ನಾರಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಾರಾವಿಯಲ್ಲಿ ಭತ್ತ ನಾಟಿ ಮತ್ತು ಯಂತ್ರ ಶ್ರೀ ಕಾರ್ಯಕ್ರಮವು ನಡೆಯಿತು.
ಶ್ರೀ ಕ್ಷೇ, ಧ, ಗ್ರಾ ಯೋಜನೆಯ ಯಂತ್ರ ಬ್ಯಾಂಕ್ ಮೆನೇಜರ್ ಉಮೇಶ್ ರವರು ಮಾತನಾಡಿ ಯೋಜನೆಯು ಭತ್ತ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಿಹೆಚ್.ಎಸ್.ಸಿ ಕೇಂದ್ರದಲ್ಲಿ ಭತ್ತ ಕೃಷಿಗೆ ಯೋಗ್ಯವಾದ ಉಳುಮೆಗೆ, ನಾಟಿಗೆ ಕಟಾವುಗೆ ಕಡಿಮೆ ಬಾಡಿಗೆದರದಲ್ಲಿ ಮಷಿನ್ ಲಭ್ಯವಿದ್ದು ಹೆಚ್ಚಿನ ರೈತರು ಇದರ ಉಪಯೋಗ ಪಡೆದು ಕೊಳ್ಳುವತ್ತೇ ತಿಳಿಸಿದರು,
ಭತ್ತ ಕೃಷಿಗೆ ಸಸಿ ಮಡಿ ತಯಾರಿಸಿ ನಾಟಿಗೆ ಯೋಗ್ಯ ವಾದ ಉತ್ತಮ ಭತ್ತದ ತಳಿ ಆಯ್ಕೆ ಮಾಡಿ ಉತ್ತಮ ಗುಣಮಟ್ಟದ ಸಸಿ ಮಡಿಯನ್ನು ಯೋಜನೆಯಿಂದ ತರಬೇತಿ ಪಡೆದು ಪ್ರಶಾಂತ್ ಚಿತ್ತಾರ ರವರು ಕೇಂದ್ರೀಕ್ರತ್ ನರ್ಸರಿ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಸಸಿ ಮಡಿ ನೀಡುತ್ತಿದ್ದಾರೆ ಇದರ ಪ್ರಯೋಜನವನ್ನು ರೈತರು ಪಡೆದು ಹೆಚ್ಚಿನ ಸಂಖ್ಯೆ ಯಲ್ಲಿ ಭತ್ತ ಕೃಷಿ ಮಾಡುವಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಹಾಲು ಉತ್ಪಾದಕ ಸಂಘದ ನಿರ್ದೇಶಕರು ಸುಮನ್ ಹೆಗ್ಡೆ, ಸುಧಾಕರ್ ಪೂಜಾರಿ, ಯಂತ್ರಶ್ರೀ ಯೋಧ ಪ್ರಶಾಂತ್, ಧರ್ಣಪ್ಪ ಪೂಜಾರಿ, ಅಣ್ಣಿ ಪೂಜಾರಿ, ಕೇಶವ ಪೂಜಾರಿ, ನೀಲಯ್ಯ, ಸುಮಿತ್ರಾ ಕಮಲಾಕ್ಷಿ, ಈರಮ್ಮ, ಸುಶೀಲ, ಚಂದ್ರಪ್ಪ, ಯಶೋಧ, ವಶಾಂತಿ ಯಂತ್ರ ಚಾಲಕರ ಪುರಂದರ ಮುಂತಾದವರು ಉಪಸ್ಥಿತರಿದ್ದರು.