32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮನೆಗೆ ಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತೆರವು ಕಾರ್ಯ

ಧರ್ಮಸ್ಥಳ ಗ್ರಾಮದ ದೊಂಡೋಲೆ, ರವಿ ಗೌಡ ಇವರ ಮನೆಯ ಹಿಂಭಾಗ ಗೋಡೆಯ ಮೇಲೆ ದೊಡ್ಡ ಮರ ಬಿದ್ದು ಮನೆ ಹಿಂಬದಿಯ ಸಿಮೆಂಟ್ ಶೀಟ್ ಹಾಗೂ ತಗಡು ಶೀಟಿಗೆ ಮರ ತಾಗಿ ಅಪಾರ ಹಾನಿಯಾಗಿರುತ್ತದೆ.

ಬಡ ಕುಟುಂಬವಾಗಿದ್ದು ಅಂಗವಿಕಲ ಮಗು ಇದ್ದು ತುಂಬಾ ಕಷ್ಟಕರ ಜೀವನ ನಡೆಸುತ್ತಿದ್ದಾರೆ, ಮನೆಯೊಡತಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಕರೆ ಮಾಡಿ ತಿಳಿಸಿರುತ್ತಾರೆ, ತಕ್ಷಣ ಸ್ಪಂದಿಸಿದ ಘಟಕದ ಸ್ವಯಂಸೇವಕರು ಅಲ್ಲಿಗೆ ಹೋಗಿ ಅಕ್ಕಪಕ್ಕದವರೊಂದಿಗೆ ಸೇರಿ ಮನೆಯ ಮೇಲೆ ಬಿದ್ದ ಮರವನ್ನು ತೆಗೆಯುವ ಕಾರ್ಯ ನಡೆಸಿದರು.

ನಂತರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಧರ್ಮಸ್ಥಳ ಗ್ರಾಮ ಪಂಚಾಯತ್ ಪಿ ಡಿ ಓ ಉಮೇಶ್ ಹಾಗೂ ದಿನೇಶ್ ಕಂದಾಯ ಇಲಾಖೆಯವರಿಗೆ ಕರೆ ಮಾಡಿ ತಿಳಿಸಿ ಕೂಡಲೇ ಅವರು ಪಂಚಾಯತ್ ನಲ್ಲಿ ಬರುವಂತಹ ಅನುದಾನದಡಿಯಲ್ಲಿ ಮಾಡಿಸಿಕೊಡುವ ಭರವಸೆಯನ್ನು ನೀಡಿದರು.

ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲೂಕು ಮಾಸ್ಟರ್ ಸ್ನೇಕ್ ಪ್ರಕಾಶ್, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸಹಕರಿಸಿದರು.

Related posts

ನಡ: ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ‘ಸೇವಾ ಭಾರತಿ’ ವತಿಯಿಂದ ಪುಸ್ತಕಗಳ ವಿತರಣೆ

Suddi Udaya

ಕುವೆಟ್ಟು ಸ. ಉ. ಪ್ರಾ. ಶಾಲೆಯ ಅಡುಗೆ ಕೋಣೆಯ ವಿಸ್ತೃತ ಕೊಠಡಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಮ್ಯಾಟ್ರಿಕ್ಸ್ ಹೋಂಡಾ ಬಳಿ ಮರ ಬಿದ್ದು ಹಾನಿ

Suddi Udaya

ಬಜರಂಗದಳ ಕಾರ್ಯಕರ್ತರ ಮೇಲೆ ಗಡಿಪಾರು ವರದಿಯನ್ನು ಹಿಂಪಡೆಯಲು ವಿಶ್ವ ಹಿಂದೂ ಪರಿಷದ್ ಭಜರಂಗದಳ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದಿಂದ ಬೃಹತ್ ಪ್ರತಿಭಟನೆ : ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ರಿಗೆ ಮನವಿ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಜೇಸಿಂತಾ ಮೋನಿಸ್ ನಿಧನ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!