38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ: ಶಾಸಕ ಹರೀಶ್ ಪೂಂಜ ಸೇರಿ 65 ಮಂದಿಗೆ ಸಮನ್ಸ್ ಜಾರಿ

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸ್ಪೋಟಕ ಕಾಯ್ದೆಯಡಿ ಬಂಧಿತರಾಗಿದ್ದ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಸಿದ ಆರೋಪದಡಿ ಎರಡು ಪ್ರತ್ಯೇಕ ಕೇಸ್‌ಗೆ ಸಂಬಂಧ ಪಟ್ಟಂತೆ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಮತ್ತಿತರರಿಗೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಪ್ರಥಮ ಕೇಸ್‌ನಲ್ಲಿ 28 ಮಂದಿ ಮತ್ತು 2ನೇ ಕೇಸ್‌ನಲ್ಲಿ 37 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಸಮನ್ಸ್ ಜಾರಿಯಾದವರ ಹೆಸರು:
ಮೇ.18 ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಹರೀಶ್ ಪೂಂಜ ಗರ್ಡಾಡಿ, ರಾಜೇಶ್ ಎಂ.ಕೆ. ನಿಡ್ಡಾಜೆ ಕಳೆಂಜ, ಜಗದೀಶ ಕನ್ನಾಜೆ ಲಾಯಿಲ, ಚಂದ್ರಹಾಸ ದಾಸ್ ಬದ್ಯಾರು ಕುವೆಟ್ಟು, ಪ್ರಕಾಶ್ ಆಚಾರಿ ಕೈಪುಲೋಡಿ ಲಾಯಿಲ, ಸಂದೀಪ್ ರೈ ಮುಂಡ್ರುಪ್ಪಾಡಿ ಧರ್ಮಸ್ಥಳ, ನಿತೇಶ್ ಶೆಟ್ಟಿ ಕೆಂಚೊಟ್ಟು ಓಡಿಲ್ನಾಳ, ಪವನ್ ಶೆಟ್ಟಿ ಅಜಿತ್ ನಗರ ಉಜಿರೆ, ಪ್ರದೀಪ್ ಶೆಟ್ಟಿ ಗುರುವಾಯನಕೆರೆ, ಪ್ರದೀಪ್ ಶೆಟ್ಟಿ ಪಾಡ್ಯಾರ ಮಜಲು ಬರಾಯ ಕುವೆಟ್ಟು, ರಂಜಿತ್ ಶೆಟ್ಟಿ ಮದ್ದಡ್ಕ, ರಿಜೇಶ್ ಮಂದಾರಗಿರಿ ಶಿವಾಜಿನಗರ ಕುವೆಟ್ಟು, ಅವಿನಾಶ್ ಮಂದಾರಗಿರಿ ಶಿವಾಜಿನಗರ ಕುವೆಟ್ಟು, ಸೂರ್ಯಚಂದ್ರ ಪ್ರಸಾದ್ ಯಾನೆ ಚಂದನ್ ಕಾಮತ್ ಅಜಕುರಿ ಧರ್ಮಸ್ಥಳ, ಸಂತೋಷ್ ಕುಮಾರ್ ಜೈನ್ ಕನ್ನಡಿಕಟ್ಟೆ ಪಡಂಗಡಿ, ಪುಷ್ಪರಾಜ್ ಶೆಟ್ಟಿ ಶಕ್ತಿನಗರ ಕುವೆಟ್ಟು, ಶ್ರೀನಿವಾಸ ರಾವ್ ದೊಂಡೋಲೆ ಧರ್ಮಸ್ಥಳ, ರಾಜ್ ಪ್ರಕಾಶ್ ಶೆಟ್ಟಿ ಪಡ್ಡೆಲು, ಗಣೇಶ್ ಲಾಯಿಲ, ವಾಸು ಪಡ್ಲಾಡಿ, ವಿಠಲ ಆಚಾರ್ಯ ಬರಾಯ ಕುವೆಟ್ಟು, ಗಣೇಶ್ ಕೆ.ಕೊಡಪತ್ತಾಯ ಸಾಮೆದಕಲಪು ಪುದುವೆಟ್ಟು, ವಿಕಾಸ್ ಶೆಟ್ಟಿ ಗುರುವಾಯನಕೆರೆ ಕುವೆಟ್ಟು, ರವಿನಂದನ್ ನಟ್ಟಿಬೈಲು ಉಪ್ಪಿನಂಗಡಿ, ಸುಖೇಶ್ ಪುದ್ದ ಕಡಿಯೇಲು, ಮೇಲಂತಬೆಟ್ಟು, ನವೀನ್ ಕುಲಾಲ್ ಶಿವಾಜಿನಗರ ಗುರುವಾಯನಕೆರೆ ಕುವೆಟ್ಟು, ಪದ್ಮನಾಭ ಶೆಟ್ಟಿ ಹಲ್ಲಂದೋಡಿ ಪಡಂಗಡಿ ಮತ್ತು ಶಂಕರ ಸಪಲ್ಯ ಗುಂಪಲಾಜೆ ದರ್ಕಾಸು ಪಣೆಜಾಲು ಎಂಬವರಿಗೆ ಸಮನ್ಸ್ ಜಾರಿಯಾಗಿದೆ.

ಮೇ 20ರಂದು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಹರೀಶ್ ಪೂಂಜ ಗರ್ಡಾಡಿ, ದಯಾನಂದ ಗೌಡ ಕುತ್ಯಾರು, ರಾಜೇಶ್ ಎಂ.ಕೆ. ಕಳೆಂಜ, ನವೀನ್ ನೆರಿಯ, ಚಂದ್ರಹಾಸ ಕಾವು, ಜಗದೀಶ್ ಲಾಯಿಲ, ಗಿರೀಶ್ ಡೊಂಗ್ರೆ ಲಾಯಿಲ, ಉಮೇಶ್ ಕುಲಾಲ್ ಕುವೆಟ್ಟು, ಯಶವಂತ ಗೌಡ ಬೆಳಾಲು, ದಿನೇಶ್ ಪೂಜಾರಿ ಚಾರ್ಮಾಡಿ, ಶಶಿಧರ್ ಕಲ್ಮಂಜ, ಗಣೇಶ್ ಕೆ.ಪುದುವೆಟ್ಟು, ರವಿನಂದನ್ ನಟ್ಟಿಬೈಲು ಉಪ್ಪಿನಂಗಡಿ, ರಂಜಿತ್ ಶೆಟ್ಟಿ ಮದ್ದಡ್ಕ, ಅವಿನಾಶ್ ಗುರುವಾಯನಕೆರೆ, ರಿಜೇಶ್ ಗುರುವಾಯನಕೆರೆ, ಸುಧೀರ್, ಶಂಕರ ಸಪಲ್ಯ ಗುಂಪಲಾಜೆ, ಸುಖೇಶ್ ಚಾರ್ಮಾಡಿ, ಪದ್ಮನಾಭ ಶೆಟ್ಟಿ ಪಡಂಗಡಿ, ಮೇಲಂತಬೆಟ್ಟು, ನವೀನ್ ಕುಲಾಲ್ ಗುರುವಾಯನಕೆರೆ, ವಿಕಾಸ್ ಶೆಟ್ಟಿ ಗುರುವಾಯನಕೆರೆ, ಸಂತೋಷ್ ಕುಮಾರ್ ಜಿ ಕನ್ನಡಿಕಟ್ಟೆ, ಸೂರ್ಯಚಂದ್ರ ಧರ್ಮಸ್ಥಳ, ಪ್ರದೀಪ್ ಶೆಟ್ಟಿ ಕುವೆಟ್ಟು, ಪುಷ್ಪರಾಜ್ ಶೆಟ್ಟಿ ಶಕ್ತಿನಗರ, ರಾಜ್ ಪ್ರಕಾಶ್ ಶೆಟ್ಟಿ ಓಡಿಲ್ನಾಳ, ವಿಠಲ ಆಚಾರ್ಯ ಕುವೆಟ್ಟು, ಶ್ರೀನಿವಾಸ ರಾವ್ ಧರ್ಮಸ್ಥಳ, ಗಣೇಶ್ ಲಾಯಿಲ, ರಂಜಿತ್ ಶೆಟ್ಟಿ ಮಲವಂತಿಗೆ, ರತನ್ ಶೆಟ್ಟಿ ಮಲವಂತಿಗೆ, ಪ್ರಕಾಶ್ ಆಚಾರಿ ಲಾಯಿಲ, -ನಿತೇಶ್ ಶೆಟ್ಟಿ ಓಡಿಲ್ನಾಳ, ಪ್ರದೀಪ್ ಶೆಟ್ಟಿ ಗುರುವಾಯನಕೆರೆ, ಸಂದೀಪ್ ರೈ ಧರ್ಮಸ್ಥಳ, ಪವನ್ ಶೆಟ್ಟಿ ಉಜಿರೆ, ಶ್ರೀರಾಜ್ ಶೆಟ್ಟಿ ಗುರುವಾಯನಕೆರೆ ಮತ್ತು ಭರತ್‌ ಶೆಟ್ಟಿ ಅರಸಿನಮಕ್ಕಿ ಎಂಬವರಿಗೆ ಸಮನ್ಸ್ ಜಾರಿ ಮಾಡಲಾಗಿದೆ

Related posts

ನ.13: ಬೆಳ್ತಂಗಡಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ ಕಾರ್ಯಕ್ರಮ

Suddi Udaya

ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಫ್ ಗೈಸ್ ವತಿಯಿಂದ ಜಿ.ಪಿ.ಎಲ್ – 2024 ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಯಲ್ಲಿ ಡಾ| ರಂಜನ್ ಕುಮಾರ್ ಅವರ ಅನುಗ್ರಹ ಕ್ಲಿನಿಕ್ ಶುಭಾರಂಭ     

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲೆ ಭಾರತಿ ಬಿ.ಎಂ. ಭೇಟಿ

Suddi Udaya

ಧರ್ಮಸ್ಥಳ :ಶ್ರೀ ಧ .ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ತರಗತಿ ಆರಂಭ

Suddi Udaya

ಕುಂದಾಪುರ ಜೆಸಿಯ ಆತಿಥ್ಯದಲ್ಲಿ ನಡೆದ ಲಾಟ್ಸ್ ನಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಪ್ರಶಸ್ತಿ

Suddi Udaya
error: Content is protected !!