ಅಂಡಿOಜೆ … ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವೇಣೂರು ವಲಯದ ಅಂಡಿಂಜೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಶ್ರೀ ವಿನಾಯಕ ಶ್ರೀ ರಾಮ ಭಜನಾ ಮಂದಿರ ಅಂಡಿoಜೆ ಯಲ್ಲಿಜೂ. 30ರಂದು ಜರಗಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಿತಿನ್ ಮಂಡೆವು ಮಾಡಿ ಮಾತನಾಡುತ್ತ ಬೆಳ್ತಂಗಡಿ ತಾಲೂಕಿನಲ್ಲಿ ಜನ ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾಲಂಬಿಯಾಗಿ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಪೂಜ್ಯ ಡಾ . ಡಿ ವೀರೇಂದ್ರ ಹೆಗ್ಗಡೆ ಯವರು ಎಂದು ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು ನಾವು ಇದನ್ನ ಯಾರೂ ಕೂಡ ಮರೆಯಬಾರದು ಎಂದು ಸಲಹೆ ನೀಡಿದರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ದುಶ್ಚಟಕ್ಕೆ ಬಲಿಯಾ ದವರನ್ನ ಸಮಾಜದ ಮುಖ್ಯ ವಾಹಿನಿಗೆ ತಂದಿರುವುದು ಸಾವಿರಾರು ಕುಟುಂಬಗಳಿಗೆ ಹೊಸ ಬೆಳಕನ್ನು ನೀಡಿದೆ ಸಮಾಜದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಯನ್ನ ಪೂಜ್ಯರು ತಂದಿದ್ದಾರೆ ಕಡು ಬಡತನದಲ್ಲಿ ಇರುವ ಕುಟುಂಬಗಳಿಗೆ ಸತ್ಯ ನಾರಾಯಣ ಪೂಜೆಯನ್ನು ಮಾಡಲೂ ಅರ್ಥಿಕ ಅಡಚಣೆಯನ್ನು ಗಮನಿಸಿದ ಪುಜ್ಯರು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಆಯೋಜನೆ ಮಾಡುವ ಮೂಲಕ ಗ್ರಾಮದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ದೇವರ ಕೃಪೆಗೆ ಪಾತ್ರರಾಗುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಭಜನಾ ಮಂಡಳಿ ಗಳ ರಚನೆ, ಭಜನಾ ಮಂದಿರ ನಿರ್ಮಾಣಕ್ಕೆ ಅರ್ಥಿಕ ಸಹಕಾರ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪಾರ ಮುಂದಿನ ಪೀಳಿಗೆಗೆ ಇವುಗಳನ್ನ ಪರಿಚಯಿಸ ಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು ತುಳುನಾಡಿನ ಸಂಸ್ಕೃತಿ ಯನ್ನ ಮರು ಶೃಷ್ಟಿಸಿದ ಕೀರ್ತಿ ಯೋಜನೆಗೆ ಸಲ್ಲುತ್ತದೆ ಸರಕಾರ ಮಾಡುವ ಕೆಲಸಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಜನೆ ಕಾರ್ಯ ನಿರ್ವಹಿಸಿಸುತ್ತಿದೆ ಎಂದು ಸಂತಸವನ್ನು ಹಂಚಿಕೊಂಡರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ 1 ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್ ಮಾತನಾಡುತ್ತ ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕುಗಳ ಜೋತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಾರಿಟೇಬಲ್ ಟ್ರಸ್ಟ್ ಮೂಲಕ ಒಪ್ಪಂದ ಮಾಡಿಕೊಂಡು ಗುಂಪುಗಳ ಕಾತೆಯನ್ನ ತೆರೆದು ಗುಂಪಿನ ಸದಸ್ಯ ರಿಗೆ ಅರ್ಥಿಕ ಸಹಕಾರ ಒದಗಿಸಲಾಗುತ್ತದೆ ಇದರ ಮೂಲಕ ಜನರಿಗೆ ಬ್ಯಾಂಕ್ ಸೌಲಭ್ಯ ವನ್ನ ಮನೆ ಬಾಗಿಲಿಗೆ ತಲೂಪಿಸಿದಂತೆ ಆಗಿದೆ ಎಂದರು ಜನ ಜಾಗೃತಿ ವೇದಿಕೆಯ ವಲಯ ಅದ್ಯಕ್ಷರಾದ ಶ್ರೀ ಮೋಹನ್ ಅಂಡಿoಜೆ ಮಾತನಾಡುತ್ತ ಬಯಲು ಮುಕ್ತ ಗ್ರಾಮ ನಿರ್ಮಾಣ ಮಾಡುವಲ್ಲಿ ಯೊಜನೆ ಶ್ರಮಿಸಿದ ಪರಿಣಾಮ ಪ್ರತೀ ಮನೆಯಲ್ಲಿಯೂ ಸೌಚಾಲಯ ನಿರ್ಮಾಣದ ಜಾಗೃತಿ ಮೂಡಿದೆ ಎಂದರು ಅಪ ಪ್ರಚರಾಗಳಿಗೆ ಹೆಚ್ಚು ಗಮನ ಕೊಡದೆ ಸತ್ಯದ ಕಡೆಗೆ ಗಮನ ಹರಿಸಬೇಕು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಚಟುವಟಿಕೆಗಳಿಗೆ ಯಾರೂ ಕೂಡ ಸಹಕಾರ ನೀಡಬಾರದು ಎಂದು ಕರೆ ನೀಡಿದರು
ವೇದಿಕೆಯಲ್ಲಿ ಶ್ರೀ ವಿನಾಯಕ ಶ್ರೀ ರಾಮ ಭಜನಾ ಮಂದಿರದ ಅದ್ಯಕ್ಷರಾದ ಶ್ರೀ ಸುರೇಂದ್ರ ಕಂಬಳಿ ಬಲ್ಲೋಲಿಗೆ ಗುತ್ತು, ಶ್ರೀ ವಸಂತ ಎಚ್ ಸಾಲಿಯಾನ್, ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ ಪರಮೇಶ್ವರ್ , ತಾಲೂಕ್ ಯೋಜನಾಧಿಕಾರಿ ಶ್ರೀ ದಯಾನಂದ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಆನಂದ ಪೂಜಾರಿ, ಶ್ರಿದರ ಪೂಜಾರಿ, ನೂತನ ಅಧ್ಯಕ್ಷರಾದ ಯಶೋದರ ಪೂಜಾರಿ, ಸುಲೋಚನಾ , ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ವಸಂತ ಮಡಿವಾಳ ಅಧ್ಯಕ್ಷತೆಯನ್ನು ವಹಿಸಿದ್ದರು ವಲಯ ಮೇಲ್ವಿಚಾರಕ ರಾದ ಶ್ರೀಮತಿ ಶಾಲಿನಿ ಸ್ವಾಗತಿಸಿದರು , ಸೇವಾಪ್ರತಿನಿಧಿ ಗಳಾದ ಬಾಗ್ಯ ಹಾಗು ನಳಿನಿ ಸಹಕರಿಸಿದರು ಅಂಡಿಂಜೆ ಯುವಕ ಮಂಡಲದ ಅದ್ಯಕ್ಷರಾದ ಪ್ರಾಣೇಶ್ ನಿರೂಪಿಸಿದರು