24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದಿಂದ ಉಜಿರೆಯ ಶ್ರೀಧರ‌ ಕೆ.ವಿ ರವರಿಗೆ ಸನ್ಮಾನ

ಉಜಿರೆ: ಸುರಕ್ಷಾ ಮೆಡಿಕಲ್ಸ್ ನ‌ ಮಾಲೀಕರೂ, ಸೇವಾಭಾರತಿ ಕನ್ಯಾಡಿ ಇದರ ” ಆರೋಗ್ಯಂ” ವಿಭಾಗದ ಮುಖ್ಯಸ್ಥರೂ ಆಗಿರುವ ರೊ. ಶ್ರೀಧರ ಕೆವಿ ಅವರನ್ನು ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ 66 ನೇ ವಾರ್ಷಿಕ ಮಹಾ ಸಭೆಯಲ್ಲಿ ಸನ್ಮಾನಿಸಲಾಯಿತು.

ಶ್ರೀಧರ ಕೆ.ವಿ ಅವರು ತಾಲೂಕಿನ ಬೇರೆ ಬೇರೆ ಸಂಘ ಸಂಸ್ಥೆ ಗಳನ್ನು ಒಗ್ಗೂಡಿಸಿ ಈ ತನಕ 75 ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸದ್ದು ಮಾತ್ರವಲ್ಲದೆ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ರಕ್ತದ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘವು ಅವರನ್ನು ಗುರುತಿಸಿ ಗೌರವಿಸಿದೆ.

ಈ ಸಭೆಯಲ್ಲಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಜಗನ್ನಾಥ್ ಶಿಂಧೆ, ಕಾರ್ಯದರ್ಶಿ ರಾಜೀವ್ ಸಿಂಘಲ್ , ಕರ್ನಾಟಕ ಔಷದ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ, ಗೌರವ ಕಾರ್ಯದರ್ಶಿ ಎ.ಕೆ ಜೀವನ್ , ಕರ್ನಾಟಕ ಸರಕಾರದ ಮುಖ್ಯ ಔಷಧ ನಿಯಂತ್ರಕರಾದ ಭಾಗೋಜಿ ಟಿ ಖಾನಾಪುರೆ, ಉಪ ಔಷಧ ನಿಯಂತ್ರಕರಾದ ಸುರೇಶ್ ಕೆಂಪಯ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Related posts

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರಿಗೆ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಶ್ರದ್ಧಾಂಜಲಿ ಅರ್ಪಣೆ

Suddi Udaya

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸತ್ಯರ್ಥ ಎಸ್. ಜೈನ್ ಪ್ರಥಮ ಸ್ಥಾನ

Suddi Udaya

ಲಾಯಿಲ ಗುರಿಂಗಾನದಲ್ಲಿ ಗುಡ್ಡದಲ್ಲಿ ಭಾರಿ ಬೆಂಕಿ ಅನಾಹುತ:

Suddi Udaya

ಇಂದು(ಜ.13) ಬೆಳ್ತಂಗಡಿ ಲಿಯೋ ಕ್ಲಬ್ ಉದ್ಘಾಟನೆ ಹಾಗೂ ಪದಗ್ರಹಣ

Suddi Udaya

ನಾಲ್ಕೂರು: ಹುಂಬೆಜೆ ಮನೆಯ ಜನಾರ್ಧನ ಪೂಜಾರಿ ನಿಧನ

Suddi Udaya

ಬೆಳಾಲು: ಧ.ಮಂ. ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!