ಬೆಳ್ತಂಗಡಿ : ಜು.1 ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜು.1 ರಂದು ರಾತ್ರಿ ಯಕ್ಷಗಾನ ವೈಭವ ಜರುಗಿತು.
ಕಳಿಯ ಸಿ.ಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ, ಸುರೇಶ ಕುಮಾರ್ ಆರ್.ಎನ್. ಅಶೋಕ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.
ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಮಳೆಗಾಲದ ಮಹೋನ್ನತ ತೆಂಕು ಮತ್ತು ಬಡಗು ಸಂಯೋಜನೆಯಲ್ಲಿ ಭಾಗವತರಾಗಿ ಸತೀಶ ಶೆಟ್ಟಿ ಪಟ್ಲ,ಸೃಜನ್ ಹೆಗಡೆ, ಸುಧೀರ್ ಭಟ್ ಪೆರ್ಡೂರು, ಶಶಾಂಕ ಎಲಿಮಲೆ,ಹಿಮ್ಮೇಳ ತೆಂಕು:ಗುರು ಪ್ರಸಾದ್ ಬೊಳಿಂಜಡ್ಕ,ಕೌಶಿಕ್ ರಾವ್ ಪುತ್ತಿಗೆ,ಬಡಗು:ಶಶಿಕುಮಾರ್ ಆಚಾರ್ಯ ಉಡುಪಿ,ಪ್ರಜ್ವಲ್ ಕುಮಾರ್ ಮುಂದಾಡಿ, ಚಕ್ರತಾಳ: ಸುಂದರ ನಾಯ್ಕಪಾಣಾಜೆ, ನಿರೂಪಣೆ: ವಿನಾಯಕ ಭಟ್ ಗಾಳಿಮನೆ ಯಕ್ಷ ವೈಭವ ವನ್ನು ನಡೆಸಿದರು.
ನಾಳ ಯಕ್ಷಕೂಟ ಅಧ್ಯಕ್ಷರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವ ವಹಿಸಿದ್ದರು. ದೇವಸ್ಥಾನದ ವಿವಿಧ ಸಮಿತಿಯ ಸದಸ್ಯರು,ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯ,ನಾಳ ಯಕ್ಷ ಕೂಟ ಕಾರ್ಯದರ್ಶಿ ರಾಘವ ಹೆಚ್. ಸ್ವಾಗತಿಸಿ, ವಂದಿಸಿದರು.