September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೆರ್ಲ ಬೈಪಾಡಿ ಸ.ಪ್ರೌ. ಶಾಲೆ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

ಬೆಳ್ತಂಗಡಿ: ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಇಲ್ಲಿ , ಯಕ್ಷ ದ್ರುವ ಪಟ್ಲ ಪೌಂಡೇಶನ್ ಮಂಗಳೂರು ಹಾಗೂ ಬೆಳ್ತಂಗಡಿ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆಯನ್ನು ಯಕ್ಷಗಾನದ ಹಿರಿಯ ಸಂಘಟಕ, ಮುತ್ಸದ್ದಿ ಭುಜಬಲಿ ಧರ್ಮಸ್ಥಳ ಇವರು ನೆರವೇರಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕ ವಿವೇಕಾನಂದ ಗೌಡ ವಹಿಸಿದರು. ಪಟ್ಲ ಪೌಂಡೇಶನ್ ನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಭಾಗವಹಿಸಿ, ವಿದ್ಯಾರ್ಥಿಗಳು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಪಟ್ಲ ಪೌಂಡೇಶನ್ ಸಂಚಾಲಕರಾದ ಕಿರಣ್ ಶೆಟ್ಟಿ , ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಮಹಾಬಲ ಗೌಡ , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಆದಪ್ಪ ಗೌಡ, ಯಕ್ಷಗಾನ ನಾಟ್ಯ ಗುರು ದೇವಿ ಪ್ರಸಾದ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಜಯ ಕುಮಾರ್ ಎಂ ಸ್ವಾಗತಿಸಿ, ಶಿಕ್ಷಕರಾದ ಮಹೇಶ್ ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕಿಯರಾದ ಶ್ರೀಮತಿ ಹೇಮಲತಾ ಮತ್ತು ಮಮತಾ ಸಹಕರಿಸಿದರು. ಶಿಕ್ಷಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Related posts

ಹೆದ್ದಾರಿ ಕಾಮಗಾರಿ ಅವಾಂತರ; ಮುಂಡಾಜೆಯ ಚಂದ್ರಶೇಖರ ಅಂಬಡ್ತ್ಯಾರು ರವರ ಮನೆಗೆ ನುಗ್ಗಿದ್ದ ನೀರು

Suddi Udaya

ಕರ್ತವ್ಯ ಲೋಪ ಆರೋಪ: ಮರೋಡಿ ಗ್ರಾಮ‌ ಲೆಕ್ಕಾಧಿಕಾರಿ ಶಿವಕುಮಾರ್ ಸಸ್ಪೆಂಡ್ ಗೆ ಸೂಚನೆ

Suddi Udaya

ಧರ್ಮಸ್ಥಳದಲ್ಲಿ ನೂತನ ಶಿಲಾಮಯ ಧ್ವಜಸ್ತಂಭಕ್ಕೆ ಭವ್ಯ ಸ್ವಾಗತ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಎನ್.ಎಸ್. ಬೋಸರಾಜು ಭೇಟಿ

Suddi Udaya

ಶಿರ್ಲಾಲು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಒಕ್ಕೂಟದ ಪದಗ್ರಹಣ

Suddi Udaya

ಕಕ್ಯಪದವು ಎಲ್‌.ಸಿ.ಆರ್ ಇಂಡಿಯನ್ ಪ.ಪೂ. ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲು

Suddi Udaya
error: Content is protected !!