37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮ: ಪೂರ್ವ ಅಧ್ಯಕ್ಷರಿಗೆ ಮತ್ತು ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಸುವರ್ಣ ಸಂಭ್ರಮವು ಉಜಿರೆ ಶ್ರೀ ಕೃಷ್ಣಾನುಗ್ರಹದಲ್ಲಿ ಜೂ. 23 ರಂದು ನಡೆಯಿತು.
ಸುವರ್ಣ ಸಂಭ್ರಮಸ್ತವವನ್ನು ಸ್ಥಾಪಕ ಸದಸ್ಯರಾದ ಎಂ ಜಿ ಶೆಟ್ಟಿ, ವಿಶ್ವನಾಥ್ ಆರ್ ನಾಯಕ್, ಉದ್ಯಮಿ ಸದಾಶಿವ ಶೆಟ್ಟಿ ಉಜಿರೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಪ್ರಥಮ ಮಹಿಳೆ ಸವಿತಾ ಶೆಟ್ಟಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲಯನ್ಸ್ ಜಿಲ್ಲೆ ರಾಜ್ಯಪಾಲರಾದ ಮೇಲ್ವಿನ್ ಡಿಸೋಜ, ಲಯನ್ಸ್ ಪಾಂತ್ಯ ಅಧ್ಯಕ್ಷ ಹೆರಾಲ್ಡ್ ತಾವ್ರೋ ಮೂಡಬಿದ್ರೆ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ವಲ್ಟ್ ಲಯನ್ಸ್ ಜಿಲ್ಲಾ ಸಂಪುಟ ಕೋಶಾಧಿಕಾರಿ ಸುಧಾಕರ ಭಂಡಾರಿ, ನಿಕಟ ಪೂರ್ವ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ,. ನಿಯೋಜಿತ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಟ್ಟಡ ಸಮಿತಿಯ ಅಧ್ಯಕ್ಷ ರಾಜು ಶೆಟ್ಟಿ, ಕಾರ್ಯದರ್ಶಿ ಅನಂತ ಕೃಷ್ಣ, ಕೋಶಾಧಿಕಾರಿ ಸುಭಾಷಿಣಿ, ಲಿಯೊ ಕ್ಲಬ್ ಅಧ್ಯಕ್ಷೆ ಅಪ್ಸರ ಉಪಸ್ಥಿತರಿದರು.

ಸಂಜೆ ಎಸ್.ಡಿ.ಎಮ್ ಕಾಲೇಜಿನಿಂದ ಉಜಿರೆ ಕೃಷ್ಣ ಅನುಗ್ರಹ ಸಭಾಂಗಣ ತನಕ ಚೆಂಡೆ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಚಿನ್ನರ ಚಿಲಿಪಿಲಿ, ಹಾಡಿನ ಝೇಂಕಾರ, 45 ಪೂರ್ವ ಅಧ್ಯಕ್ಷರಿಗೆ ಸನ್ಮಾನ, 5 ಸಾಧಕರಾದ ಲಕ್ಷ್ಮಿ ಗ್ರೂಪ್ ಮೋಹನ್ ಕುಮಾರ್, ಗೋಪಾಲ ಪಣಿಕ್ಕರ್., ಗೋಪಾಲಕೃಷ್ಣ ಕಾಂಚೋಡು, ಬಿ ಎಲ್ ಗಣೇಶ್, ರಾಮಚಂದ್ರ ಶೆಟ್ಟಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲಯನ್ಸ್ ಜಿಲ್ಲೆಯ ರಾಜ್ಯಪಾಲರಾದ ಮೇಲ್ವಿನ್ ಡಿಸೋಜ
ಪ್ರಾಂತೀಯ ಅಧ್ಯಕ್ಷ ಹೆರಾಲ್ಡ್ ತಾವ್ರೋ, ಲಯನ್ಸ್ ಜಿಲ್ಲೆಯ ಸಂಪುಟ ಕಾರ್ಯದರ್ಶಿ ಓಸ್ವಲ್ಟ್, ಲಯನ್ಸ್ ಜಿಲ್ಲೆಯ ಸಂಪುಟ ಕೋಶಾಧಿಕಾರಿ ಸುಧಾಕರ ಭಂಡಾರಿ ಇವರಿಗೆ ಸನ್ಮಾನಿಸಲಾಯಿತು.


ಸಂಜೆ ಪುದರ್ ದಿ ದಾಂಡ ತುಳು ಹಾಸ್ಯಮಯ ನಾಟಕ ನಡೆಯಿತು.

Related posts

ಧರ್ಮಸ್ಥಳ: ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣ

Suddi Udaya

ಕಾರಿಂಜ ವನಶಾಸ್ತಾರ, ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಚಪ್ಪರ ಮೂಹೂರ್ತ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಂಗಳೂರಿನ ಸಪ್ನ ಪುಸ್ತಕ ಮಳಿಗೆಯಲ್ಲಿ ಪದ್ಮಲತಾ ಮೋಹನ್ ನಿಡ್ಲೆ ಅವರ ಕಾದಂಬರಿ ‘ಮೃತ್ಯು ಚುಂಬನ’ ಕೃತಿ ಬಿಡುಗಡೆ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya

ಇಂದಬೆಟ್ಟು : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೊಲೆರೋ

Suddi Udaya

ಐತಿಹಾಸಿಕ ಕಾಜೂರು ಮಖಾಂ ಉರೂಸ್ ಉದ್ಘಾಟನೆ: ಅಲ್ಲಾಹನ‌ ನೋಟ ಹೃದಯಕ್ಕೆ ಮಾತ್ರ; ವೈಎಂಕೆ ಡಾ. ಅಬ್ದುಲ್ಲ ಕುಂಞಿ

Suddi Udaya
error: Content is protected !!