ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಜೂ. 30ರಂದು ಸಂಘದ ಸಹಕಾರಿ ಸಭಾಭವನದ ವಠಾರದಲ್ಲಿ ಜರುಗಿತು.
ಸಂಘದ ವಸಂತ ಮಜಲು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಈ ಸಾಲಿನಲ್ಲಿ 263.ಕೋಟಿ ವ್ಯವಹಾರ ನಡೆಸಿ, ರೂ.1ಕೋಟಿ 37ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.20ಡಿವಿಡೆಂಡ್ ನೀಡುವುದಾಗಿ ಪೋಷಿಸಿದರು.
37 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ
ಮುಖ್ಯ ಕಾರ್ಯನಿರ್ವಣಧಿಕಾರಿ ಸತ್ಯ ಶಂಕರ್ ಕೆಜಿ ರರಿಗೆ ಬೀಳ್ಕೊಡುಗೆ ಹಾಗೂ ಗೌರಾರ್ಪಣೆ ಕಾರ್ಯಕ್ರಮ ನಡೆಯಿತು. ಎಸ್. ಎಸ್ ಎಲ್ ಸಿ ಮತ್ತು ಪಿ ಯು ಸಿ ಅತಿ ಹೆಚ್ಚು ಅಂಕಗಳಿಸಿದ 39 ಮಂದಿ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.. ಸೊಸೈಟಿ ಯಲ್ಲಿ ಅತಿ ಹೆಚ್ಚು ವ್ಯವಹಾರ ಮಾಡಿದಾರಿಗೆ
ಕೃಷಿ ಸಲಕರಣೆ ವಿತರಿಸಲಾಯಿತು . ದಂತ ವೈದ್ಯಕೀಯದಲ್ಲಿ
4ನೇ ರಾಂಕ್ ಗಳಿಸಿದ ಅನುದೀಕ್ಷ.
ರವರನ್ನು ಸನ್ಮಾನಸಲಾಯಿತು.
ಜನಾರ್ಧನ ಪೂಜಾರಿ. ಹೇಮಂತ್ ಪೂಜಾರಿ ಸುರೇಶ ಆರ್. ಎನ್. ಕೇಶವಪೂಜಾರಿ
ಅನಿಸಿಕೆ ವ್ಯಕ್ತಪಡಿಸಿದರು
ಸಭೆಯಲ್ಲಿ ಸಂಘದ ನಿರ್ದೇಶಕರಾದ ಹರಿದಾಸ್ ಪಡಂತ್ತಾಯ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಮಮತಾ. ಗೋಪಾಲ್ ನಾಯ್ಕ. ಕುಶಾಲಪ್ಪ ಗೌಡ. ಬಾಲಕೃಷ್ಣ ಗೌಡ ಬಿರ್ಮೊಟ್ಟು .ಉದಿತ್ ಕುಮಾರ್. ಶೇಖರ ನಾಯ್ಕ,ಲೋಕೇಶ್. ಕೇಶವ ಪೂಜಾರಿ. ಹಾಗೂ ಸಂಘದ ಸರ್ವ ಸದಸ್ಯರು,ಡಿ.ಸಿ.ಸಿ. ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ನಿರ್ದೇಶಕ ಶೇಖರ್ ನಾಯ್ಕ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ್ ಕೆ.ಜೆ. ವಾರ್ಷಿಕ ವರದಿ ವಾಚಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿಸಿಬ್ಬಂದಿ ಸಂತೋಷ್ ಧನ್ಯವಾದವಿತ್ತರು.