ಪುಂಜಾಲಕಟ್ಟೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿ ಸರಕಾರಕ್ಕೆ ಚುನಾವಣೆಯನ್ನು ನಡೆಸಲಾಯಿತು.
ಚುನಾವಣಾ ಪ್ರಕ್ರಿಯೆಯನ್ನು ತಂತ್ರಜ್ಞಾನವನ್ನು ಬಳಸಿ ನೆರವೇರಿಸಲಾಯಿತು. ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಮತ್ತು ವಿದ್ಯಾರ್ಥಿ ಪ್ರತಿಪಕ್ಷ ನಾಯಕ ಹಾಗೂ ಉಪನಾಯಕ ಹುದ್ದೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸರಳತೆಯೊಂದಿಗೆ ಚುನಾವಣಾ ಪದ್ಧತಿಯಂತೆ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂದೆ ಪಡೆಯಲು ಅವಕಾಶ, ಅಂತಿಮ ಕಣದಲ್ಲಿರುವವರ ಸ್ಪರ್ದಾಳುಗಳ ಪಟ್ಟಿ, ಈ ರೀತಿ ಎಲ್ಲಾ ಹಂತಗಳನ್ನು ಕ್ರಮವತ್ತಾಗಿ ನಡೆಸಲಾಯಿತು. ಬಳಿಕ ವಿಜೇತ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಸಂಸ್ಥೆಯ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ಯವರು ಪ್ರಮಾಣವಚನವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಆ ಬಳಿಕ ವಿದ್ಯಾರ್ಥಿ ಸರಕಾರ ಮಾಡಬೇಕಾದ ಕರ್ತವ್ಯಗಳ ಬಗ್ಗೆ ವಿವರವಾಗಿ ವಿಚಾರಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರ ಬಳಗ ಸರ್ವ ರೀತಿಯ ಸಹಕಾರವನ್ನು ನೀಡಿದರು.
ಶಾಲಾ ಮುಖ್ಯಮಂತ್ರಿಯಾಗಿ ಸಂಜನಾ 10ಇ, ಉಪಮುಖ್ಯಮಂತ್ರಿಯಾಗಿ ಡೀತಮ್ 9 ಎ, ಕ್ರೀಡಾ ಮಂತ್ರಿಯಾಗಿ ನಿಖಿಲ್ ದೇವಾಡಿಗ10 ಸಿ, ಉಪ ಕ್ರೀಡಾಮಂತ್ರಿಯಾಗಿ ಶಶಾಂಕ್ 9 ಎ, ಸ್ವಚ್ಛತಾ ಮಂತ್ರಿಯಾಗಿ ಧನುಷ್ 10 ಸಿ , ಉಪ ಸ್ವಚ್ಛತಾ ಮಂತ್ರಿಯಾಗಿ ರೇಖಾ 9ಎ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿಯಾಗಿ ಸುಧೀಶಾ 10 ಡಿ, ಉಪಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮಂತ್ರಿಯಾಗಿ ಪ್ರೀತಮ್ ಕೆ ವಿ 9 ಬಿ, ಆರೋಗ್ಯ ಮತ್ತು ಆಹಾರ ಮಂತ್ರಿಯಾಗಿ ನಿಖಿಲ್ 10 ಬಿ, ಉಪ ಆರೋಗ್ಯ ಮತ್ತು ಆಹಾರ ಮಂತ್ರಿಯಾಗಿ 9 ಎ, ವಾರ್ತಾ ಮಂತ್ರಿಯಾಗಿ ಪೂಜಾ 10 ಈ,
ಉಪ ವಾರ್ತಾ ಮಂತ್ರಿಯಾಗಿ ಸಂಸ್ಕೃತಿ ನಾಯಕ್ 9 ಇ ಇವರು ಆಯ್ಕೆಯಾಗಿರುತ್ತಾರೆಂದು ಸಂಸ್ಥೆಯ ಮುಖ್ಯಸ್ಥ ಉದಯ್ ಕುಮಾರ್ ಬಿ ತಿಳಿಸಿದರು.