕು. ವಿದ್ಯಾರ್ಥಿಗಳು ಯೋಗ ಕಲಿತರೆ ಯೋಗ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.


ಡಾ.ಲಿಂಗೇ ಗೌಡ ಉಪಕುಲಪತಿ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ ತುಮಕೂರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧಮ೯ದ ಜೊತೆ ಯೋಗಕ್ಕೂ ಆದ್ಯತೆ ನೀಡಿರುವುದು ಪ್ರಶಂಸನೀಯ, ಧರ್ಮಸ್ಥಳದಿಂದ ಮಂಜುನಾಥ ದೇವಸ್ಥಾನ ಸೌದಿ ಅರೇಬಿಯಾದಲ್ಲಿ ಆಗಲಿ ಎಂದು ಆಶಿಸಿದರು.
,ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಅಶ್ವಥ್ ಹೆಗ್ಡೆ ಮತ್ತು ಡಾ. ಅಚ್ಚುತ್ತನ್ ಈಶ್ವರನ್ ಅವರಿಗೆ ಅಲುಮಿನಿ ಎಕ್ಸೆಲೆನ್ಸ್ ಆವಾಡ್೯ -2024 ಪ್ರಶಸ್ತಿ ಹಾಗೂ ಕು. ಕುಶಿ ಹೆಚ್. ಇವರಿಗೆ ಯೋಗ ರತ್ನ -2024 ಪ್ರಶಸ್ತಿ ಪ್ರಧಾನ ಮಾಡಲಾಯಿತು. ವೇದಿಕೆಯಲ್ಲಿ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಧಾಕರ ಕೊಟ್ಟಾರಿ ಉಪಸ್ಥಿತರಿದ್ದರು.
ಕು. ಭಾಷಿಣಿ ಮತ್ತು ಬಳಗದವರು ಪ್ರಾಥ೯ನೆ ಬಳಿಕ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ. ಸುಜಾತ ಯೋಗ ತರಬೇತಿ ಬಗ್ಗೆ ವರದಿ ನೀಡಿ ಈ ಬಾರಿ ಜಿಲ್ಲೆಯಲ್ಲಿ 4,489 ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಯೋಗ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಯೋಗ ರತ್ನ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.
ಡಾ. ಅನನ್ಯ ಜೈನ್ ಮತ್ತು ಡಾ. ಕೃತಿಕಾ‌ ರಾಮಸ್ವಾಮಿ ಕಾಯ೯ಕ್ರಮ ನಿರೂಪಿಸಿದರು. ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು.

Related posts

ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಿ ಕೊಡುವುದಾಗಿ ನಂಬಿಸಿ, ರೂ. 4.95 ಲಕ್ಷ ವಂಚನೆ ಆರೋಪ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮುಂಡಾಜೆ ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ನಬಾರ್ಡ್‌ ಅಧಿಕಾರಿಗಳ ಜೊತೆ ವಿವಿಧ ರಾಜ್ಯಗಳ ಸಹಕಾರಿ ಸಂಘಗಳ ಅಧಿಕಾರಿಗಳ ಭೇಟಿ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ

Suddi Udaya

ಉಜಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ 110ನೇ ಸಂಸ್ಥಾಪನಾ ದಿನಾಚರಣೆ

Suddi Udaya

ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ಆಯ್ಕೆ

Suddi Udaya

ಹುಣ್ಸೆಕಟ್ಟೆ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕರಿಯಪ್ಪ ಇವರಿಗೆ ಗೌರವಾರ್ಪಣೆ

Suddi Udaya
error: Content is protected !!