29.5 C
ಪುತ್ತೂರು, ಬೆಳ್ತಂಗಡಿ
April 4, 2025
Uncategorized

ಬೆಳ್ತಂಗಡಿ 3 ಸ್ಟಾರ್ ವೈನ್ಸ್’ ಶಾಪ್ ಗೆ ಅಬಕಾರಿ ಇಲಾಖೆಯಿಂದ ಬೀಗ

ಬೆಳ್ತಂಗಡಿ : ಮಾಜಿ ಶಾಸಕ ವಸಂತ ಬಂಗೇರ ನಿಧನದ ಬಳಿಕ ಅಬಕಾರಿ ಕಾನೂನು ಪ್ರಕಾರ ಮಾಲೀಕತ್ವ ಬದಲಾಯಿಸದ ಕಾರಣದಿಂದ ಬೆಳ್ತಂಗಡಿಯ ‘3 ಸ್ಟಾರ್ ವೈನ್ಸ್ ಶಾಪ್ ಗೆ ಬೆಳ್ತಂಗಡಿ ಅಬಕಾರಿ ಇಲಾಖೆ ಬೀಗ ಹಾಕಿದೆ.
ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ರುವ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ದಿ. ಮಾಜಿ ಶಾಸಕ ಕೆ.ವಸಂತ ಬಂಗೇರರ ಮಾಲೀಕತ್ವದ ‘3 ಸ್ಟಾರ್ ವೈನ್ಸ್ ಶಾಪ್’ ಗೆ ಮಾಲೀಕತ್ವ ಬದಲಾವಣೆ ಮಾಡದ ಕಾರಣದಿಂದ ಬೆಳ್ತಂಗಡಿ ಅಬಕಾರಿ ಇಲಾಖೆ ಜೂ.22 ರಂದು ಸಂಜೆ 6 ಗಂಟೆಗೆ ಬೀಗ ಹಾಕಿ ಸಿಲ್ ಹಾಕಿದೆ.


ಕರ್ನಾಟಕ ಅಬಕಾರಿ ಕಾನೂನು ಪ್ರಕಾರ ಅಬಕಾರಿ ಮದ್ಯ ಮಾರಾಟ ಮಾಡುವ ಮಾಲೀಕ ಮರಣದ ಬಳಿಕ 45 ದಿನದ ಒಳಗಡೆ ಕುಟುಂಬದ ಪತ್ನಿ ಅಥವಾ ಮಕ್ಕಳ ಹೆಸರಿಗೆ ಮಾಲೀಕತ್ವ ಬದಲಾವಣೆ ಮಾಡಿಕೊಂಡು ಲೈಸನ್ಸ್ ರಿನಿವಲ್ ಮಾಡಿಸುವ ನಿಯಮ ಜಾರಿಯಲ್ಲಿದೆ. ಆದರೆ ಬಂಗೇರ ಅವರು ವಿಧಿವಶರಾಗಿ 45 ದಿನ ಕಳೆದರೂ ಮಾಲೀಕತ್ವ ಬದಲಾವಣೆ ಮಾಡದ ಕಾರಣ ಬೆಳ್ತಂಗಡಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ನಿಯಮ ಪ್ರಕಾರ ವೈನ್ಸ್ ಶಾಪ್ ಗೆ ಬೀಗ ಹಾಕಿ ಸಿಲ್ ಮಾಡಿದ್ದಾರೆ ಎಂದು ವರದಿಯಾಗಿದೆ.

Related posts

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಕಕ್ಕಿಂಜೆ: ಕಾರೊಂದರ ಮೇಲೆ ಕಾಡಾನೆ ದಾಳಿ

Suddi Udaya

ಜೂ5: ಸಿರಿಕನ್ನಡ ವಾಹಿನಿಯಲ್ಲಿ ‘ಸಖತ್ ಜೋಡಿ’ ರಿಯಾಲಿಟಿ ಶೋ ನಿರೂಪಕನಾಗಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ

Suddi Udaya

ಧರ್ಮಸ್ಥಳ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

Suddi Udaya

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ ಅನುಷ್ಠಾನಕ್ಕೆ ಪೂಣ೯ ಸಹಕಾರ: ಡಾ. ಹೆಗ್ಗಡೆ

Suddi Udaya

ಉಜಿರೆಗೆ ಆಗಮಿಸಿದ ನಂದಿ ರಥಯಾತ್ರೆ

Suddi Udaya
error: Content is protected !!