ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಹಿಂಬದಿ ಶವಗಾರದ ಪಕ್ಕದಲ್ಲಿ ಕೊಳಕು ನೀರು ಗುಂಡಿಯಲ್ಲಿ ತುಂಬಿಕೊಂಡು ಆ ಗಬ್ಬು ವಾಸನೆಯಲ್ಲಿ ದಾರಿಯಲ್ಲಿ ಹೋಗಲು ಬಹಳ ಕಷ್ಟವಾಗುತ್ತಿದೆ. ಅದು ಅಲ್ಲದೆ ಮೃತ ಶವವನ್ನು ಶವಗಾರಕ್ಕೆ ತಂದಾಗ ಅಲ್ಲಿ ಬಹಳಷ್ಟು ಮಂದಿ ಸೇರುತ್ತಾರೆ, ಆದರೆ ಅಲ್ಲಿ ಈ ಕೊಳಕು ನೀರಿನ ವಾಸನೆಯಿಂದ ಜನರು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಯಾವ ಅಧಿಕಾರಿಗೆ ದೂರು ಕೊಡಬೇಕು ಅಂತ ತಿಳಿಯುತ್ತಿಲ್ಲ. ಅದೂ ಅಲ್ಲದೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೂ ಇದರ ಪರಿಣಾಮ ಡೆಂಗ್ಯೂ ಜ್ವರ ಬಾದಿಸಬಹುದು. ಆದುದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನಹರಿಸಬೇಕಾಗಿ ಅಶ್ರಫ್ ಕಟ್ಟೆ ಆಗ್ರಹಿಸಿದ್ದಾರೆ.