23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶುಭಾರಂಭಸಂಘ-ಸಂಸ್ಥೆಗಳು

ಉಜಿರೆ ಪ್ರಗತಿ ಮಹಿಳಾ ಮಂಡಲದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಉಜಿರೆ: ಪ್ರಗತಿ ಮಹಿಳಾ ಮಂಡಲದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಜೂನ್ 30 ರಂದು ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ಜನಾರ್ಧನ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ನೇರವೇರಿಸಿ ಮಾತನಾಡಿ 7 ದಶಕಗಳ ಹಿಂದೆ ಉಜಿರೆಯಲ್ಲಿ ಪ್ರಗತಿ ಮಹಿಳಾ ಮಂಡಲವನ್ನು ಕಟ್ಟಿ ಬೆಳೆಸಿದ ಎಲ್ಲರಿಗೂ ವಂದನೆಗಳು. ಅಂದು ಉಜಿರೆ ಕುಗ್ರಾಮವಾಗಿತ್ತು, ಇಂದು ಉಜಿರೆ ಬಹಳಷ್ಟು ಬೆಳೆದಿದೆ. ಪ್ರಗತಿ ಮಹಿಳಾ ಮಂಡಲದಿಂದ ಶಿಕ್ಷಣ ಕೇಂದ್ರ ತೆರೆಯುವಂತಾಗಲಿ ಎಂದರು.

ಶಾಸಕ ಹರೀಶ್ ಪೂಂಜರವರು ಮಾತನಾಡಿ ತಾಯಂದಿರ ಸೇವೆ ಮಾಡುವ ನಿಟ್ಟಿನಲ್ಲಿ ಪ್ರಗತಿ ಮಹಿಳಾ ಮಂಡಲದ ನೂತನ ಕಟ್ಟಡಕ್ಕೆ 5 ಲಕ್ಷ ಅನುದಾನ ನೀಡಿದ್ದೇನೆ.ಮುಂದೆ ಈ ಮಹಿಳಾ ಮಂಡಲದಿಂದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ನಡೆಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಅವರನ್ನು ಪ್ರಗತಿ ಮಹಿಳಾ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಕೆ.ಪ್ರತಾಪಸಿಂಹ ನಾಯಕ್, ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಇದರ ಮಾಲಕರಾದ ಕೆ.ಮೋಹನ್ ಕುಮಾರ್,ಪ್ರಗತಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಸರಸ್ವತಿ ಎನ್ ರಾಜ್,ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ ಇದರ ಸವಿತಾ ಜಯದೇವ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಪೂರ್ಣಿಮಾ ಸಂಜೀವ್ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿ ಮಹಿಳಾ ಮಂಡಲದ ಏಳಿಗೆಗೆ ದುಡಿದವರನ್ನು ಗೌರವಿಸಲಾಯಿತು. ಉಜಿರೆ ಜನತೆಯ ಪರವಾಗಿ ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷರನ್ನು ಗೌರವಿಸಲಾಯಿತು.

ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಸ್ವಾಗತಿಸಿದರು. ಕಾರ್ಯದರ್ಶಿ ಗಾಯತ್ರಿ ಶ್ರೀಧರ್ ಪ್ರಸ್ತಾವಿಕ ಮಾತನ್ನಾಡಿದರು.

Related posts

ನಾಳ ದೇವಸ್ಥಾನದಲ್ಲಿ ಭೀಷ್ಮಾರ್ಜುನ ತಾಳಮದ್ದಳೆ

Suddi Udaya

ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಿನ್ನರ ಮೇಳ ರಂಗ ತಂಡದಿಂದ ‘ ‘ಇರುವೆ ಪುರಾಣ ‘ ಮಕ್ಕಳ ನಾಟಕ ಪ್ರದರ್ಶನ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಯಶೋ ನಮನ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಆಟಿದ ಕೂಟ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya
error: Content is protected !!