24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತರಬೇತಿ ಮೇಲ್ವಿಚಾರಕರಿಂದ ಶ್ರಮ ವಿನಿಮಯ ಮಾಡುತ್ತಿರುವ ಮಾಯ ಕಾರ್ಯಕ್ಷೇತ್ರದ ಎಂಜಿರಿಗಿ ಸಂಘದ ಬೇಟಿ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಇದರ ವಿಸ್ತರಣಾ ಕಾರ್ಯಕ್ರಮನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಂತೆ ಗ್ರಾಮ ಕಲ್ಯಾಣದ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಗ್ರಾಮಗಳಲ್ಲಿ ಅತ್ಯುತ್ತಮವಾಗಿ ಅನುಷ್ಠಾನ ಮಾಡಲು ನೂತನವಾಗಿ ಆಯ್ಕೆಗೊಂಡ 45 ಜನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳಿಗೆ ಇದೀಗಾಗಲೇ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ 15 ದಿನದ ಕ್ಲಾಸ್ ತರಬೇತಿಯನ್ನು ನೀಡಿದ್ದು, ಬೆಳ್ತಂಗಡಿ ತಾಲೂಕಿನ ಮಾಯ ಗ್ರಾಮದ ಎಂಜಿರಿಗಿ ಪ್ರಗತಿಬಂಧು ಸಂಘದ ಭೇಟಿಯನ್ನು ಮಾಡಿ ಸದಸ್ಯರಿಂದ ಅವರ ಅನುಭವ ಹಂಚಿಕೆಯನ್ನು ಸಂವಾದದ ಮೂಲಕವಾಗಿ ಮಾಡಿಕೊಳ್ಳಲಾಯಿತು.

ಸದಸ್ಯರು ತಾನು ಝೀರೋದಿಂದ ಹೀರೋ ಆಗಿರುವ ಎಲ್ಲಾ ತನ್ನ ಅಭಿವೃದ್ಧಿಯ ಪಥವನ್ನು ಬಿಚ್ಚಿಟ್ಟರು, ಒಂದು ಸಮಯದಲ್ಲಿ ತನ್ನಲ್ಲಿ ಜಾಗ ಇದ್ದರೂ ಕೂಡ ಕೂಲಿ ಕೆಲಸವನ್ನು ಮಾಡಿ ಜೀವನ ಮಾಡುತ್ತಿದ್ದ ಈ ಸದಸ್ಯರು ತಾನು ಇದ್ದ ಪೂರ್ತಿ ಜಾಗದಲ್ಲಿ ಕೃಷಿಯನ್ನು ಮಾಡಿ ಉತ್ತಮವಾದ ಆದಾಯವನ್ನು ಪಡೆಯುತ್ತಿದ್ದು ಈಗ ತನ್ನ ಕಾಲ ಮೇಲೆ ನಿಂತು ಅಭಿವೃದ್ಧಿಯ ಬದುಕನ್ನು ಕಟ್ಟಿಕೊಂಡ ಎಲ್ಲ ಪರಿಗಳನ್ನು ವಿವರಿಸಿದರು.

ಈ ಸಂದರ್ಭ ಮಾಯ ಒಕ್ಕೂಟದ ಮಾಜಿ ಅಧ್ಯಕ್ಷರಾದ ಗಂಗಾಧರ ಸಾಲಿಯಾನ್, ಒಕ್ಕೂಟದ ನೂತನ ಅಧ್ಯಕ್ಷರಾದ ಕೃಷ್ಣಪ್ಪ ಗೌಡ, ಸದಸ್ಯರಾದ ಲಕ್ಷ್ಮಣ ಗೌಡ, ಬೆಲಿಯಪ್ಪ ನಾರ್ಣಪ್ಪ ಗೌಡ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕರಾದ ಜನಾರ್ದನ, ವಲಯ ಮೇಲ್ವಿಚಾರಕಿಯಾದ ಶ್ರೀಮತಿ ವನಿತಾ, ತಾಲೂಕಿನ ಕೃಷಿ ಅಧಿಕಾರಿಯಾದ ರಾಮ್ ಕುಮಾರ್ ಮಾರ್ನಾಡ್, ಸೇವಾಪ್ರತಿನಿಧಿ ಪ್ರಭಾರವರು ಉಪಸ್ಥಿತರಿದ್ದರು.

Related posts

ಗುರುವಂದನೆ- ಶಿಕ್ಷಕರ ದಿನಾಚರಣೆಗೆ ಮುಳಿಯ ಜ್ಯುವೆಲ್ಸ್‌ನಿಂದ ವಿಶೇಷ ಕೊಡುಗೆ

Suddi Udaya

ಉಜಿರೆಯಲ್ಲಿ ಗಾಳಿ- ಮಳೆಗೆ ವಾಹನಗಳ ಮೇಲೆ ಬಿದ್ದ ಮರ, ಒರ್ವರಿಗೆ ಗಾಯ, ಸಂಚಾರ ಅಸ್ತವ್ಯಸ್ಥ

Suddi Udaya

ವೇಣೂರು: ಮೂಡಕೋಡಿಯಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆ

Suddi Udaya

ಸರಕಾರಿ ಶಾಲೆಗಳನ್ನು ಮಾದರಿಯಾಗಿಸಲು ಬದುಕು ಕಟ್ಟೋಣ ಬನ್ನಿ ತಂಡ ಪಣ

Suddi Udaya

ಗ್ರಾಮ ಪಂಚಾಯತ್ ಆಸ್ತಿ ತೆರಿಗೆಯನ್ನು ಏಕಕಾಲಕ್ಕೆ ಪಾವತಿಸಿ: ಇಓ ಭವಾನಿಶಂಕರ್

Suddi Udaya

ಬಜೆಟ್ ನಲ್ಲಿ ಓಲೈಕೆಗೆ ಒತ್ತು‌ ಹಾಗೂ ಅಭಿವೃದ್ಧಿಯ ಆಶಯ ಮಸುಕಾಗಿದೆ : ಪ್ರತಾಪಸಿಂಹ ನಾಯಕ್

Suddi Udaya
error: Content is protected !!