23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಗೊಂಡ ಸೃಜನ್ ಕೆ.ಆರ್.

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ , ವಿದ್ಯಾಮಾತಾ ಅಕಾಡೆಮಿ ಇದರ ಸುಳ್ಯ ಶಾಖೆಯಲ್ಲಿ ಸೇನಾ ತರಬೇತಿ ಪಡೆದ ಸುಳ್ಯ ನಿವಾಸಿ ಸೃಜನ್ ಕೆ. ಆರ್.ರವರು ಅಗ್ನಿಪಥ್ ಮೂಲಕ ಭಾರತೀಯ ಭೂಸೇನೆಗೆ ಆಯ್ಕೆಗೊಂಡಿದ್ದಾರೆ.
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕೊಡ್ದೋಳು ನಿವಾಸಿ ರಾಮಕೃಷ್ಣ ರೈ ಮತ್ತು ಗೀತಾ ದಂಪತಿಯ ಪುತ್ರ ಸೃಜನ್ ಕೆ.ಆರ್. ಕರ್ತವ್ಯಕ್ಕೆ ಅಸ್ಸಾಂಗೆ ತೆರಳಿದ್ದು , ಜು.1 ರಂದು ಅಲ್ಲಿನ ಅರ್ಟಿಲ್ಲರಿ ರೆಜಿಮೆಂಟ್ ವಿಭಾಗದಲ್ಲಿ ಕರ್ತವ್ಯ ಆರಂಭಿಸಿದ್ದರೆ.

2023ರ ಫೆಬ್ರವರಿ ತಿಂಗಳಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು, ಮಂಗಳೂರಿನಲ್ಲಿ ನಡೆದ ಸೇನಾ ಪರೀಕ್ಷೆ ಎದುರಿಸಿ, ತೇರ್ಗಡೆ ಹೊಂದಿ, ಮಹಾರಾಷ್ಟ್ರ ದ ನಾಸಿಕ್‌ನಲ್ಲಿ 32 ವಾರಗಳ ಸೇನಾ ತರಬೇತಿ ಪೂರ್ಣಗೊಳಿಸಿದ್ದರು.
ತನ್ನ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಎಣ್ಮೂರು ಪ್ರೌಢಶಾಲೆಯಲ್ಲಿ, ಪಿ.ಯು ಶಿಕ್ಷಣವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪೂರೈಸಿ , ನಂತರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಪದವಿ ಮುಗಿಸಿದ್ದರು. ಬಳಿಕ ಸುಳ್ಯದ ವಿದ್ಯಾಮಾತಾ ಅಕಾಡೆಮಿ ತರಬೇತಿ ಕೇಂದ್ರದಲ್ಲಿ ಸೇನಾ ಪರೀಕ್ಷಾ ತರಬೇತಿಯನ್ನು ಪಡೆದುಕೊಂಡು ಇದೀಗ ಭೂ ಸೇನೆಗೆ ಆಯ್ಕೆಗೊಂಡಿದ್ದಾರೆ.
ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈರವರು ಇವರ ಸಾಧನೆಯನ್ನು ಮೆಚ್ಚಿ , ಸೇನೆಗೆ ಆಯ್ಕೆಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿ , ಅಭಿನಂದಿಸಿದ್ದಾರೆ.

Related posts

ಮುಂಡಾಜೆ: ನಿವೃತ್ತ ಉಪನ್ಯಾಸಕ ಗೋಪಾಲಕೃಷ್ಣ ಡೋಂಗ್ರೆ ನಿಧನ 

Suddi Udaya

ಜೂ.13: ಗುರುವಾಯನಕೆರೆ 11ಕೆವಿ ಫೀಡರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮಚ್ಚಿನ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಶ್ರಮದಾನ ಕಾರ್ಯಕ್ರಮ

Suddi Udaya

ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಬೆಳಾಲು ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

 ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ ನಕ್ಸಲ್ ರವೀಂದ್ರ ಶರಣಾಗತಿ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಪೊಲೀಸ್ ಗಿರಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ನಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya
error: Content is protected !!