22.4 C
ಪುತ್ತೂರು, ಬೆಳ್ತಂಗಡಿ
November 25, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರಿಗೆ ಪುನಶ್ಚೇತನ ಕಾರ್ಯಾಗಾರ

ನಿಡ್ಲೆ : ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿ ಪೋಷಕರಿಗೆ ಮಾಹಿತಿಯೊಂದಿಗೆ ಪುನಶ್ಚೇತನ ಕಾರ್ಯಗಾರ ಏರ್ಪಡಿಸಲಾಗಿತ್ತು.

ಎಸ್ ಡಿ ಎಂ ಕಾಲೇಜು ಉಜಿರೆಯ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಕ್ಷತಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಬಹಳ ದೊಡ್ಡದು ಎಂದು ತಿಳಿಸುತ್ತಾ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರು ಯಾವ ರೀತಿ ಮನೆಯಲ್ಲಿ ವಾತಾವರಣವನ್ನು ನಿರ್ಮಿಸಬೇಕು. ಎಂಬುದನ್ನು ಉದಾರಣೆಗಳ ಮೂಲಕ ಬಹಳ ಚೆನ್ನಾಗಿ ಪೋಷಕರಿಗೆ ಮನಮುಟ್ಟುವಂತೆ ಮಾಹಿತಿಯನ್ನು ನೀಡಿದರು.

ಪ್ರೌಢ ಹಂತದಲ್ಲಿ ಮಕ್ಕಳಲ್ಲಿ ದೈಹಿಕವಾಗಿ ಮಾನಸಿಕವಾಗಿ ಬದಲಾವಣೆಯಾಗುತ್ತದೆ ಇದನ್ನು ಪೋಷಕರು ಅರ್ಥೈಸಿಕೊಂಡು ಮಕ್ಕಳೊಂದಿಗೆ ಪೋಷಕರಾಗಿ ಮಾತ್ರವಲ್ಲ ಸ್ನೇಹಿತರಾಗಿ ಇರಬೇಕೆಂದು ಕಿವಿಮಾತು ಹೇಳಿದರು. ಸುಮಾರು 60 ಜನ ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶಾಂತ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ಶೋಲಿಯವರು ನಿರ್ವಹಿಸಿದರು.

Related posts

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸೆಕ್ಟ‌ರ್ ಆಗಿ ಬಸಲಿಂಗಯ್ಯ ಜಿ. ಸುಬ್ರಪುರಮಠ್ ನೇಮಕ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ರಿಷಬ್ ಶೆಟ್ಟಿ ಭೇಟಿ

Suddi Udaya

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒತ್ತಡ ನಿರ್ವಹಣಾ ಮಾರ್ಗದರ್ಶನ

Suddi Udaya

ಶ್ರೀಕರ ಭಟ್ ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ ರವರಿಗೆ  ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ

Suddi Udaya

ಮಚ್ಚಿನ ಅಂಚೆ ಕಚೇರಿ ಹಾಗೂ ಮಚ್ಚಿನ ಗ್ರಾ.ಪಂ. ಸಹಯೋಗದಲ್ಲಿ ಆಧಾರ್ ಸೀಡಿಂಗ್ ಕ್ಯಾಂಪ್

Suddi Udaya
error: Content is protected !!