September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಯುವ ವಾಹಿನಿ ಸಂಚಲನಾ ಸಮಿತಿ ಮತ್ತು ಶ್ರೀ ಗುರುನಾರಾಯಣ ಸೇವಾ ಸಂಘದ ಆಶ್ರಯದಲ್ಲಿ ಗುರುಪೂಜೆ

ಉಜಿರೆ: ನಾರಾಯಣ ಗುರುಗಳು ಹಿಂದುಳಿದ ಸಮಾಜದ, ಕೆಳವರ್ಗದ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡುವುದರ ಮೂಲಕ ಅನುಕಂಪದ ಮೂರ್ತಿಯಾಗಿದ್ದರು. ವಿದ್ಯೆ ಮತ್ತು ಸಂಘಟನೆಯ ಶಕ್ತಿಯನ್ನು ಜಗತ್ತಿಗೆ ಸಾರಿ ಹೇಳಿದವರು. ಆ ಮೂಲಕ ಇಡೀ ಜಗತ್ತಿನಿಂದ ಸ್ವೀಕರಿಸಲ್ಪಟ್ಟ ಮಹಾಗುರುಗಳಾಗಿದ್ದರು. ಆದ್ದರಿಂದ ನಾವು ವಿದ್ಯೆ ಮತ್ತು ಸಂಘಟನೆಯ ಶಕ್ತಿಯ ಮೂಲಕ ರಾಜಕೀಯ ಶಕ್ತಿಯನ್ನೂ ಕೂಡ ಪಡೆದು ಸಮಾಜದಲ್ಲಿ ಗುರುತಿಸುವಂತಾಗಬೇಕು ಮತ್ತು ಸಂಕುಚಿತ ಮನೋಭಾವ ಬಿಟ್ಟು ಮುಂದೆ ಬರಬೇಕೆಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಹೇಳಿದರು.

ಅವರು ಯುವ ವಾಹಿನಿ ಸಂಚಲನಾ ಸಮಿತಿ, ಉಜಿರೆ ಮತ್ತು ಶ್ರೀ ಗುರುನಾರಾಯಣ ಸೇವಾ ಸಂಘ ಉಜಿರೆ ಇದರ ಜಂಟಿ ನೇತೃತ್ವದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಮಾತನಾಡಿ, ಗುರು ಪೂಜೆಯ ಮೂಲಕ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶ ಈಡೇರುತ್ತದೆ. ಜಾತಿ ಸಂಘಟನೆಗಳಿರುವುದು ಇತರ ಜಾತಿಗಳನ್ನು ತುಳಿಯುವುದಕ್ಕಲ್ಲ, ಬದಲಾಗಿ ನಮ್ಮ ಅಭಿವೃದ್ಧಿಗಾಗಿ ಎಂದರು.

ಉಜಿರೆ ಶ್ರೀ ಗುರುನಾರಾಯಣ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಬರಮೇಲು ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಉಜಿರೆ ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್ ಬರಮೇಲು ಪ್ರಾಸ್ತಾವಿಕವಾಗಿ ಮಾತನಾಡಿ, ಉಜಿರೆಯಲ್ಲಿ ಗುರುಮಂದಿರ ನಿರ್ಮಾಣ ಮಾಡುವ ನಮ್ಮ ಕನಸಿಗೆ ಎಲ್ಲರೂ ಸಹಕರಿಸಲು ಕೋರಿದರು. ಅತಿಥಿಗಳಾಗಿ ವೇದಿಕೆಯಲ್ಲಿ ಯುವ ವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸದಾಶಿವ ಊರ, ಉಜಿರೆ ಘಟಕದ ಕಿಶೋರ್ ಪೆರ್ಲ, ಯುವ ಬಿಲ್ಲವ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಎಂ.ಕೆ.ಪ್ರಸಾದ್, ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷರಾದ ಸಂಪತ್ ಸುವರ್ಣ, ಉಜಿರೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶ್ರೀಧರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತ, ಉಜಿರೆಯ ಸಿವಿಲ್ ಇಂಜಿನಿಯರ್ ಸೂರ್ಯನಾರಾಯಣ, ಗ್ರಾ.ಪಂ.ಸದಸ್ಯರಾದ ಗುರುಪ್ರಸಾದ್ ಕೋಟ್ಯಾನ್, ಸವಿತಾ, ನಾಗವೇಣಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಜ್ಙಾ ಓಡಿನ್ನಾಳ ನಿರೂಪಿಸಿ, ಶಿಕ್ಷಕ ಸುರೇಶ್ ಮಾಚಾರ್ ಸ್ವಾಗತಿಸಿದರು. ಮನೋಜ್ ಕುಂಜರ್ಪ ಸಹಕರಿಸಿದರು.

Related posts

ಮಾಲಾಡಿ ಶಾಲಾ ವಿದ್ಯಾರ್ಥಿಗಳಿಗೆ ದಾನಿ ಹಾಜಿ ಲತೀಫ್ ಸಾಹೇಬ್‌ ಕೊಡುಗೆಯಾಗಿ ನೀಡಿದ ಉಚಿತ ನೋಟ್ ಪುಸ್ತಕಗಳ ವಿತರಣೆ

Suddi Udaya

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ : ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಜಂಟಿ ಸಮಾವೇಶ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ರಿಟ್ ಪಿಟಿಷನ್ ವಜಾ

Suddi Udaya

ಮದ್ರಸ ಪಬ್ಲಿಕ್ ಪರೀಕ್ಷೆ: ಕುಂಟಿನಿ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸಕ್ಕೆ ಶೇ.100 ಫಲಿತಾಂಶ

Suddi Udaya

ಆಳ್ವಾಸ್ ‘ಪುನರ್ಜನ್ಮ’ ಕೇಂದ್ರದ 6ನೇ ವಾರ್ಷಿಕೋತ್ಸವ

Suddi Udaya
error: Content is protected !!