ಸೌತಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಕೊಕ್ಕಡ ವಲಯದ ಸೌತಡ್ಕ ಕಾರ್ಯಕ್ಷೇತ್ರದ ಹಲ್ಲಿಂಗೇರಿ ಸಭಾಭವನದಲ್ಲಿ ಜ್ಯೋತಿ ಜ್ಞಾನವಿಕಾಸ ಕೇಂದ್ರವನ್ನು ದೀಪ ಬೆಳಗಿಸುವುದರ ಮೂಲಕ ಪಂಚಮಿ ಕ್ಲಿನಿಕ್ ವೈದ್ಯರಾದ ತಾರಾ ಉದ್ಘಾಟಿಸಿ ಮಹಿಳೆಯರ ಅಭಿವೃದ್ಧಿಗಾಗಿ ಮಾತೃಶ್ರೀ ಅಮ್ಮನವರ ಕನಸಿನ ಕಾರ್ಯಕ್ರಮವಾದ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಪ್ರಬುದ್ಧತೆಯನ್ನು ಹೊಂದಿದ್ದು ಜ್ಯೋತಿ ಎಂಬ ನಾಮಕರಣದೊಂದಿಗೆ ಉದ್ಘಾಟನೆಗೊಂಡ ಜ್ಞಾನ ವಿಕಾಸ ಕೇಂದ್ರ ಜ್ಯೋತಿಯಂತೆ ಬೆಳಗಲಿ ಎಂದರು.
ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಸುರೇಂದ್ರ ರವರು ಜ್ಞಾನವಿಕಾಸ ಕೇಂದ್ರದ ಹುಟ್ಟು ಮತ್ತು ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಗ್ರಾಮಪಂಚಾಯಿತಿ ಸದಸ್ಯೆ ಹಾಗೂ ಪ್ರಬುದ್ಧ ಕೇಂದ್ರದ ಸದಸ್ಯರಾದ ಪವಿತ್ರ ಮಹಿಳೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಜ್ಞಾನವಿಕಾಸದ ಪಾತ್ರ ಏನು ಎಂಬುದರ ಬಗ್ಗೆ ತಾನೊಬ್ಬ ಪ್ರಬುದ್ಧ ಕೇಂದ್ರದ ಸದಸ್ಯರಾಗಿ ಅಭಿವೃದ್ಧಿ ಹೊಂದಿರುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ತಾಲೂಕು ವೇದಿಕೆ ಸದಸ್ಯ ಕುಶಾಲಪ್ಪ, ಒಕ್ಕೂಟ ಅಧ್ಯಕ್ಷ ಅಬ್ದುಲ್ ರಜಾಕ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಒಕ್ಕೂಟ ಪದಾಧಿಕಾರಿಗಳಾದ ಯಶೋಧ ಮತ್ತು ಅಶ್ವಿನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕಿಯಾದ ಸುಜಾತಾ ರವರಿಗೆ ಕೇಂದ್ರದ ದಾಖಲಾತಿಯನ್ನು ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಕುಸುಮಾ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಧನ್ಯವಾದವಿತ್ತರು. ಸಮನ್ವಯಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು.