ತೆಕ್ಕಾರು: ಧಾರಾಕಾರ ಮಳೆಗೆ ಕುಸಿದು ಬಿದ್ದ ಸರಳೀಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಚು ಕುಸಿದಿದ್ದು ಕೂಡಲೇ ಶಿಕ್ಷಕರು ಮಕ್ಕಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದ ಬಗ್ಗೆ ಜು.1 ರಂದು ವರದಿಯಾಗಿದೆ.
ಸುಮಾರು 50 ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಶಾಲೆಯ ಮಾಡು ಅತಿ ಶೀತಲ ವ್ಯವಸ್ಥೆಗೆ ತಲುಪಿ ಈಗ ಕುಸಿತವಾಗಿದೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅನಾಹುತ ನಡೆಯುವ ಮುಂಚೆ ಇದನ್ನು ದುರಸ್ತಿ ಪಡಿಸಬೇಕಾಗಿ ವಿನಂತಿ.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಮೂಲ್ಯ ಮತ್ತು ಗ್ರಾಮಸ್ಥರಾದ ಇನಾಸ್ ರೊಡ್ರಿಗಸ್ ಸಹಕರಿಸಿದರು.