ಪುದುವೆಟ್ಟು : ಶ್ರೀ.ಧ.ಮಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟುವಿನಲ್ಲಿ ಯಕ್ಷಗಾನ ಮತ್ತು ನೃತ್ಯ ತರಗತಿಗಳ ಉದ್ಘಾಟನೆಯು ನಡೆಯಿತು.
ಸ್ಥಳೀಯ ಉದ್ಯಮಿ ಹಾಗೂ ಪುದುವೆಟ್ಟು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷೆಯಾದ ಶ್ರೀಮತಿ ವಾರಿಜಾ. ಎಸ್ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಚಟುವಟಿಕೆಗಳಷ್ಟೇ ಸಹ ಪಠ್ಯ ಚಟುವಟಿಕೆಗಳು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದುದರಿಂದ ವಿದ್ಯಾರ್ಥಿಗಳು ಸಹ ಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಯಕ್ಷಗಾನ ತರಬೇತುದರರಾದ ಎಸ್.ಡಿ.ಎಂ.ಕಲಾ ಕೇಂದ್ರದ ಯಕ್ಷಗಾನ ಗುರುಗಳು ಅರುಣ್ ಕುಮಾರ್ ಹಾಗೂ ನೃತ್ಯ ತರಬೇತುದಾರರಾದ ಎಸ್ ಡಿ ಎಮ್ ಕಲಾ ಕೇಂದ್ರದ ಕುಮಾರಿ ಚೈತ್ರ ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಹಿರಿಯ ಶಿಕ್ಷಕಿ ಶ್ರೀಮತಿ ತೇಜಾವತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಶೀನಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಶೀಲ.ಎನ್. ಸ್ವಾಗತಿಸಿದರು ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು . ಶ್ರೀಮತಿ ಪುಷ್ಪಲತಾ ಧನ್ಯವಾದ ಸಮರ್ಪಿಸಿದರು. ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.