ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು ವಾರದಲ್ಲಿ ಒಂದು ದಿನ ಕರಾಟೆ, ಯೋಗಸನ ,ಸಂಗೀತ ,ಡ್ಯಾನ್ಸ್ ಯಕ್ಷಗಾನ, ಭರತನಾಟ್ಯ ತರಬೇತಿಗಳನ್ನು ನುರಿತ ತರಬೇತುದಾರರಿಂದ ನೀಡಲಾಗುತ್ತಿದೆ. ಅದೇ ರೀತಿ ನಮ್ಮ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಹೆಚ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ರವರ ಮಾರ್ಗದರ್ಶನದಲ್ಲಿ ವಿಜ್ಞಾನ ಪರಿಸರ, ಸಾಂಸ್ಕೃತಿಕ ,ಭಾಷಾ ಸಮಾಜ ,ಎನ್ ಸಿ ಸಿ ಸೇವಾದಳ ಹಲವಾರು ವಿಭಾಗಗಳಾಗಿ ವಿಂಗಡಿಸಲಾಯಿತು.
ಆಯಾಯ ಕ್ಲಬ್ ನ ಶಿಕ್ಷಕರು ನಾಯಕರನ್ನು ಆಯ್ಕೆ ಮಾಡಿ ಗುಂಪಿನ ಹೆಸರನ್ನು ಚಾರ್ಟಿನ ಮೂಲಕ ಎಲ್ಲಾ ವಿದ್ಯಾರ್ಥಿಗಳ ಸಹಕಾರದಿಂದ ವಿವಿಧ ರೀತಿಯಲ್ಲಿ ಅಲಂಕಾರಗೊಳಿಸಿ, ಕ್ಲಬ್ ನ ಸಂಯೋಜಕರಾದ ಉಪನ್ಯಾಸಕಿ ಪ್ರಜ್ಞ, ಶಿಕ್ಷಕಿ ಗೌತಮಿ, ಶಿಕ್ಷಕಿ ಭವಾನಿ ದಿವ್ಯ ಇವರ ಮುಂದಾಳತ್ವದಲ್ಲಿ ಉದ್ಘಾಟಿಸಲಾಯಿತು. ಕಬ್ಬಿನ ಶಿಕ್ಷಕರಾದಂತಹ ಸಾಂಸ್ಕೃತಿಕ ಕ್ಲಬ್ -ವಿನಯ್ ಮತ್ತು ಅಕ್ಷತ , ವಿಜ್ಞಾನ ಕ್ಲಬ್-ವಾಣಿ ಮತ್ತು ಉಷಾ, ಭಾಷಾ ಕ್ಲಬ್-ಮಮತಾ ಮತ್ತು ಮನೋಹರ್, ಸೇವಾದಳ ಕ್ಲಬ್ -ಶುಭ ಮತ್ತು ಚೈತ್ರ ಶ್ರೀ, ಪರಿಸರ ಕ್ಲಬ್ -ಶ್ವೇತಾ ಮತ್ತು ಸುಜಾತ, ಎನ್ ಸಿ ಸಿ -ಪವಿತ್ರ ಮತ್ತು ಸುಮನ್, ಸಮಾಜ ಕ್ಲಬ್- ಶ್ವೇತಾ ಮತ್ತು ಅಕ್ಷತ ಇವರು ಮಕ್ಕಳಿಗೆ ಪ್ರೋತ್ಸಾಹಿಸಿದರು.