September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮರೋಡಿ ಪಲಾರಗೋಳಿ ಆದಿಶಕ್ತಿ ಸೇವಾ ಸಮಿತಿಯಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮರೋಡಿ ಪಲಾರಗೋಳಿ ಆದಿಶಕ್ತಿ ಸೇವಾ ಸಮಿತಿಯಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕೇಳ-ಬೊಟ್ಟ ಯಜ್ಞನಾರಾಯಣ ಭಟ್, ಇವರ ಪೌರೋಹಿತ್ಯದಲ್ಲಿ ಸೆ.7 ರಂದು ಪಲಾರಗೋಳಿ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಮಹಾಗಣಪತಿ ದೇವರ ಪ್ರತಿಷ್ಠೆ, ಭಜನಾ ಕಾರ್ಯಕ್ರಮ, ಗಣಹೋಮ, ಸಾರ್ವಜನಿಕ ಅನ್ನಸಂತರ್ಪಣೆ, ಲಘು ಉಪಹಾರ, ಸಂಧ್ಯಾಪೂಜೆ, ಮಹಾಪೂಜೆ, ವೈಭವದ ವಿಗ್ರಹ ವಿಸರ್ಜನಾ ಮೆರವಣಿಗೆ ಮಧ್ಯಾಹ್ನ ಗಂಟೆ 2ರಿಂದ ಹಗ್ಗಜಗ್ಗಾಟ, ಪುರುಷರು ಮತ್ತು ಮಹಿಳೆಯರ ವಿಭಾಗ (ಮುಕ್ತ ವಿಭಾಗ), ಸಂಜೆ ಗಂಟೆ 4 ರಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ 6.30ರಿಂದ “ಮುತ್ತು ಮನಿಪುಜೆ” ತುಳು ಹಾಸ್ಯಮಯ ನಾಟಕ ನಡೆಯಲಿದೆ.


ಸಂಜೆ ಗಂಟೆ 5.೦೦ಕ್ಕೆ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ರತ್ನಾಕರ ಬುಣ್ಣನ್ ಅಧ್ಯಕ್ಷರು, ಗ್ರಾ. ಪಂ., ಮರೋಡಿ, ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಯಂತ್ ಕೋಟ್ಯಾನ್ ಉಪಾಧ್ಯಕ್ಷರು, ಬಿಜೆಪಿ ದ.ಕ. ಜಿಲ್ಲೆ, ಟಿ.ಕೆ. ವೆಂಕಟರಾವ್ ನಿವೃತ್ತ ಅಧ್ಯಾಪಕರು, ಸುಮುಖ ಮರೋಡಿ, ರವೀಂದ್ರ ಅಂಚನ್ ಜಿಲ್ಲಾ ಮುಖ್ಯಸ್ಥರು, ಎಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ, ಶ್ರೀಮತಿ ಪದ್ಮಶ್ರೀ ಜೈನ್ ಮಾಜಿ ಅಧ್ಯಕ್ಷರು, ಗ್ರಾ. ಪಂ., ಮರೋಡಿ, ಉಮೇಶ್ ಸಾಲ್ಯಾನ್ ಸದಸ್ಯರು, ಗ್ರಾ.ಪಂ. ಮರೋಡಿ, ಶ್ರೀಮತಿ ಸುನಂದ ಸದಸ್ಯರು, ಗ್ರಾ.ಪಂ. ಮರೋಡಿ ಭಾಗವಹಿಸಲಿರುವರು.


Related posts

ಫುಟ್ಬಾಲ್ ಪಂದ್ಯಾಟ: ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ: ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ

Suddi Udaya

ಕಲ್ಲೇರಿ: ನಿಸರ್ಗ ರಿಕ್ಷಾ ಚಾಲಕ – ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ವತಿಯಿಂದ ಕನ್ಯಾಡಿಯ ನಾರಾಯಣ ಶೆಟ್ಟಿಗಾರ ರವರಿಗೆ ವಾತ್ಸಲ್ಯ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ವೇಣೂರು ಭಗವಾನ್ ಶ್ರೀ ಬಾಹಬಲಿಯ ಮಹಾ ಮಜ್ಜನ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ, ಅಟ್ಟಳಿಗೆ ಹಾಗೂ ಇತರ ಕಾಮಗಾರಿ ವೀಕ್ಷಣೆ

Suddi Udaya
error: Content is protected !!