April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಮ್. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಧನೆಗೈದ ಕುಮಾರ್‌ ನಿಹಾರ್‌ ಎಸ್‌ ಆರ್‌ ಇವರೊಂದಿಗೆ ವಿಶೇಷ ಸಂವಾದ

ಉಜಿರೆ: ಇಲ್ಲಿನ ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ಆಸಕ್ತ ಆಯ್ದ ವಿದ್ಯಾರ್ಥಿಗಳಿಗೆ ಕೆ.ಸಿ.ಇ.ಟಿ., ನೀಟ್‌ ಹಾಗೂ ಜೆಇಇ ಅಡ್ವಾನ್ಸ್‌ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಮಂಗಳೂರಿನ ಎಕ್ಸ್ಪರ್ಟ್‌ ಕಾಲೇಜಿನ ಕುಮಾರ್‌ ನಿಹಾರ್‌ ಎಸ್‌ ಆರ್‌ ಇವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಾಧಕ ನಿಹಾರ್‌ ಮಾತನಾಡಿ ತಾನು ಹೇಗೆ ಸ್ಪರ್ಧಾತ್ಮಕ ಹಾಗೂ ವಾರ್ಷಿಕ ಪರೀಕ್ಷೆಗಳೆರಡಕ್ಕೂ ತಯಾರು ಮಾಡಿಕೊಳ್ಳುತ್ತಿದ್ದೆ. ಯಾವ ರೀತಿ ನೋಟ್ಸ್ಗಳನ್ನು ತಯಾರಿಸಿಕೊಳ್ಳುತ್ತಿದ್ದೆ. ಕೆ ಸಿ.ಇ.ಟಿ.,ನೀಟ್‌ ಹಾಗೂ ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಕ್ರಮ,ಸಮಯ ನಿರ್ವಹಣೆ,ಓದಬೇಕಾದ ಪಠ್ಯ-ಪುಸ್ತಕ ಹಾಗೂ ಯಾವ ಯಾವ ಮುಖ್ಯಾಂಶಗಳು ಬಹಳ ಪ್ರಮುಖವಾಗಿರುತ್ತದೆ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಹೇಗೆ ಚುಟುಕು ಸಮಯದಲ್ಲಿ ಉತ್ತರಗಳನ್ನು ಶೀಘ್ರವಾಗಿ ಉತ್ತರಿಸಬೇಕು ಎಂಬಿತ್ಯಾದಿ ಉಪಯುಕ್ತವಾದ ಸಲಹೆ,ಮಾರ್ಗದರ್ಶನ ನೀಡಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನೇಕ ಸಂದೇಹ,ಪ್ರಶ್ನೆಗಳಿಗೂ ಸಹ ಉತ್ತರಿಸಿದರು.ನನ್ನ ಇಂದಿನ ಯಶಸ್ಸಿಗೆ ನಿರಂತರ ಹಾಗೂ ಕಠಿಣ ಪ್ರಯತ್ನವೇ ಕಾರಣವಾಗಿದೆ ,ನೀವೂ ನಿರಂತರ ಪ್ರಯತ್ನದಿಂದ ಯಶಸ್ಸನ್ನು ಸಾಧಿಸುವಂತಾಗಲಿ ಎಂದು ಶುಭ ಕೋರಿದರು.


ಇದೇ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಕುಮಾರ್‌ ನಿಹಾರ್‌ ಎಸ್‌ ಆರ್‌ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್‌ ಕುಮಾರ್‌ ಬಿ ಮಾತನಾಡಿ ಯಶಸ್ಸು ಕೇವಲ ಒಂದು ದಿನದಿಂದ ಸಿಗುವಂತಹದಲ್ಲ. ನಿರಂತರ ಕಠಿಣ ಪರಿಶ್ರಮ,ಸತತ ಅಭ್ಯಾಸದಿಂದ ಮಾತ್ರ ಸಾಧ್ಯ. ಅಂತಹ ಕಠಿಣ ಪರಿಶ್ರಮದಿಂದಲೇ ಇಂದು ನಿಹಾರ್‌ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ನೀವು ಸಹ ಅವರ ರೀತಿಯಲ್ಲೇ ಕಠಿಣ ಪರಿಶ್ರಮವಹಿಸಿದರೆ ನಿಮಗೂ ಯಶಸ್ಸು ದೂರದ ಮಾತಲ್ಲ ಎಂದು ಕಿವಿಮಾತು ಹೇಳಿದರು.


ಭೌತಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್‌ ಭಟ್ಟ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರೆ ಉಪನ್ಯಾಸಕರುಗಳಾದ ಸುರೇಂದ್ರ ಕುಮಾರ್‌,ಅನಿತಾ ಕೆ ಪಿ ಹಾಗೂ ಡಾ.ರಾಜೇಶ್ವರಿ ಕೆ ಆರ್‌ ಉಪಸ್ಥಿತರಿದ್ದು ಸಹಕರಿಸಿದರು.

Related posts

ರೆಖ್ಯ ಸರಕಾರಿ ಶಾಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೈತೋಟ ರಚನೆ

Suddi Udaya

ಬೆಳ್ತಂಗಡಿ ನಗರದ ಬೂತ್ ಸಂಖ್ಯೆ 105, 106 ಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಬೆಳಾಲು ನಿವೃತ್ತ ಮುಖ್ಯೋಪಾಧ್ಯಾಯ ಎಸ್ ಪಿ ಬಾಲಕೃಷ್ಣ ಬಡೆಕ್ಕಿಲಾಯ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Suddi Udaya

ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಸಂಗಮ ಕಲಾವಿದರು ಉಜಿರೆ ಇದರ 14ನೇ ವರ್ಷದ ವಾರ್ಷಿಕೋತ್ಸವ; ಸನ್ಮಾನ

Suddi Udaya

ಉಜಿರೆ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ

Suddi Udaya

ಸಂಗೀತ ಜೂನಿಯರ್ ಪರೀಕ್ಷೆ: ಬೆಳ್ತಂಗಡಿ ಎಸ್. ಡಿ. ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಪ್ರಾಪ್ತಿ ವಿ. ಶೆಟ್ಟಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya
error: Content is protected !!