25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಹಳೆಪೇಟೆ ಬಳಿ ಮತ್ತೆ ರಸ್ತೆಗುರುಳಿದ ಮರ: ತಪ್ಪಿದ ಭಾರಿ ಅಪಾಯ

ಉಜಿರೆ: ಉಜಿರೆ ಪೇಟೆಯ ಮಾವಂತೂರು ರೆಸಿಡೆನ್ಸಿ ಬಳಿ ರಾಷ್ಟ್ರೀಯ ಹೆದ್ದಾರಿಯ ವಾಹನದ ಮೇಲೆ ಮರವೊಂದು ಬಿದ್ದು ಅವಘಡ ಸಂಭವಿಸಿದ ಬೆನ್ನಿಗೇ ಇದೀಗ ಹಳೆಪೇಟೆ ಡೆಲ್ಮಾ ಸೇನಿಟರಿ ಮಳಿಗೆಯ ಎದುರು ಜೂ.26 ರಂದು ಅಕೇಶಿಯಾ ಮರವೊಂದು ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿದೆ.

ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣ ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಅವರು ಸಿಬ್ಬಂದಿಗಳ ಸಮೇತ ಆಗಮಿಸಿ ರಸ್ತೆ ಸಂಚಾರ ಕಾರ್ಯಾಚರಣೆ ನಡೆಸಿದರು.
ಎಸ್‌ಡಿಟಿಯು ಅಟೋ ಯುನಿಯನ್ ನ ಪದಾಧಿಕಾರಿಗಳು ತಕ್ಷಣ ಮರವು ತೆರವುಗೊಳಿಸಿ ಕ್ರಮ ಕೈಗೊಂಡರು. ಕೊಯ್ಯೂರು ಕುಂಟಿನಿ ರಝಾಕ್ ಅವರು ಯಂತ್ರದ ಮೂಲಕ ಮರ ಕತ್ತರಿಸಲು ಸಹಕರಿಸಿದರು. ಅಷ್ಟರಲ್ಲಿ ಹೈವೇ ಕಾಮಗಾರಿ ನಡೆಸುವವರ ಕಡೆಯಿಂದ ಜೆಸಿಬಿ ಬಂದು ತುಂಡರಿಸಿದ ಮರಗಳನ್ನು ಬದಿಗೆ ಸರಿಸುವ ಕ್ರಮ‌ಕೈಗೊಂಡರು.

Related posts

ಸೆ.6: ಗರ್ಡಾಡಿ ಯುವಕ ಮಂಡಲದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಗೇರುಕಟ್ಟೆ: ಹಲೇಜಿ -ಕಲಾಯಿ ಸಂಪರ್ಕ ರಸ್ತೆಯ ಚೆಕ್ ಡ್ಯಾಮ್ ನಲ್ಲಿ ತುಂಬಿಕೊಂಡ ಮರದ ದಿಮ್ಮಿಗಳ ತೆರವು

Suddi Udaya

ಕೊಕ್ಕಡ: ಕಲಾಯಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಸತೀಶ್ ರವರ ಮನೆಗೆ ಮರ ಬಿದ್ದು ಹಾನಿ

Suddi Udaya

ನಾರಾವಿ ಅಂತರ್ ಕಾಲೇಜು ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ :ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಗುರುವಾಯನಕೆರೆಯಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಚಿನ್ನಾಭರಣ ಕಳವು: ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya
error: Content is protected !!