25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಡಿಮಳೆ: ಕಳೆಂಜ ಕುಟ್ರುಪ್ಪಾಡಿ ರಾಮಣ್ಣ ನಾಯ್ಕರ ಸೋಗೆ ಮನೆ ಛಾವಣಿ ಸಂಪೂರ್ಣ ಕುಸಿತ

ಕಳೆಂಜ: ಇಲ್ಲಿಯ ಶಿಬರಾಜೆ ಕುಟ್ರುಪ್ಪಾಡಿ ನಿವಾಸಿ ರಾಮಣ್ಣ (ದಿನೇಶ್) ನಾಯ್ಕರ ಸೋಗೆ ಮನೆ ಛಾವಣಿಯು ಜೂ.29 ರಾತ್ರಿ ಸುರಿದ ಜಡಿಮಳೆಗೆ ಮುಂಜಾನೆ 3.30ಕ್ಕೆ ಸಂಪೂರ್ಣ ಛಾವಣಿ ಕುಸಿದಿದ್ದು, ಈ ವೇಳೆ ಮನೆಯಲ್ಲಿ ನಿದ್ರಿಸುತ್ತಿದ್ದ ರಾಮಣ್ಣ (ದಿನೇಶ್) ನಾಯ್ಕ, ಪತ್ನಿ ವಾರಿಜ, ಪುತ್ರ ಅಪಾಯದಿಂದ ಪಾರಾಗಿದ್ದಾರೆ.


ಈ ಸಂದರ್ಭ ಅತಂತ್ರರಾದ ರಾಮಣ್ಣರವರ ಕುಟುಂಬದವರಿಗೆ ಪಕ್ಕದ ಮನೆಯ ಅನೂಪ್ ನಾಯ್ಕ ದೇರ್ಯ ಆಶ್ರಯ ನೀಡಿದ್ದರು. ವಿಷಯ ತಿಳಿದು ತಕ್ಷಣ ಧಾವಿಸಿದ ಬಿಜೆಪಿ ಬೂತ್ ಸಮಿತಿ 174ರ ಅಧ್ಯಕ್ಷ ಹರೀಶ ವಳಗುಡ್ಡೆ, ಸದಸ್ಯರು ಮತ್ತು ಕಾರ್ಯಕರ್ತರು ಮುರಿದು ಬಿದ್ದ ಮನೆಯ ಸಾಮಾನುಗಳನ್ನು ವಿಲೇವಾರಿ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸಿದರು.


ಬಡವರಾದ ರಾಮಣ್ಣ (ದಿನೇಶ) ನಾಯ್ಕರವರಿಗೆ ಒಂದು ತಾತ್ಕಾಲಿಕ ಮನೆಯನ್ನು ಒಂದು ವಾರದೊಳಗೆ ನಿರ್ಮಿಸಿ ಕೊಡಬೇಕೆಂದು ಪಣತೊಟ್ಟ ಹರೀಶ ವಳಗುಡ್ಡೆಯವರು, ಕಾರ್ಯಕರ್ತರು, ಗ್ರಾಮಸ್ಥರು, ದಾನಿಗಳನ್ನು ಸಂಪರ್ಕಿಸುತ್ತಿದ್ದಾರೆ.
ಸದ್ಯದ ಮಟ್ಟಿಗೆ ರಾಮಣ್ಣ ನಾಯ್ಕರ ಕುಟುಂಬದವರು ಸಂಬಂಧಿಕರಾದ ದಯಾನಂದ ನಾಯ್ಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ.

Related posts

ತ್ರೋಬಾಲ್ ಪಂದ್ಯಾವಳಿಯಲ್ಲಿ ಅಂಡೆತಡ್ಕ ಶಾಲೆಯ ಬಾಲಕರ ತಂಡ ದ್ವಿತೀಯ: ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿಯಲ್ಲಿ ಹೊಸದಾಗಿ “ಲಿಯೋ ಕ್ಲಬ್” ಯುವ ವಿಭಾಗ ಉದ್ಘಾಟನೆ

Suddi Udaya

ಕೊಯ್ಯೂರು ಶಾಲೆಗೆ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಬಟ್ಟಲು ವಿತರಣೆ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

Suddi Udaya

ಕೊಕ್ಕಡ: ಹೊನ್ನಮ್ಮ ಮನೆ ನಿರ್ಮಾಣಕ್ಕೆ ನೆರವು

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೇತೃತ್ವದಲ್ಲಿ ವನಮಹೋತ್ಸವ

Suddi Udaya
error: Content is protected !!