23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

ಉಜಿರೆ: ಇಲ್ಲಿನ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ ಅವರು ಜೂ.25 ರಂದು 2024-25ರ ಶೈಕ್ಷಣಿಕ ವರ್ಷದ ಶಾಲಾ ಸಂಘಗಳನ್ನು ಉದ್ಘಾಟಿಸಿದರು.

ಬಳಿಕ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕಲಿಕೆಯು ಕಲ್ಪನೆಯೊಂದಿಗೆ ಸಾಗಬೇಕು ಹಾಗೂ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಇತರ ಪೂರಕ ಚಟುವಟಿಕೆಗಳ ಮೂಲಕ ಜ್ಞಾನ ಗಳಿಸಬೇಕು ಎಂದು ಹೇಳಿದರು.

ಶಾಲೆಯ ವಿವಿಧ ಸಂಘಗಳಾದ ಸಾಂಸ್ಕೃತಿಕ ಸಂಘ, ಭಿತ್ತಿ ಪತ್ರಿಕೆ ಸಂಘ, ಕಲಾ ಸಂಘ, ಹವ್ಯಾಸ ಸಂಘ, ಕ್ರೀಡಾ ಸಂಘ, ಇಂಟೆರಾಕ್ಟ್ ಸಂಘ, ಪರಿಸರ ಸಂಘ, ಕನ್ನಡ ಸಂಘ, ವಿಜ್ಞಾನ ಸಂಘ, ಸಾಹಿತ್ಯ ಸಂಘ, ಗಣಿತ ಸಂಘ ಇವುಗಳ ಉದ್ಘಾಟನೆ ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯ ಮಮ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಾದ ಚಿಂತನ್ ಮತ್ತು ಆನೆಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ವಿದ್ಯಾರ್ಥಿ ಶಶಾಂಕ್ ಪ್ರಭು ವಂದಿಸಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದಿಂದ ತರಬೇತಿ ಕಾರ್ಯಕ್ರಮ

Suddi Udaya

ಪಣಕಜೆ ಕೃಷ್ಣನಗರ ನಿವಾಸಿ ಅಪ್ಪಿ ಶೆಟ್ಟಿ ನಿಧನ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ವತಿಯಿಂದ ಮಕರ ಸಂಕ್ರಾಂತಿ ಆಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ಎಕ್ಸೆಲ್ ನ ಪ್ರಾಧ್ಯಾಪಕ ಆಸ್ಟಿನ್ ಮರ್ವಿನ್ ಡಿಸೋಜ ಅವರಿಗೆ ಡಾಕ್ಟರೇಟ್ ಪದವಿ

Suddi Udaya
error: Content is protected !!