24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬೆಳ್ತಂಗಡಿ, ಜೂನ್ 21: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು 10 ದಿನಗಳ ಯೋಗ ತರಬೇತಿ ಶಿಬಿರ ಜೂ.21ರಂದು ಸಂಪನ್ನಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿ, ಎಸ್ ಡಿ ಎಂ ಪ್ರಕೃತಿ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಎಂ.ಡಿ ವಿದ್ಯಾರ್ಥಿ ಡಾ. ಐಶ್ವರ್ಯ ಮಾತನಾಡಿ, ದಿನ ನಿತ್ಯದ ಒತ್ತಡ ನಿವಾರಣೆಗೆ ಯೋಗ ಸಹಕಾರಿಯಾಗಿದೆ. ಪ್ರತಿ ನಿತ್ಯ ಯೋಗಾಭ್ಯಾಸ ಮಾಡಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಡಾ. ಐಶ್ವರ್ಯ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.  

ತರಬೇತಿ ಪಡೆದ 110 ವಿದ್ಯಾರ್ಥಿಗಳು ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಮತ್ತು ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮ ಸಂಯೋಜಿಸಲಾಯಿತು. ಶಿಕ್ಷಕರಾದ ಮುರಳಿ ಸ್ವಾಗತಿಸಿ, ಮಂಜುನಾಥ್ ವಂದಿಸಿದರು. ಶಿಕ್ಷಕ ಶ್ರೇಯಾಂಸ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related posts

ಭೂ ಸೇನೆಯಿಂದ ನಿವೃತ್ತಿಗೊಂಡ ಪದ್ಮುಂಜ ಗಣೇಶ್ ಶೆಟ್ಟಿ ರವರಿಗೆ ಪದ್ಮುಂಜ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ವತಿಯಿಂದ ಸನ್ಮಾನ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಾಮೂಹಿಕ ವಿವಾಹ ನಿಶ್ಚಿತಾರ್ಥ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾಯನಕೆರೆ ಶಕ್ತಿ ನಗರದ ಜಂಕ್ಷನ್ ನಲ್ಲಿ ನಾಮಫಲಕ ಅಳವಡಿಕೆ

Suddi Udaya

ಮಂಗಳೂರು ಮಾಂಡೋವಿ ಮೋಟಾರ್ಸ್ ಉದ್ಯೋಗಿ, ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ ಬೈಕ್ ಅಪಘಾತದಲ್ಲಿ ಮೃತ್ಯು

Suddi Udaya

ವಿಧಾನ ಪರಿಷತ್ತು ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ರವರಿಂದ ನಾಮಪತ್ರ ಸಲ್ಲಿಕೆ

Suddi Udaya

ಮದ್ದಡ್ಕ: ಬದ್ಯಾರ್ ನಿವಾಸಿ ಸತೀಶ್ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya
error: Content is protected !!