April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಗುರುವಾಯನಕೆರೆ, ಸಂತೆಕಟ್ಟೆ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ: ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವಜ್ರ ಮಹೋತ್ಸವದ
ಸಂಭ್ರಮಾಚರಣೆ 2024 ಇದರ ಪ್ರಯುಕ್ತ ಜೂ.21 ರಂದು ಗುರುವಾಯನಕೆರೆ, ಸಂತೆಕಟ್ಟೆ ಬೆಳ್ತಂಗಡಿ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜರುಗಿತು.


ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ ಪುತ್ತೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾದ ದಿವಾಕರ ಆಚಾರ್ಯ, ನಿವೃತ್ತ ಪ್ರಾಂಶುಪಾಲರು ಮೋಹನ್ ದಾಸ್.ಎ ಧಾರ್ಮಿಕ ಚಿಂತಕರು, ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾ (ರಿ.) ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ , ಮುಖೇಶ್ ಯೋಗೀಶ್ ಆರ್ ನಾಯಕ್ ಕಟ್ಟಡ ಮಾಲಿಕರು, ನಿರ್ದೇಶಕ ಮಂಜುನಾಥ ಆಚಾರ್ಯ , ಶಾಖಾ ವ್ಯವಸ್ಥಾಪಕರು ಪ್ರಶಾಂತ್ ಹೆಚ್ ಆಚಾರ್ಯ ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ‌ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಪರಿಸರದ‌ ಬಗ್ಗೆ ಮುಖ್ಯ ಅತಿಥಿಯಾದ ದಿವಾಕರ ಆಚಾರ್ಯ ನಿವೃತ್ತ ಪ್ರಾಂಶುಪಾಲರು “ಪರಿಸರವನ್ನು ನಾಶ ಮಾಡಿದರೆ ಕಾಲ ಕಾಲಕ್ಕೆ ಸರಿಯಾದ ಮಳೆ ಬರುವುದಿಲ್ಲ, ಕಾಲ ಕಾಲಕ್ಕೆ ಮರಗಳಲ್ಲಿ ಹಣ್ಣುಗಳು ಇರುವುದಿಲ್ಲ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಕಾಣುತ್ತಿದ್ದೇವೆ. ಈಗಿನ ಮಕ್ಕಳು ಗಿಡವನ್ನು ನೆಟ್ಟು ಅದನ್ನು ಪಾಲಿಸಿ ಫೋಷಣೆ ಮಾಡಿ ದೊಡ್ಡ ಮರವನ್ನಾಗಿ ಬೆಳೆಸಬೇಕು”. ಅದರ ಜವಾಬ್ದಾರಿ ನಮಗೆಲ್ಲರಿಗಿರಬೇಕು ಮತ್ತು ಪರಿಸರವನ್ನು ಉಳಿಸಿ ನಾವೆಲ್ಲರು ಕೈ ಜೋಡಿಸೋಣ ಎಂದು ಪರಿಸರದ ಮಹತ್ವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಸಂಸ್ಥೆ ಬೆಳೆದು ಬಂದ ದಾರಿ, ಅಭಿವೃದ್ಧಿ, ಗ್ರಾಹಕರಿಗೆ ನೀಡುವ ಸವಲತ್ತು ಮತ್ತು ವನಮಹೋತ್ಸವದ ಬಗ್ಗೆ ಮಾತನಾಡಿದರು.

ಮೋಹನ್ ದಾಸ್.ಎ. ಧಾರ್ಮಿಕ ಚಿಂತಕರು ಇವರು “ಒಂದು ಉತ್ತಮವಾದ ಕಾರ್ಯಕ್ರಮವೆಂದರೆ ವನಮಹೋತ್ಸವ” ಎಂದು ತಿಳಿಸಿದರು.

ಲಾಯಿಲ ವಿಶ್ವಕರ್ಮಾಭ್ಯುದಯ ಸಭಾ (ರಿ.) ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ಪರಿಸರದ ಬಗ್ಗೆ “ಮರವನ್ನು ನೆಡುವುದು ಮಾತ್ರವಲ್ಲ ಅದಕ್ಕೆ ಬೇಸಿಗೆ ಕಾಲದಲ್ಲಿ ನೀರನ್ನು ಹಾಕಿ ಸಂರಕ್ಷಿಸಬೇಕೆಂದು” ತಿಳಿಸಿದರು.

ನಿರ್ದೇಶಕ ಮಂಜುನಾಥ ಆಚಾರ್ಯ ವನಮಹೋತ್ಸವದ ಬಗ್ಗೆ ಹಿತನುಡಿಗಳನ್ನು ನುಡಿದರು.

ಕಾರ್ಯಕ್ರಮದ‌ಲ್ಲಿ ಜನತಾ ನಿಧಿ ಸಂಗ್ರಾಹಕರು, ಚಿನ್ನಾಭರಣ ಮೌಲ್ಯಮಾಪಕರು, ಠೇವಣಿದಾರರು ಹಾಗೂ ಸದಸ್ಯ ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯೆ ಕುಮಾರಿ ರಕ್ಷಿತಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಂಸ್ಥೆಯ ಸಿಬ್ಬಂದಿ ಸುಶಾಂತ ಆಚಾರ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಶಾಖಾ ವ್ಯವಸ್ಥಾಪಕ ಪ್ರಶಾಂತ್ ಹೆಚ್ ಆಚಾರ್ಯ ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಸಿಬ್ಬಂದಿ ಗುರುಪ್ರಸಾದ್ ಧನ್ಯವಾದವಿತ್ತರು.

Related posts

ಮಚ್ಚಿನ: ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಯೋಗ ತರಬೇತಿಯ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಆಚರಣೆ

Suddi Udaya

ಗೇರುಕಟ್ಟೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್

Suddi Udaya

30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ

Suddi Udaya

ಬೆಳ್ತಂಗಡಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆ: ರೂ. 27.92 ಲಕ್ಷ ನಿವ್ವಳ ಲಾಭ, ಶೇ. 8 ಡಿವಿಡೆಂಟ್

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ