32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜು ‘ವಿವಿಧ ಸಂಘಗಳ ಉದ್ಘಾಟನೆ’

ಉಜಿರೆ: ವಿದ್ಯಾರ್ಥಿಗಳ ಅಂತಿಮ ಗುರಿ ಉತ್ತಮ ಫಲಿತಾಂಶವೇ ಆಗಿದ್ದರೂ, ಕೇವಲ ಕಲಿಕೆಯೊಂದೇ ಬದುಕು ಕಟ್ಟಿಕೊಡದು .ವಿದ್ಯಾರ್ಜನೆ ಜೊತೆ ಜೊತೆಗೆ ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣ ಬಹಳ ಅಗತ್ಯ. ಈ ಶಿಕ್ಷಣ ಸಂಸ್ಥೆ ನಿರ್ಮಿಸಿಕೊಡುವ ವ್ಯವಸ್ಥೆಗಳಲ್ಲಿ, ಸಿಗುವ ಸಂಪನ್ಮೂಲಗಳ ಸರಿಯಾದ ಬಳಕೆ ಮಾಡುವುದರ ಮೂಲಕ ನಿಮ್ಮ ಸರ್ವಾಂಗೀಣ ಅಭಿವೃದ್ಧಿ ಸಾಧ್ಯಾವಾಗಿಸಿಕೊಳ್ಳಿ. ಕಲಿಕೆ ಜೊತೆಗೆ ಇತರೆ ಪ್ರತಿಭೆಗಳಿದ್ದರೆ ಭವಿಷ್ಯದಲ್ಲಿ ಪ್ರಯೋಜನಕಾರಿ. ನಿಮ್ಮ ಆಸಕ್ತಿಯ ಸಂಘಗಳಲ್ಲಿ ಸೇರಿಕೊಂಡು ಸುಪ್ತ ಪ್ರತಿಭೆಗಳ ಅನಾವರಣಗೊಳಿಸಿ ಎಂದು ಕಾಲೇಜಿನ ಈ ಶೈಕ್ಷಣಿಕ ವರ್ಷದ ‘ವಿವಿಧ ಸಂಘಗಳ ಉದ್ಘಾಟನೆ’ ನೆರವೇರಿಸಿ ,ಎಸ್. ಡಿ. ಎಂ ಪದವಿ ಕಾಲೇಜಿನ ಆಡಳಿತ ಕುಲಸಚಿವೆ ಹಾಗೂ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾಗಿರುವ ಶಲಿಪ್ ಎ. ಪಿ. ಇವರು ಮಾತಾಡಿದರು.

ಪಾಂಡವರಿಗೆ ಶಸ್ತ್ರ-ಶಾಸ್ತ್ರಗಳ ಕಲಿಕೆಯ ಜೊತೆ ಜೊತೆಗೆ ಅವರ ಸ್ವಂತ ಆಸಕ್ತಿಯ ವಿಷಯಗಳ ಕಲಿಕೆಗೂ ಒತ್ತು ನೀಡಿ ಕಡ್ಡಾಯ ಕಲಿಕೆ ಎಂದು ನಿಗದಿಗೊಳಿಸಿ ಸನ್ನದ್ಧಗೊಳಿಸಿದ ವಿದ್ಯೆಗಳು ಅಜ್ಞಾತವಾಸದ ವೇಳೆ ಪಾಂಡವರ ಕಾಪಾಡಿತು.ಹಾಗೆಯೇ ಐದ್ಯೋಗಿಕ ನೆಲೆಯಲ್ಲಿ ಮಾತ್ರವಲ್ಲದೇ, ಮಾನಸಿಕ ನೆಮ್ಮದಿ ಹಾಗೂ ಕುಷಿಗೆ ಪೂರಕವಾದ ಕಲಿಕೆಗೆ, ಪ್ರತಿಭಾ ಪ್ರದರ್ಶನಗಳಿಗೆ ಸಂಘದ ಕಾರ್ಯ ಚಟುವಟಿಕೆ ಸಹಕಾರಿ. ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೇಳಿದರು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಹಾಗೂ ವಿಜ್ಞಾನ ಸಂಘದ ಸಂಯೋಜಕರು ಹಾಗೂ ಭೌತಶಾಸ್ತ್ರ ಮುಖ್ಯಸ್ಥರಾದ ರಮೇಶ್ ಬಾಬು ಎಚ್. ಪಿ ಉಪಸ್ಥಿತರಿದ್ದರು.

ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಪಾರ್ಶ್ವನಾಥ ಹೆಗ್ಡೆ ಕಾರ್ಯಕ್ರಮ ದಲ್ಲಿ ವಂದಿಸಿ, ನಿರೂಪಿಸಿದರು.

Related posts

ಪಟ್ರಮೆ: ಸಂಕೇಶ ಮನೆ ನಿವಾಸಿ ಸುದೇಶ್ ನಿಧನ

Suddi Udaya

ಆರಂಬೋಡಿ ಗ್ರಾ.ಪಂ. ನ ಅಧ್ಯಕ್ಷರಾಗಿ ಪ್ರವೀಣಚಂದ್ರ ಜೈನ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ತೇಜಸ್ವಿನಿ

Suddi Udaya

ಬೆಳ್ತಂಗಡಿಯಲ್ಲಿ ಅಗ್ನಿ ಅನಾಹುತಗಳ ತಡೆಗಟ್ಟುವ ಕುರಿತು ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಬೆಳಾಲು: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ವಿಶ್ವನಾಥ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಆರಂಬೋಡಿ : ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನ ಮಂದಿರದ ನೂತನ ಗುಡಿಗೆ ಶಿಲಾನ್ಯಾಸ

Suddi Udaya

ಬಂಗಾಡಿ ಕೊಲ್ಲಿಯಲ್ಲಿ ಯುವ ನಾಯಕ ರಂಜನ್ ಜಿ ಗೌಡರವರ ಸಾರಥ್ಯದಲ್ಲಿ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ

Suddi Udaya
error: Content is protected !!