July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೆರಿಂಜೆ : ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಮಂಗಲಪ್ರವಚನ

ಪೆರಿಂಜೆ : ಜಪ, ತಪ, ಧ್ಯಾನ, ವೃತ-ನಿಯಮಗಳ ಪಾಲನೆ ಮೊದಲಾದ ಸತ್ಕರ್ಮಗಳಿಂದ ಆತ್ಮನಿಗಂಟಿದ ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ. ಮೋಕ್ಷಪ್ರಾಪ್ತಿಯೇ ಜೀವನದ ಪರಮ ಗುರಿಯಾಗಬೇಕು ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.


ಅವರು ಜೂ27 ರಂದು ಬೆಳ್ತಂಗಡಿ ತಾಲ್ಲೂಕಿನ ಪೆರಿಂಜೆ ಗ್ರಾಮದಲ್ಲಿ ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಮಂಗಲಪ್ರವಚನ ನೀಡಿದರು.
ಪರಿಶುದ್ಧ ಮನಸ್ಸಿನಿಂದ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಸದಾ ದೇವರಧ್ಯಾನ ಮಾಡಬೇಕು. ಆಗ ಹುಟ್ಟು-ಸಾವಿನ ಮಧ್ಯದ ಜೀವನ ಮಂಗಳಕರವಾಗಿರುತ್ತದೆ. ಹೆಚ್ಚು ಚಿಂತೆ ಮಾಡಿದರೆ ಬೇಗನೆ ಚಿತೆಗೆ ಹೋಗಬೇಕಾಗುತ್ತದೆ. ಸದಾ ದೇವರ ಧ್ಯಾನದಲ್ಲಿ ಮನಸ್ಸು ಪವಿತ್ರವಾಗುತ್ತದೆ.


ಇತ್ತೀಚೆಗೆ ನಿಧನರಾದ ಪೆರಿಂಜೆ ಮಾಗಣೆ ಗುತ್ತು ಕರಿಮಣೇಲು ಕೆ. ವಿನಯಕುಮಾರ್ ಸೇಮಿತರು, ಉತ್ತಮ ಶ್ರಾವಕರಾಗಿದ್ದು, ಸಮಾಜಸೇವೆಯಲ್ಲಿ ಪರಿಣತರಾಗಿದ್ದು, ಆದರ್ಶ ಕೌಟುಂಬಿಕ ಜೀವನ ನಡೆಸಿದ್ದರು. ಇತ್ತೀಚೆಗೆ ವೇಣೂರಿನಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಮಾಧ್ಯಮಕೇಂದ್ರದ ಸಂಚಾಲಕರಾಗಿ ಅವರು ಮಾಡಿದ ಸೇವೆಯನ್ನು ಸ್ವಾಮೀಜಿ ಸ್ಮರಿಸಿದರು.


ಅವರ ಆತ್ಮನಿಗೆ ಚಿರಶಾಂತಿ ಕೋರಿ 9 ಬಾರಿ ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣ ಮಾಡಲಾಯಿತು.
ಭಗವಾನ್ ಪುಷ್ಪದಂತ ಸ್ವಾಮಿಗೆ 216 ಕಲಶ ಅಭಿಷೇಕ, ಭಗವಾನ್ ಆದಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಬ್ರಹ್ಮಯಕ್ಷ ದೇವರಿಗೆ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ನಡೆಸಲಾಯಿತು.


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಪಿ. ಜಯರಾಜ ಕಂಬಳಿ, ಪೆರಿಂಜೆಗುತ್ತು ಹಾಗೂ ಊರ-ಪರವೂರ ಶ್ರಾವಕರು, ಶ್ರಾವಕಿಯರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಕಂಪ್ಯೂಟರ್ ಕೋರ್ಸ್ ಉದ್ಘಾಟನೆ

Suddi Udaya

ವಿ. ಹರೀಶ್ ನೆರಿಯ ರವರಿಗೆ ಕನ್ನಡ ಭವನದ “ಕನ್ನಡ ಪಯಸ್ವಿನಿ ಪ್ರಶಸ್ತಿ”ಗೆ ಆಯ್ಕೆ

Suddi Udaya

ಮೊಗ್ರು: ಕಂಚಿನಡ್ಕ ದಲ್ಲಿ ಗುಡ್ಡ ಕುಸಿತ: ಬಿರುಕು ಬಿಟ್ಟ ಮನೆ: ಸಂಪೂರ್ಣ ಹಾನಿ

Suddi Udaya

ಪುದುವೆಟ್ಟು ಶ್ರೀ .ಧ.ಮಂ.ಅನುದಾನಿತ .ಹಿ.ಪ್ರಾ.ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವ ದೂರು ನೀಡಿದ್ದ ಪ್ರಕರಣ ಸಾಕ್ಷಿ ದೂರುದಾರರ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಹಿನ್ನೆಲೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಿಂದ ಇನ್ನೊಂದು ವಿಚಾರಣೆ ಪ್ರಾರಂಭ

Suddi Udaya

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ

Suddi Udaya
error: Content is protected !!