26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಹಳೆಪೇಟೆ ಬಳಿ ಮತ್ತೆ ರಸ್ತೆಗುರುಳಿದ ಮರ: ತಪ್ಪಿದ ಭಾರಿ ಅಪಾಯ

ಉಜಿರೆ: ಉಜಿರೆ ಪೇಟೆಯ ಮಾವಂತೂರು ರೆಸಿಡೆನ್ಸಿ ಬಳಿ ರಾಷ್ಟ್ರೀಯ ಹೆದ್ದಾರಿಯ ವಾಹನದ ಮೇಲೆ ಮರವೊಂದು ಬಿದ್ದು ಅವಘಡ ಸಂಭವಿಸಿದ ಬೆನ್ನಿಗೇ ಇದೀಗ ಹಳೆಪೇಟೆ ಡೆಲ್ಮಾ ಸೇನಿಟರಿ ಮಳಿಗೆಯ ಎದುರು ಜೂ.26 ರಂದು ಅಕೇಶಿಯಾ ಮರವೊಂದು ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿದೆ.

ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಅವರು ಸಿಬ್ಬಂದಿಗಳ ಸಮೇತ ಆಗಮಿಸಿ ರಸ್ತೆ ಸಂಚಾರ ಕಾರ್ಯಾಚರಣೆ ನಡೆಸಿದರು.
ಎಸ್‌ಡಿಟಿಯು ಅಟೋ ಯುನಿಯನ್ ನ ಪದಾಧಿಕಾರಿಗಳು ತಕ್ಷಣ ಮರವು ತೆರವುಗೊಳಿಸಿ ಕ್ರಮ ಕೈಗೊಂಡರು. ಕೊಯ್ಯೂರು ಕುಂಟಿನಿ ರಝಾಕ್ ಅವರು ಯಂತ್ರದ ಮೂಲಕ ಮರ ಕತ್ತರಿಸಲು ಸಹಕರಿಸಿದರು. ಅಷ್ಟರಲ್ಲಿ ಹೈವೇ ಕಾಮಗಾರಿ ನಡೆಸುವವರ ಕಡೆಯಿಂದ ಜೆಸಿಬಿ ಬಂದು ತುಂಡರಿಸಿದ ಮರಗಳನ್ನು ಬದಿಗೆ ಸರಿಸುವ ಕ್ರಮ‌ಕೈಗೊಂಡರು.

Related posts

ಅಳದಂಗಡಿ ಸಿಎ ಬ್ಯಾಂಕ್ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಧರ್ಮಸ್ಥಳ: ಕಾಲೇಜು ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ‘ಅಭಯೋದ ಸಿರಿ ಅಪ್ಪೆ ರಕ್ತೇಶ್ವರಿ’ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

Suddi Udaya

ರೆಖ್ಯ: ಮನೆಗೆ ಸಿಡಿಲು ಬಡಿದು ಅಪಾರ ಹಾನಿ: ಸಿಡಿಲ ಆಘಾತಕ್ಕೆ ದನ ಹಾಗು ನಾಯಿ ಸಾವು

Suddi Udaya
error: Content is protected !!