ಬೆಳ್ತಂಗಡಿ: ಕಲ್ಮಂಜ ಗ್ರಾಮ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜಿರೆ-ಇಂದಬೆಟ್ಟು, ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ 1.10 ರಲ್ಲಿರುವ ಅಂಬಡಬೆಟ್ಟು ಸೇತುವೆಯು ಹಳೆಯದಾಗಿದ್ದು ಘನ ವಾಹನಗಳ ಸಂಚಾರವನ್ನು ಅನಾನುಕೂಲವಾಗಿದ್ದು ತಾತ್ಕಾಲಿಕವಾಗಿ ನಿಷೇಧಿಸಲಾಗಿದ್ದು ಬದಲಿ ರಸ್ತೆಯನ್ನು ಅನುಸರಿಸುವಂತೆ ತಿಳಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜಿರೆ-ಇಂದಬೆಟ್ಟು, ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ 1.10 ರಲ್ಲಿರುವ ಅಂಬಡಬೆಟ್ಟು ಸೇತುವೆಯು ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಕೆ.ಎಸ್.ಆರ್.ಟಿ.ಸಿ ಬಸ್, ಶಾಲಾ ವಾಹನಗಳು ಹಾಗೂ ಇತರೆ ವಾಹನಗಳು ಸಂಚರಿಸುವ (ಉಜಿರೆಯಿಂದ ಇಂದಬೆಟ್ಟು ಕಡೆಗೆ) ಪ್ರಮುಖ ಸಂಪರ್ಕ ಹೊಂದಿರುವ ಸೇತುವೆಯಾಗಿರುತ್ತದೆ. ಸೇತುವೆಯು ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿರುವುದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ, ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ.
ಘನ ವಾಹನಗಳು ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಈ ಕೆಳಗಿನಂತೆ ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ:
1) ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ದ್ವಾರದಿಂದ – ಸುರ್ಯ ದೇವಸ್ಥಾನ ಮಾರ್ಗವಾಗಿ – ಕೇಳ್ತಾಜೆ ಮುಖಾಂತರ ಸಂಚರಿಸುವುದು. 2) ಬೆಳ್ತಂಗಡಿ-ಕಿಲ್ಲೂರು-ಕಾಜೂರು ರಸ್ತೆಯ ಇಂದಬೆಟ್ಟು ಗ್ರಾಮದಿಂದ ನೇತ್ರಾವತಿ ಎಸ್.ಟಿ.ಕಾಲೋನಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ರಸ್ತೆಯಾಗಿ – ರಾಜ್ಯ ಹೆದ್ದಾರಿ-276 ರಸ್ತೆಯಾದ ಸುಳ್ಯ ಪೈಚಾರು ಬೆಳ್ಳಾರೆ ಸವಣೂರು ಕುದ್ಮಾರು ಅಲಂಕಾರು ಸುರುಳಿ ಮಾದೇರಿ ಪಟ್ರಮೆ ಧರ್ಮಸ್ಥಳ ಮುಂಡಾಜೆ ದಿಡುಪೆ ರಸ್ತೆಯನ್ನು ಸಂಪರ್ಕಿಸುವುದು.
ಈ ಬಗ್ಗೆ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗ, ಮಂಗಳೂರು ಇವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಅವಲೋಕಿಸಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ ನೀಡಿದ್ದಾರೆ.