ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಜಾಗೃತಿ ಕಾರ್ಯಕ್ರಮ

Suddi Udaya

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಜೂ.26 ರಂದು ಪೋಷಕರ ಜಾಗೃತಿ ಕಾರ್ಯಕ್ರಮ ಜರಗಿತು.

ಒಂದರಿಂದ ನಾಲ್ಕನೇ ತರಗತಿವರೆಗಿನ ವಿದ್ಯಾರ್ಥಿಗಳ ಪೋಷಕರಿಗೆ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕೌನ್ಸಿಲರ್ ಸೀತಾ ಶೇಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರವನ್ನು ಅವರು ವಿವರಿಸಿದರು.

ಮಕ್ಕಳು ದೇವರ ಕೊಡುಗೆಯಾಗಿದ್ದು, ಅವರಿಗೆ ಪೋಷಕರ ವರ್ತನೆ ಹಾಗೂ ಜೀವನ ಶೈಲಿಯೇ ಮಾದರಿಯಾಗಿರುತ್ತದೆ ಎಂದು ಅವರು ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯನಿ ವಿದ್ಯಾಲಕ್ಷ್ಮಿ ನಾಯಕ್ ಮಾತನಾಡಿ, ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ವಿವರಿಸಿ, ಪೋಷಕರ ಅಹವಾಲುಗಳನ್ನು ವಿಮರ್ಶಿಸಿದರು.

ವಿದ್ಯಾರ್ಥಿಗಳಾದ ಮಾನ್ವಿ ಭಟ್ ಸ್ವಾಗತಿಸಿ, ಧ್ರುವ ವಂದಿಸಿದರು. ಮಾನ್ವಿಲಕ್ಷ್ಮಿ ಅತಿಥಿ ಪರಿಚಯ ನೀಡಿ, ಶಶಿಧರ್ ಕಾರ್ಯಕ್ರಮ ನಿರೂಪಿಸಿದರು.

5, 6 ಮತ್ತು 7ನೇ ತರಗತಿ ವಿಭಾಗದಲ್ಲಿ ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಅಕ್ಷತಾ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.

‘ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ’ ಕುರಿತು ಮಾತನಾಡಿದ ಅವರು, ಮಕ್ಕಳು, ಪೋಷಕರು ಮತ್ತು ಶಿಕ್ಷಕರ ನಡುವಿನ ಸಂಬಂಧ, ಒಡನಾಟಗಳ ಬಗ್ಗೆ ತಿಳಿಸಿದರು.

ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸಾನ್ವಿ ಸ್ವಾಗತಿಸಿ, ಪ್ರಸ್ತುತ್ ವಂದಿಸಿ, ಅದಿತಿ ನಿರೂಪಿಸಿದರು.

Leave a Comment

error: Content is protected !!