27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜು.4: ಉಜಿರೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ನ ಈ ವರ್ಷದ ಚಟುವಟಿಕೆಗಳು ಜು. 4ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿರುವ ನೂತನ ಪದಾಧಿಕಾರಿಗಳ ಪದಗ್ರಹಣದೊಂದಿಗೆ ಆರಂಭವಾಗಲಿದೆ ಎಂದು ರೋಟರಿ ಕ್ಲಬ್ ನ ನೂತನ ಅಧ್ಯಕ್ಷ ರೊ. ಪೂರಣ್ ವಮ೯ ಹೇಳಿದರು.


ಅವರು ಜೂ.29ರಂದು ರೋಟರಿ ಕ್ಲಬ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಟರಿ ಕ್ಲಬ್ – ಇದು ಸಮಾಜ ಸೇವಾ ಉದ್ದೇಶದಿಂದ ಪೌಲ್ ಹ್ಯಾರಿಸ್‌ ಇವರಿಂದ 1905 ರಲ್ಲಿ ಸ್ಥಾಪಿತಗೊಂಡ ಸಂಘಟನೆ. ಶತಮಾನಗಳ ಇತಿಹಾಸವಿರುವ ರೋಟರಿಯು ಇಂದು ಜಾಗತಿಕವಾಗಿ 200 ದೇಶಗಳಲ್ಲಿ 460 ಕ್ಲಬ್ ಗಳಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಸದಸ್ಯರ ಮೂಲಕ ಮನುಕುಲದ ಸೇವೆಯಲ್ಲಿ ತೊಡಗಿದೆ ಎಂದರು.
ಸಾರ್ಥಕ 5 ದಶಕಗಳನ್ನು ಪೂರೈಸಿರುವ ಬೆಳ್ತಂಗಡಿ ರೋಟರಿ ಕ್ಲಬ್ ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸ್ಥಾಪಕ ಪ್ರಾಂಶುಪಾಲರಾದ ಎನ್. ಜೆ. ಕಡಂಬ ಅವರು ಸ್ಥಾಪಕ ಅಧ್ಯಕ್ಷರಾಗಿ ಮತ್ತು ಸುಧೀರ್ ಜಿ. ಭಿಡೆಯವರು ಕಾರ್ಯದರ್ಶಿಯಾಗುವುದರ ಮೂಲಕ 22-12-1971 ರಲ್ಲಿ ಶುಭಾರಂಭಗೊಂಡಿತು. ಅಂದಿನಿಂದ ಇಂದಿನವರೆಗೆ ತಾಲೂಕಿನಾದ್ಯಂತ ಜನರ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯಾಗಿ ಬೆಳೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಮ್ಮ ಕ್ಲಬ್ ನ ಸದಸ್ಯರಾಗಿರುವುದು ನಮ್ಮ ಹೆಮ್ಮೆ. ನಮ್ಮ ತಾಲೂಕಿನ ಅನೇಕ ಗೌರವಾನ್ವಿತ ಹಿರಿಯರು ಸದಸ್ಯರಾಗಿದ್ದಿದು ಹಾಗೂ ಪ್ರಸ್ತುತ ಉತ್ತಮ ಸಾಧನೆ ಮಾಡಿರುವ 77 ಸಾಧಕರು ನಮ್ಮ ಸದಸ್ಯರಾಗಿರುವುದು ಕಾರ್ಯಕಗಳಿಗೆ ಶಕ್ತಿ ತುಂಬಿದೆ ಎಂದು ತಿಳಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ 53 ವರ್ಷಗಳಲ್ಲಿ ತಾಲೂಕಿನಲ್ಲಿ ಹಲವು ಸೇವಾ ಕಾರ್ಯಗಳನ್ನು ಯಶ ಕೈಗೊಂಡಿದೆ. ಜೊತೆಗೆ ಇಂದಿಗೂ 4 ರೋಟರಿ ಸಮುದಾಯ ದಳಗಳು, 8 ಇಂಟರ್ಯಾಕ್ಟ್ ಕ್ಲಬ್ ಗಳು ಹಾಗು ಕ್ಲಬ್‌ಗಳ ಸಹಭಾಗಿತ್ವದಲ್ಲಿ ಜನಪರ ಸೇವಾ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಕಳೆದ ಸಾಲಿನಲ್ಲಿ ನಮ್ಮ ಕ್ಲಬ್ ನ ಸಾರಥ್ಯವನ್ನು ವಹಿಸಿದ್ದ ರೊ. ಪಿ.ಎಚ್.ಎಫ್ ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿಗಳಾದ ವಿದ್ಯಾಕುಮಾರ್ ಕಾಂಚೋಡ್ ಮತ್ತು ಅವರ ತಂಡ ಅತ್ಯುತ್ತಮ ಸೇವೆಗಳನ್ನು ತಾಲೂಕು ಹಮ್ಮಿಕೊಂಡು ನಮ್ಮ ಜಿಲ್ಲಾ ಸಮ್ಮೇಳನದಲ್ಲಿ ಪ್ಲಾಟಿನಂ ಪ್ಲಸ್ ಅವಾರ್ಡ್ ನೊಂದಿಗೆ ಪುರಸ್ಕೃತಗೊಂಡಿದ್ದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್ ನ 54 ನೇ ವರ್ಷದ ಅಧ್ಯಕ್ಷರಾಗಿ ರೊ. ಪೂರನ್ ವರ್ಮ, ಕಾರ್ಯದರ್ಶಿಗಳ ಸಂದೇಶ್ ಕುಮಾರ್ ರಾವ್, ಖಜಾಂಚಿಯಾಗಿ ರೊ. ಅಬೂಬ್ಬಕ್ಕರ್, ದಂಡಪಾಣಿಯಾಗಿ ರೊ. ವೈಕುಂಠ ಪ್ರಭ ನಿರ್ದೇಶಕರಾಗಿ ರೊ. ಪ್ರಕಾಶ್ ಪ್ರಭು, ರೊ. ಡಾ. ದಯಾಕರ್ ಎಂ, ರೊ. ಡಾ| ಸಾತ್ವಿಕ್ ಜೈನ್, ಜಯಕುಮಾ‌ರ್ ಶೆಟ್ಟಿ, ರೊ. ರಕ್ಷಾ ರಾಷ್ಟ್ರೀಶ್, ಟಿ.ಆರ್.ಎಫ್. ಚಯರ್ ಮ್ಯಾನ್ ಆಗಿ ರೊ. ಮೇ. ಜನರಲ್ ಡೋನರ್ ಎಂ. ವಿ. ಭಟ್, ಪಬ್ಲಿಕ್ ಇಮೇಜ್ ಚಯರ್ ಮನ್ ಆಗಿ ರೊ. ಬಿ. ಕೆ. ಧನಂಜಯ್‌ ರಾವ್, ಚೆಯರ್ ಮನ್ ಆಗಿ ರೊ. ವಿವೇಕ್ ಸಂಪತ್ ಆರಿಗ, ರೋಟರ್-ನ ಎಡಿಟರ್ ಆಗಿ ರೊ. ಶ್ರೀಧರ್ ಕೆ. ವಿ. ಡಿಸ್ಟ್ಕ್, ಪ್ರೊಜೆಕ್ಟ್ ಚೆಯರ್ಮನ್ ಆಗಿ ರೊ. ಶ್ರವಣ್ ಕಾಂತಾಜೆ ಇವರುಗಳು ಜು. 4 ಗುರುವಾರ ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್, ರೊ. ಮೇಜರ್ ಡೋನ‌ರ್ ಪಿ. ಕೆ. ರಾಮಕೃಷ್ಣ, ಸಹಾಯಕ ಗವರ್ನರ್ ರೊ. ಮೊಹಮ್ಮದ್ ವೊಳವೂರು ಹಾಗೂ ವಲಯ ಸೇನಾನಿ ರೊ. ಮನೋರಮಾ ಭಟ್ ಅವರ ಉಪಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ನಮ್ಮ ಸೇವಾ ಕಾರ್ಯಗಳು:

ಬೆಳ್ತಂಗಡಿ ರೋಟರಿಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಸರ ಸಂವರ್ಧನಾ ಅಭಿಯಾನ, ಆರೋಗ್ಯ ಜಾಗೃತಿ ಶಿಬಿರ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು ಹೀಗೆ ವಿವಿಧ ಆಯಾಮಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಅಯೋಜಿಸಲಿದ್ದೇವೆ.

‘ರೋಟರಿಯ ಮ್ಯಾಜಿಕ್ ‘ (Magic of Rotary) ಎಂಬ ಧೈಯ ವಾಕ್ಯಗಳೊಂದಿಗೆ ಈ ವರ್ಷ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ನಮ್ಮ ಜಿಲ್ಲಾ ಗವರ್ನರ್ ರೊ. ವಿಕ್ರಂ ದತ್ತ ಅವರ ಕಲ್ಪನೆಯಂತೆ ಹಿರಿಯ ನಾಗರೀಕರಿಗಾಗಿ ಸಂಧ್ಯಾ ಸುರಕ್ಷಾ ಯೋಜನೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ಶುದ್ಧ ಕುಡಿಯುವ ನೀರು ಪೂರೈಕೆ, ರಸ್ತೆ ಸುರಕ್ಷತೆ ಕುರಿತಂತೆ ಜಾಗೃತ ಹೀಗೆ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೇವೆ. ಅದರೊಂದಿಗೆ ರೋಟರಿ ಬೆಂಗಳೂರು ಇಂದಿರಾ ನಗದ ಕ್ಲಬ್ ಹಾಗೂ ಕ್ಯಾನ್ ಫಿನ್ ಹೋಂ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಲೂಕಿನ ಅಂಗನವಾಡಿಗಳು ಹಾಗೂ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಾಲೆಗಳಿಗೆ ಕಲಿಹ ಉಪಕರಣಗಳ ಕೊಡುಗೆ, ಶಾಲೆಗಳಿಗೆ ಸೋಲಾರ್ ವಿದ್ಯುದ್ದೀಕರಣ, ಲ್ಯಾಬ್ ನಿರ್ಮಾಣ ಹೀಗೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದ್ದೇವೆ.
ಪರಿಸರ ಜಾಗೃತಿ ಹಾಗೂ ಸಂವರ್ಧನೆಯ ನಿಟ್ಟಿನಲ್ಲಿ ಮಳೆಕೊಯ್ಲು, ನೀರಿಂಗಿಸಲು ಸಮುದಾಯ ಭಾಗವಹಿಸುವಿಕೆಯಿಂದ ಒಡ್ಡುಗಳ ನಿರ್ಮಾಣ ಸಮುದಾಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜನ ನೀಡಲಿದ್ದೇವೆ. ತಾಲೂಕಿನ ಶಿಕ್ಷಕರ ಕೌಶಲ್ಯವರ್ಧನೆಗಾಗಿ ತರಬೇತಿ ಶಿಬಿರದ ಯೋಜನೆ ರೂಪಿಸಲಾಗಿ ಇನ್ನು ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಕೊಡುಗೆ ಹಾಗೂ ಜಾನುವಾರು ಆರೋಗ್ಯಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ ಎಂದು ತಮ್ಮ ಸೇವಾವಧಿಯಲ್ಲಿ ಹಮ್ಮಿಕೊಳ್ಳಲಾಗುವ ಯೋಜನೆಗಳ ಮಾಹಿತಿ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಕಳೆದ ಸಾಲಿನ ಅಧ್ಯಕ್ಷ ರೊ. ಪಿ.ಹೆಚ್.ಎಫ್ ಅನಂತ ಭಟ್ ಮಚ್ಚಿಮಲೆ, ಕಾಯ೯ದಶಿ೯ ರೊ.ವಿದ್ಯಾ ಕುಮಾರ್ ಕಾಂಚೋಡು, ನೂತನ ಖಜಾಂಚಿ ರೊ.ಅಬೂಬಕ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಪಿ.ಹೆಚ್.ಎಫ್ ಅನಂತ ಭಟ್ ಮಚ್ಚಿಮಲೆ ಅವರು ವೈಯಕ್ತಿಕ ನೆಲೆಯಲ್ಲಿ ದೇಣಿಗೆ ಹಸ್ತಾಂತರ ಮಾಡಿದರು.

Related posts

ಮುಂಡಾಜೆ ಗ್ರಾ.ಪಂ. ನಲ್ಲಿ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಮಹಾ ಅಭಿಯಾನ

Suddi Udaya

ಇಂದಬೆಟ್ಟು ಕೋಯನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ

Suddi Udaya

ಗುರುವಾಯನಕೆರೆಯ ‘ಕೆರೆ’ ಗೆ ಲೋಕಾಯುಕ್ತ ನ್ಯಾಯಾಮೂರ್ತಿ ಭೇಟಿ, ಪರಿಶೀಲನೆ

Suddi Udaya

ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಶ್ರೀಮತಿ ಜಾಜೀವಿಯವರ ವೈವಾಹಿಕ ಜೀವನದ ‘ ಸುವರ್ಣ ಸಂಭ್ರಮ’: ಆದಿಚುಂಚನಗಿರಿ ಶಾಖಾ ಮಠಾ ಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರ

Suddi Udaya

ಉಪ್ಪಿನಂಗಡಿ – ಮಡಂತ್ಯಾರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಬಿಡುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಎಸ್‌ಡಿಪಿಐ ನಿಯೋಗ

Suddi Udaya
error: Content is protected !!