ಬೆಳ್ತಂಗಡಿ : ಇತೀಚೆಗೆ ನಡೆದ ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿ ಮತ್ತು ಈವರೆಗಿನ ಕಾರ್ಯಕ್ರಮಗಳಿಗೆ ಮನ್ನಣೆ ಹಾಗೂ ಸ್ಪರ್ಧಾ ಚಟುವಟಿಕೆಗಳಿಗೆ ಸಮಗ್ರ ಪ್ರಶಸ್ತಿ ಪಡೆದ ಸಂಭ್ರಮವನ್ನು ಜೆಸಿಐ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಜಿತ್ ಎಚ್ ಡಿ ವಹಿಸಿ, ಸ್ವಾಗತಿಸಿ ಮಧ್ಯಂತರ ಸಮ್ಮೇಳನದಲ್ಲಿ ಅಭೂತಪೂರ್ವ ಸಾಧನೆಗೈಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಸಮ್ಮೇಳನದ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮಧ್ಯಂತರ ಸಮ್ಮೇಳನದಲ್ಲಿ ಭಾಗವಹಿಸಲು ಸಹಕರಿಸಿದ ಪೂರ್ವಧ್ಯಕ್ಷರಾದ ಸಂತೋಷ್ ಕುಮಾರ್ ಜೈನ್, ಅಭಿನಂದನ್ ಹರೀಶ್ ಕುಮಾರ್, ತುಕರಾಮ್, ವಸಂತ ಶೆಟ್ಟಿ ಶ್ರದ್ದಾ, ಕಿರಣ್ ಕುಮಾರ್ ಶೆಟ್ಟಿ, ಸ್ವರೂಪ್ ಶೇಖರ್, ಪ್ರಸಾದ್ ಬಿ ಎಸ್ ರಮ್ಯಾ, ಯವರಿಗೆ ಧನ್ಯವಾದವನ್ನು ಸಲ್ಲಿಸಲಾಯಿತು.
ಅಭಿನಂದನಾ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿದ ಪೂರ್ವಧ್ಯಕ್ಷರಾದ ಚಿದಾನಂದ ಇಡ್ಯಾ, ಸಂತೋಷ್ ಪಿ ಕೋಟ್ಯಾನ್ ಹಾಗೂ ಎಲ್ಲಾ ಕಾರ್ಯಾಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ನಿಕಟಪೂರ್ವಧ್ಯಕ್ಷರಾದ ಶಂಕರ್ ರಾವ್ ಹಾಗೂ ಘಟಕದ ಉಪಾಧ್ಯಕ್ಷರುಗಳು ಮತ್ತು ಮಧ್ಯಂತರ ಸಮ್ಮೇಳನದ ಸಂಯೋಜಕರುಗಳಾದ ಚಂದ್ರಹಾಸ್ ಮತ್ತು ಆಶಾ ಪ್ರಶಾಂತ್ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪೂರ್ವಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಪ್ರಶಾಂತ್ ಲಾಯಿಲ, ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಶೀತಲ್ ಜೈನ್, ಸುಧೀರ್ ಕೆ ಎನ್, ಶೈಲೇಶ್, ಜೊತೆ ಕಾರ್ಯದರ್ಶಿಗಳಾದ ರಾಮಕೃಷ್ಣ, ಪ್ರಮೋದ್, ಸದಸ್ಯರುಗಳಾದ ರಕ್ಷಿತ್ ಅಂಡಿಂಜೆ, ಸ್ವಾತಿ ಪ್ರೀತೇಶ್, ಸುಧೀರ್ ಜೈನ್, ಚಿತ್ರಪ್ರಭಾ, ಸುಶೀಲ್ ಕುಮಾರ್, ದೀಪಕ್ ಎಚ್ ಡಿ, ಅನನ್ಯ ಜೈನ್, ಸರಿತಾ ಪ್ರವೀಣ್, ಜಯರಾಜ್ ನಡಕ್ಕರ, ರತ್ನಕರ್ ಬಳಂಜ,ವಿನಾಯಕ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಸದಸ್ಯರಾದ ದೀಪ್ತಿ ಕುಲಾಲ್, ಅನುಕ್ಷಾ ಶಿರ್ಲಾಲ್, ಶಿವಾನಿ, ತ್ರಿಷಾ, ನೇವಿಲ್, ತೇಜಸ್, ನಮ್ರತಾ ಇವರನ್ನು ಅಧ್ಯಕ್ಷರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ವೇದಿಕೆ ಆಹ್ವಾನವನ್ನು ಜೊತೆ ಕಾರ್ಯದರ್ಶಿಯಾದ ಪ್ರಮೋದ್ ಹಾಗೂ ಜೆಸಿವಾಣಿಯನ್ನು ಶಿವಾನಿಯವರು ವಾಚಿಸಿದರು.
ಕಾರ್ಯದರ್ಶಿಗಳಾದ ಅನುದೀಪ್ ಜೈನ್ ಧನ್ಯವಾದ ಸಲ್ಲಿಸಿದರು. ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.