23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕ ಸಂಭ್ರಮಾಚರಣೆ

ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕದ ಸಂಭ್ರಮಾಚರಣೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಜಿರೆ ತಾಲೂಕು ಸಂಪರ್ಕ ಪ್ರಮುಖ್, ಶಿವಪ್ರಸಾದ ಸುರಿಯ ವಿದ್ಯಾರ್ಥಿಗಳಿಗೆ ಶಿವಾಜಿ ಮಹಾರಾಜರ ಸಾಧನೆಗಳ ಅವರ ಪರಾಕ್ರಮಗಳ ಬಗ್ಗೆ ಹಾಗೂ ಅವರು ಸ್ವರಾಜ್ಯಕೊಸ್ಕರ ಹೋರಾಟ ಮಾಡಿದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಚಂದ್ರ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜಾಲಿ ಓ ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಕನ್ನಡ ಉಪನ್ಯಾಸಕಿ ಶ್ರೀಮತಿ ವಸಂತಿ ವೆಂಕಟೇಶ್ ಸ್ವಾಗತಿಸಿ ವಿದ್ಯಾರ್ಥಿ ಧನುಷ್ ಕೆ ಎನ್ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಮುಂಡಾಜೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

Related posts

ಕನ್ಯಾಡಿ : ಹಿಂದೂ ಸಂಘಟಕರಿಂದ ಹನುಮಾನ್ ಚಾಲೀಸಾ ಪಠಣ

Suddi Udaya

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

Suddi Udaya

ಸ್ಯಾಮ್ಸಂಗ್ ಕಂಪೆನಿಯ ಹೊಸ ವಿನ್ಯಾಸದ ನವೀನ ಮಾದರಿಯ ಗ್ಯಾಲಕ್ಸಿ S24 ಅಲ್ಟ್ರಾ ಮಾರುಕಟ್ಟೆಗೆ ಬಿಡುಗಡೆ

Suddi Udaya

ಮಳೆಗೆ ಕೊಚ್ಚಿ ಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ

Suddi Udaya

ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆ ಪ್ರಭಾರ ಅಧ್ಯಕ್ಷರಾಗಿ ಪೂರ್ಣಾಕ್ಷ ಮುಂದುವರಿಕೆ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಕುಟುಂಬೋತ್ಸವ

Suddi Udaya
error: Content is protected !!