ನಾರಾವಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಗುರುವಾಯನಕೆರೆ ತಾಲೂಕಿನ ನಾರಾವಿ ವಲಯದ ನಾರಾವಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಗಿಡ ನೆಡುವ ಕಾರ್ಯಕ್ರಮವನ್ನು ನಾರಾವಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉದಯ ಹೆಗ್ಡೆ ಹಾಗೂ ಕೃಷಿ ಅಧಿಕಾರಿ ಕೃಷ್ಣ ನೆರವೇರಿಸಿದರು.
ಪರಿಸರ ಜಾಗೃತಿ ಕಾರ್ಯಕ್ರಮವನ್ನು ಅಧ್ಯಕ್ಷ ಸದಾನಂದ ಬಂಗೇರ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಭಾಕರ ಪೂಜ್ಯ ಖಾವಂದರ ಬಗ್ಗೆ ಹಾಗೂ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಒಳ್ಳೆಯ ರೀತಿಯಲ್ಲಿ ನಡೆಯುತ್ತಾ ಬಂದಿರುವ ಬಗ್ಗೆ ತಿಳಿಸಿ ನಮ್ಮ ಶಾಲೆಯಲ್ಲಿ ಕೂಡ ಈ ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ತಾಲೂಕು ಕೃಷಿ ಅಧಿಕಾರಿ ಕೃಷ್ಣ ರಾಜ್ಯಾದ್ಯಂತ ಎಲ್ಲಾ ಕಡೆಗಳಲ್ಲಿ ಪರಿಸರ ಕಾರ್ಯಕ್ರಮ ಯೋಜನೆ ಹಾಗೂ ಶಾಲೆಯ ವತಿಯಿಂದ ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು. ಮಕ್ಕಳಿಗೆ ಪರಿಸರ ಸಂರಕ್ಷಣೆ ಯಾವ ರೀತಿಯಲ್ಲಿ ಮಾಡಬೇಕು ಎಂದು ತಿಳಿಸಿದರು. ಅಂತರ್ಜಲ ಮಟ್ಟ ನೀರಾವರಿ ಕಾರ್ಯಕ್ರಮ ನಡೆಸುವ ಬಗ್ಗೆ ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು. ನಂತರ ಗ್ರಾಮ ಪಂಚಾಯತ್
ಮಾಜಿ ಉಪಾಧ್ಯಕ್ಷ ಉದಯ ಹೆಗ್ಡೆ ನಾನು ಬಾಲ್ಯದಿಂದಲೇ ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ನೋಡಿಕೊಂಡು ಬಂದಿದ್ದೇನೆ. ಹಾಗೂ ಪ್ರತಿ ವರ್ಷ ಹಲವು ಕಾರ್ಯಕ್ರಮಗಳು ಯೋಜನೆಯಿಂದ ಮಾಡುತ್ತಾ ಬಂದಿರುವ ಬಗ್ಗೆ ತಿಳಿಸಿದರು. ಯೋಜನೆಯ ವತಿಯಿಂದ ದೊರೆತಿರುವ ಅನುದಾನಗಳ ಬಗ್ಗೆ ತಿಳಿಸಿದರು. ಎಲ್ಲರಿಗೂ ಶುಭ ಹಾರೈಸಿದರು. ಮಕ್ಕಳಿಗೆ ವಿವಿಧ ಪರಿಸರದ ಬಗ್ಗೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ನಂತರ ಅಧ್ಯಕ್ಷ ಸದಾನಂದ ಬಂಗೇರ ಇವರು ಮಕ್ಕಳಿಗೆ ಹುಟ್ಟುಹಬ್ಬ ಆಚರಣೆ ಗಿಡ ನೆಡುವ ಮೂಲಕ ಮಾಡುವಂತೆ ತಿಳಿಸಿದರು.
ಪರಿಸರ ಜಾಗೃತಿ ಕಾರ್ಯಕ್ರಮಕೆ ಸಹಕರಿಸಿದ ಶಾಲಾ ಸಮಿತಿಯವರಿಗೆ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ಸದಸ್ಯ ಅನಂದ ಶೆಟ್ಟಿ, ವಲಯದ ಮೇಲ್ವಿಚಾರಕಿ ದಮಯಂತಿ, ಶಾಲಾ ಶಿಕ್ಷಕರು, ಪೋಷಕರು ,ಸೇವಾಪ್ರತಿನಿಧಿಗಳು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶಿಲ್ಪಾ ನಿರೂಪಿಸಿ. ಕಾರ್ಯಕ್ರಮದ ಸೇವಾ ಪ್ರತಿನಿಧಿ ಹರಿಣಾಕ್ಷಿ ಧನ್ಯವಾದವಿತ್ತರು.