ಉಜಿರೆ : “ಯೋಗವು ಮನುಷ್ಯನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿನಿತ್ಯವೂ ಯೋಗ ಮಾಡುವ ಮೂಲಕ ಅರೋಗ್ಯ ವೃದ್ಧಿಸಬಹುದು” ಎಂದು ಉಜಿರೆ ಎಸ್.ಡಿ.ಎಮ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಉಪನ್ಯಾಸಕ ಹಾಗೂ ಮೆಡಿಕಲ್ ಆಫೀಸರ್ ಆಗಿರುವ ಡಾ.ಪ್ರಣವ್ ಹೇಳಿದರು.
ಇವರು ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಜೂ 21 ರಂದು ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ತಿಳಿಸಿದರು.
ವೇದಿಕೆಯಲ್ಲಿ ಇನ್ನೊರ್ವ ಅತಿಥಿ ಉಜಿರೆ ಎಸ್.ಡಿ.ಎಮ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಕ್ಲಿನಿಕಲ್ ಯೋಗ ವಿಭಾಗದ ಎಮ್.ಡಿ ಆಗಿರುವ ಡಾ. ವೈ.ಆರ್ ಶ್ರೀರಂಗ, ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಹಾಗೂ ಉಜಿರೆ ಎಸ್.ಡಿ.ಎಮ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಾದ ಸಾಂಚಿ ಮತ್ತು ಅನನ್ಯ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಸವಿತಾ ವೇದ ಪ್ರಕಾಶ್ ನಿರೂಪಿಸಿ ಶಿಕ್ಷಕಿ ಶಮೀಮ್ ವಂದಿಸಿದರು.