ಸುಲ್ಕೇರಿ : ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಸುಲ್ಕೇರಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಶ್ರೀರಾಮ ಪ್ರೌಢಶಾಲೆ ಸುಲ್ಕೇರಿಯಲ್ಲಿ ಜು.3 ರಂದು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವೇಣೂರು ಪೊಲೀಸ್ ಠಾಣೆ ಇದರ ವತಿಯಿಂದ ಮಾದಕ ವಸ್ತುಗಳ ದುರುಪಯೋಗ ಆಕ್ರಮ ಸಾಗಾಣೆ ವಿರುದ್ಧದ ಜನಜಾಗೃತಿ ಅಭಿಯಾನ ಹಾಗೂ ಫೋಕ್ಸೋ ಕಾಯ್ದೆಯಡಿ ಮಕ್ಕಳಿಗೆ ಅರಿವು ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀರಾಜು ಪೂಜಾರಿ ವಹಿಸಿಕೊಂಡಿದ್ದರು. ಮಾದಕ ವಸ್ತುಗಳ ದುರುಪಯೋಗ ಅಕ್ರಮ ಸಾಗಣೆ ಇದರ ಬಗ್ಗೆ ವೇಣೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀಶೈಲ ಮುರಗೋಡು ಇವರು ಮಾಹಿತಿ ನೀಡಿದರು. ಪೋಕ್ಸೋ ಕಾಯ್ದೆಯಡಿ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ಸಂರಕ್ಷಣೆಯ ಬಗ್ಗೆ ಆರಕ್ಷಕರಾದ ಶ್ರೀಮತಿ ಕೇಶವತಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆರಕ್ಷಕ ಸಿಬ್ಬಂದಿಗಳಾದ ಆನಂದ, ರಾಜೇಶ್, ಸತ್ಯಪ್ರಕಾಶ್, ಶಾಲಾ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ನಾರಾಯಣ ಪೂಜಾರಿ, ಮುಖ್ಯೋಪಾದ್ಯಾಯರಾದ ರಮೇಶ್ ಎಸ್ ಮಾಳಗೊಂಡ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸತೀಶ್ ಕುಮಾರ್ ಎನ್ ಸ್ವಾಗತಿಸಿ ನಿರೂಪಿಸಿದರು.