April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

ಗುರುವಾಯನಕೆರೆ: ವಿದ್ಯಾಸಾಗರ ಕ್ಯಾಂಪಸ್ ಇಲ್ಲಿನ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2024-25 ನೇ ಸಾಲಿನಲ್ಲಿ ದಾಖಲಾತಿ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ. ಯವರಾದ ವಿಜಯ ಪ್ರಸಾದ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಡುವ ಪರಿಶ್ರಮವೇ ಅತ್ಯಂತ ದೊಡ್ಡ ತಪಸ್ಸು. ಹಾಸ್ಟೆಲ್ ಜೀವನದಲ್ಲಿ ಸಿಗುವ ಕಲಿಕೆ ನಮ್ಮ ಸುಭದ್ರ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳುವುದು. ಇದರೊಂದಿಗೆ ವಿದ್ಯಾರ್ಥಿಯು ಮುಂಬರುವ ತನ್ನ ಸಾರ್ವಜನಿಕ ಜೀವನದಲ್ಲಿ ದುಶ್ಚಟಗಳಿಂದ, ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ದೂರವಿರಬೇಕು.ವಿದ್ಯಾರ್ಥಿಗಳು ಸಾಧನೆಯ ಜೊತೆಗೆ ಎಚ್ಚರದ ಬದುಕನ್ನು ಬದುಕುವ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು.

ಮುಖ್ಯ ಅತಿಥಿ ನೆಲೆಯಲ್ಲಿ ಧರ್ಮಸ್ಥಳದ ಕಲಾ ಪೋಷಕರಾಗಿರುವ ಭುಜಬಲಿ ಮಾತನಾಡಿ ಎಕ್ಸೆಲ್ ಕಾಲೇಜು ಕಲಿಕೆಯೊಂದಿಗೆ ಸಾಂಸ್ಕೃತಿಕ ಕಲಾ ಪ್ರಾಶಸ್ತ್ಯವನ್ನು ಮಕ್ಕಳಿಗೆ ನೀಡುತ್ತಿರುವುದನ್ನು ಅಭಿನಂದಿಸಿದರು. ವಿದ್ಯಾರ್ಥಿ ಜೀವನದಲ್ಲಿ ಪಡುವ ಪರಿಶ್ರಮವು ನಮ್ಮನ್ನು ಯಶಸ್ಸಿನ ಮೆಟ್ಟಿಲೇರುವಂತೆ ಮಾಡುತ್ತದೆ. ವಿದ್ಯಾರ್ಥಿಗಳು ಜೀವನ ಮೌಲ್ಯವನ್ನು ಮೈಗೂಡಿಸುವುದರೊಂದಿಗೆ ಉತ್ತಮ ಸಮಾಜವನ್ನು ಕಟ್ಟುವ ನಿರ್ಧಾರವನ್ನು ಕೈಗೊಳ್ಳಿ ಎಂದರು.

ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ರವರು ಮಾತನಾಡಿ ತಂದೆ ತಾಯಿಯ ಆಶೀರ್ವಾದವೇ ಪ್ರತಿಯೊಬ್ಬ ವಿದ್ಯಾರ್ಥಿಯ ಏಳಿಗೆಗೆ ಕಾರಣವಾಗುವುದು. ಪ್ರತಿ ದಿನವೂ ಬೆಳಗ್ಗೆ ತಂದೆ ತಾಯಿಯ ಪಾದಕಮಲಗಳನ್ನು ಸ್ಮರಿಸಿಕೊಳ್ಳುವುದನ್ನು ಮರೆಯದಿರಿ. ಹಾಸ್ಟಲ್ ಜೀವನವು ಬದುಕಿನ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುತ್ತದೆ. ನಾಯಕತ್ವ, ಯೋಜನೆ, ವಿಚಾರ ವಿನಿಮಯ ಹೀಗೆ ಹಲವಾರು ಗುಣಗಳ ವರ್ಧನೆಗೆ ವಸತಿ ನಿಲಯಗಳ ನಿಯಮವು ಕಾರಣವಾಗುತ್ತದೆ ಎನ್ನುತ್ತಾ ತಮ್ಮ ವಿದ್ಯಾರ್ಥಿ ಜೀವನದ ಹಾಸ್ಟೆಲ್ ಅನುಭವವನ್ನು ತಿಳಿಸಿದರು.

ಕಾಲೇಜಿನ ವಿವಿಧ ಪ್ರಾಧ್ಯಾಪಕರಿಂದ ಜೆ.ಇ.ಇ, ನೀಟ್, ಸಿಇಟಿ, ನಾಟ, ಎನ್.ಡಿ.ಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.

ಎಸ್.ಎನ್. ಭಟ್ ಸೈಪಂಗಲ್ ಹಾಗೂ ಸ್ಮಿತೇಶ್ ಬಾರ್ಯ ಇವರಿಂದ ವಿಶೇಷ ಕಾರ್ಯಗಾರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಬಂಟ್ವಾಳದ ಡಾನ್ಸ್ ಕ್ರೀವ್ಸ್ ತಂಡದಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಇವರು ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲ ಅಧಿಕಾರಿ ದುರ್ಗಾಪರಮೇಶ್ವರ ಭಟ್ ಇವರು ನಿರೂಪಿಸಿದರು. ಭೌತಶಾಸ್ತ್ರ ಅಧ್ಯಾಪಕಿ ಶ್ರೀಮತಿ ದಿವ್ಯ ಹೆಗ್ಡೆ ಧನ್ಯವಾದ ಸಮರ್ಪಿಸಿದರು.

Related posts

ಗುರುವಾಯನಕೆರೆ: 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಗೌರವಾಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ, ಅಧ್ಯಕ್ಷರಾಗಿ ರಿಜೇಶ್ ಕುಮಾರ್ ಆಯ್ಕೆ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ಕೃಷ್ಣಕುಮಾರ್

Suddi Udaya

ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆ ಗಳಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಶೇಖ್ ಲತೀಫ್ ಅವರಿಗೆ ಗೌರವ ಸನ್ಮಾನ

Suddi Udaya

ಬೆಳ್ತಂಗಡಿ :ಬೈಕ್- ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಾವರ ಗ್ರಾಮದ ಯುವಕ ಸಾವು

Suddi Udaya

ಗರ್ಡಾಡಿಯಲ್ಲಿ ಭಾರಿ ಮಳೆಗೆ ಮಣ್ಣು ಕುಸಿದು ಮನೆಗೆ ಹಾನಿ, ಅದೃಷ್ಟವಶಾತ್ ಪಾರಾದ ಮನೆಯವರು

Suddi Udaya
error: Content is protected !!