September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 10ನೇ ವರ್ಷದ ಯೋಗ ದಿನಾಚರಣೆ

ಧಮ೯ಸ್ಥಳ : ಎಸ್. ಡಿ.ಎಂ. ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವತಿಯಿಂದ 10 ನೇ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮ ಜೂ.21ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.


ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಬೇರೆ ದೇಶಗಳಿಂದ ಔಷಧಿಯನ್ನು ತರಿಸುತ್ತೇವೆ. ನಾವು ನಮ್ಮ ದೇಶದಿಂದ ರಪ್ತು ಮಾಡುವುದು ಔಷಧಿ ರಹಿತ ಚಿಕಿತ್ಸೆ ಯೋಗವನ್ನು, ಯೋಗದಿಂದ ಕೊರೋನಾವನ್ನು ಎದುರಿಸಬಹುದು. ಯೋಗವನ್ನು ಎಲ್ಲಾ ವಯೋಮಾನದವರು ಮಾಡಬಹುದು. ಯೋಗ ವಿಶ್ವ ವ್ಯಾಪಿಯಾಗಲಿ ಎಂದು ಹಾರೈಸಿದರು.


ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮಾತನಾಡಿ ಆತ್ಮ, ಆಧ್ಯಾತ್ಮ ನಮ್ಮ ಒಳಗೆ ಇದೆ ಎಂಬುದನ್ನು ಯೋಗದಿಂದ ತಿಳಿಯ ಬಹುದಾಗಿದೆ ಎಂದರು.
ಡಾ. ಜಾನ್ ಎಬ್ನೇಜರ್ ಮೂಲೆ ಶಸ್ತ್ರ ಚಿಕಿತ್ಸಕ ಪರಿಮಳ ಹೆಲ್ತ್ ಕೇರ್ ಸವಿ೯ಸ್ ಬೆಂಗಳೂರು ಇವರು ಮಾತನಾಡಿ, ಯೋಗ ಭಾರತೀಯ ಸಂಸ್ಕೃತಿ, ಪತಾಂಜಲಿ ಅವರು ಇದನ್ನು ಬೆಳೆಸಿದವರು, ಇಂದು ವಿಶ್ವದಲ್ಲಿ ಯೋಗ ದಿನಾಚರಣೆ ಆಚರಿಸಲು ಕಾರಣ ರಾದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಬೇಕು. ವಿದ್ಯಾರ್ಥಿಗಳು ಯೋಗ ಕಲಿತರೆ ಯೋಗ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.


ಡಾ.ಲಿಂಗೇ ಗೌಡ ಉಪಕುಲಪತಿ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ ತುಮಕೂರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧಮ೯ದ ಜೊತೆ ಯೋಗಕ್ಕೂ ಆದ್ಯತೆ ನೀಡಿರುವುದು ಪ್ರಶಂಸನೀಯ, ಧರ್ಮಸ್ಥಳದಿಂದ ಮಂಜುನಾಥ ದೇವಸ್ಥಾನ ಸೌದಿ ಅರೇಬಿಯಾದಲ್ಲಿ ಆಗಲಿ ಎಂದು ಆಶಿಸಿದರು.
,ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಅಶ್ವಥ್ ಹೆಗ್ಡೆ ಮತ್ತು ಡಾ. ಅಚ್ಚುತ್ತನ್ ಈಶ್ವರನ್ ಅವರಿಗೆ ಅಲುಮಿನಿ ಎಕ್ಸೆಲೆನ್ಸ್ ಆವಾಡ್೯ -2024 ಪ್ರಶಸ್ತಿ ಹಾಗೂ ಕು. ಕುಶಿ ಹೆಚ್. ಇವರಿಗೆ ಯೋಗ ರತ್ನ -2024 ಪ್ರಶಸ್ತಿ ಪ್ರಧಾನ ಮಾಡಲಾಯಿತು. ವೇದಿಕೆಯಲ್ಲಿ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಧಾಕರ ಕೊಟ್ಟಾರಿ ಉಪಸ್ಥಿತರಿದ್ದರು.
ಕು. ಭಾಷಿಣಿ ಮತ್ತು ಬಳಗದವರು ಪ್ರಾಥ೯ನೆ ಬಳಿಕ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ. ಸುಜಾತ ಯೋಗ ತರಬೇತಿ ಬಗ್ಗೆ ವರದಿ ನೀಡಿ ಈ ಬಾರಿ ಜಿಲ್ಲೆಯಲ್ಲಿ 4,489 ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಯೋಗ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಯೋಗ ರತ್ನ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.
ಡಾ. ಅನನ್ಯ ಜೈನ್ ಮತ್ತು ಡಾ. ಕೃತಿಕಾ‌ ರಾಮಸ್ವಾಮಿ ಕಾಯ೯ಕ್ರಮ ನಿರೂಪಿಸಿದರು. ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು.

Related posts

ಜು.23 ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪ‌ರ್ ಮತ್ತು ಕೃಷಿ ಮಜ್ದೂರ್ ಸಂಘದ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್. ಸ್ಥಾಪನಾ ದಿನಾಚರಣೆ

Suddi Udaya

ನೇತ್ರಾವತಿ ನದಿಗೆ ಬಿದ್ದು ಸಾಯುತ್ತೇನೆ ಎಂದು ಪತಿಗೆ ಕರೆ ಮಾಡಿದ್ದ ಬೆಂಗಳೂರಿನ ಮಹಿಳೆಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ

Suddi Udaya

ಕುವೆಟ್ಟು ಗ್ರಾ.ಪಂ. ನಿಂದ ಸಹಾಯಧನ ಹಸ್ತಾಂತರ

Suddi Udaya

ಮಾರಾಟ ತೆರಿಗೆ ಹೆಚ್ಚಿಸಿ ಪೆಟ್ರೋಲ್ ಡೀಸಿಲ್ ದರ ಏರಿಸಿದ‌ ರಾಜ್ಯದ ಕಾಂಗ್ರೇಸ್ ಸರಕಾರದ ನಡೆ ಖಂಡನೀಯ ಸಿಪಿಐಎಂ ಬೆಳ್ತಂಗಡಿ ತಾಲೂಕು ಮುಖಂಡ ನ್ಯಾಯವಾದಿ ಬಿ.ಎಂ.ಭಟ್

Suddi Udaya

ಗುರುವಾಯನಕೆರೆ ಮಂಜುಬೆಟ್ಟುವಿನಲ್ಲಿ ಎಫ್.ಎಮ್ ಗಾರ್ಡನ್ & ಕನ್ವೆನ್ಶನ್ ಎ.ಸಿ ಸಭಾಂಗಣ ಉದ್ಘಾಟನೆ

Suddi Udaya

ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ -123 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ ಪ್ರವೇಶ -52 ವಷ೯ಗಳಲ್ಲಿ ಒಟ್ಟು 12,900 ಮಂದಿಯ ವಿವಾಹ

Suddi Udaya
error: Content is protected !!