24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿ

ಮೇಲಂತಬೆಟ್ಟು ಕಲ್ಲಿನ‌ ಕೋರೆ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ; ಜು.8 ಮಾರಿಗುಡಿ ಕ್ಷೇತ್ರದಲ್ಲಿ ಪ್ರಮಾಣ; ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿಕೆ

ಬೆಳ್ತಂಗಡಿ: ಮೇಲಂತಬೆಟ್ಟುವಿನಲ್ಲಿ ನಡೆದ ಕಲ್ಲಿನ ಕೋರೆಯ ಪ್ರಕರಣಕ್ಕೆ ಸಂಭಂದಿಸಿದಂತೆ ಕಾಂಗ್ರೆಸ್ ಷಡ್ಯಂತರದಿಂದ ರಾಜಕೀಯ ಪ್ರೇರಿತವಾಗಿ ನನ್ನ ಮೇಲೆ ವೈಯಕ್ತಿಕ ದ್ವೇಷದಿಂದ ಕೇಸು ದಾಖಲಿಸಿ, ಸುಮಾರು 27 ದಿನಗಳ ಕಾಲ ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಸಿದಂತಾಗಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹೇಳಿದರು.

ಅವರು ಜು.2 ರಂದು ಗುರುವಾಯನಕೆರೆ ನವಶಕ್ತಿ ಹಾಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು.

ಕಳೆದ 19 ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡಿರುವ ನನ್ನನ್ನು ಬಿಜೆಪಿ ಪಕ್ಷ ಗುರುತಿಸಿ ನನ್ನನ್ನು ಬಿಜೆಪಿ ಯುವ ಮೊರ್ಚಾದ ಅಧ್ಯಕ್ಷನ್ನಾಗಿ ಮಾಡಿದೆ. ಆದರೆ ಕಾಂಗ್ರೆಸಿನ ರಕ್ಷಿತ್ ಶಿವರಾಮ್ ನಾನೊಬ್ಬ ರೌಡಿ ಶೀಟರ್, ಹಪ್ತ ವಸೂಲಿಗ ಎಂದಿದ್ದಾರೆ. ರಕ್ಷಿತ್ ಶಿವರಾಮ್ ಮಾಡಿದ ಆರೋಪಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ನಾನೂ ತಪ್ಪು ಮಾಡಿದ್ದರೆ, ನನಗೆ ಶಿಕ್ಷೆಯಾಗಿಲಿ, ಇಲ್ಲದಿದ್ದರೆ ಆರೋಪ ಮಾಡಿದವರಿಗೆ ತಕ್ಕ ಶಿಕ್ಷೆ ಸಿಗಲಿ. ಜು.8 ರಂದು ಕಾರಣಿಕ ಶಕ್ತಿ ಮಾರಿಗುಡಿಯಲ್ಲಿ ನಾನು ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದರು.

ಕಲ್ಲಿನ ಕೋರೆಯ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಪೋಲಿಸರು ರಾತ್ರಿ 11.45 ಕ್ಕೆ ಬಂದು ನನ್ನನ್ನು ವಿಚಾರಣೆಗಾಗಿ ಕರೆದುಕೊಂಡು ಹೋದರು. ಹೋಗುವಾಗ ನಾನು ಶಾಸಕರಿಗೆ ಕರೆ ಮಾಡಿ ಹೇಳಿದ್ದೇನೆ. ಪೋಲೀಸರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಕಲ್ಲಿನ ಕೊರೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದರೂ ಬಿಡಲಿಲ್ಲ. ಬೇಕಾದರೆ ನನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದರೂ ಕೇಳಲಿಲ್ಲ. ಕಾಂಗ್ರೇಸ್ ನವರು ಒತ್ತಡ ಹಾಕಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ಕೇಸು ಹಾಕಿ ಒಳಗಾಕುವ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಪೋಲೀಸರು ಪ್ರಭಾವಕ್ಕೆ ಒಳಗಾಗಿ ನನ್ನ ಹೆಸರು ದುರುಪಯೋಗ ಪಡಿಸಿದ್ದಾರೆ ಎಂದರು.

ವಸಂತ ಬಂಗೇರರು ಬೆಳ್ತಂಗಡಿಯಲ್ಲಿ ದ್ವೇಷ ರಾಜಕಾರಣ ಮಾಡಿದವರಲ್ಲ. ಏನಿದ್ರೂ ನೇರವಾಗಿ ಮಾತಾಡುತ್ತಿದ್ದರು. ಆದರೆ ರಕ್ಷಿತ್ ಶಿವರಾಮ್ ನನ್ನ ತೆಜೋವಧೆ ಮಾಡುವ ಉದ್ದೇಶದಿಂದ ಈ ರೀತಿಯ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಜು.8 ರಂದು ಮಾರಿಗುಡಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ.

ನಾನು ಇಲ್ಲೆ ಹುಟ್ಟಿ ಇಲ್ಲೆ ಬೆಳೆದವನು. ರಕ್ಷಿತ್ ಶಿವರಾಮ್ ಬೆಳ್ತಂಗಡಿಗೆ ಬಂದು ನಾಲ್ಕು ವರ್ಷಗಳಾಗಿವೆ. ಸುಖ ಸುಮ್ಮನೆ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ನಾನು ಹಪ್ತ ವಸೂಲಿಗ ಅಲ್ಲ. ಒರ್ವ ಬಡ ಆಟೋ ಡ್ರೈವರ್ ನ ಮಗ. ಬಡವರಿಗೆ ನಮ್ಮಿಂದಾದ ಸಹಾಯ ಮಾಡುತ್ತಿರುವವರು. ಕೋವಿಡ್ ಸಂದರ್ಭದಲ್ಲಿ ಯಾವುದೇ ಜಾತಿ, ಮತ, ಧರ್ಮ ನೋಡದೆ ಮಾನವ ಸರಪಳಿ ತಂಡವನ್ನು ಕಟ್ಟಿಕೊಂಡು ಕೆಲಸ ಮಾಡಿದವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾದ ಹರೀಶ್ ಗೌಡ ಸಂಭ್ಯೋಳ್ಯ, ಸ್ವಸ್ತಿಕ್ ಗೌಡ ಹಟ್ಟತ್ತೋಡಿ ಉಪಸ್ಥಿತರಿದ್ದರು.

Related posts

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ: ಚಪ್ಪರ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಸುಧೀರ್ ಜೈನ್ ಬಳಂಜ

Suddi Udaya

ಮಚ್ಚಿನ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪಂಚಾಯತ್ ಗೆ ಎಸ್‌ಡಿಪಿಐ ಮನವಿ

Suddi Udaya

ಕಿಲ್ಲೂರು‌ ನೂತನ ಮಸ್ಜಿದ್ ಗೆ ಖಾಝಿ ಕೂರತ್ ತಂಙಳ್ ರಿಂದ ಶಿಲಾನ್ಯಾಸ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ

Suddi Udaya
error: Content is protected !!