September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ನವಚೇತನ ಆಂ.ಮಾ. ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ, ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ: ನೂತನ ಪದಾಧಿಕಾರಿಗಳ ಆಯ್ಕೆ

ವೇಣೂರು : ಇಲ್ಲಿಯ ನವಚೇತನ ಆಂಗ್ಲಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಜು. 2 ರಂದು ಜರಗಿತು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಸ್ವಾಗತ ನೃತ್ಯದೊಂದಿಗೆ ವಿದ್ಯಾರ್ಥಿನಿಯರು ಸ್ವಾಗತಿಸಿದರು. ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅರ್ಸುಲೈನ್ ಪ್ರಾನ್ಸಿಸ್ಕನ್ ಸೊಸೈಟಿಯ ಉಪಕಾರ್ಯದರ್ಶಿಯಾದ ವಂl ಭl ಜುಲಿಯಾನ ಪಾಯ್ಸ್ , ಮುಖ್ಯ ಅತಿಥಿಯಾಗಿ ಶಾಲಾ ಸಂಚಾಲಕಿ ಸಿಸ್ಟರ್ ಲಿಲ್ಲಿ ಗೋಮ್ಸ್, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಲಿನಿ ಡಿಸೋಜಾ ಉಪಸ್ಥಿತರಿದ್ದರು. ಬಳಿಕ ಶಿಕ್ಷಕಿ ರೋಹಿಣಿ ಇವರು 2023-24ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಸಭೆಯ ವರದಿಯನ್ನು ವಾಚಿಸಿದರು.

ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ:
2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ, ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಯೋಲಾ ಮೋರಸ್, ದ್ವಿತೀಯ ಸ್ಥಾನ ಪಡೆದ ಈಶಾನ್ ಹಾಗೂ ತೃತೀಯ ಸ್ಥಾನ ಪಡೆದ ವೈಷ್ಣವಿ ಎನ್. ಶೇಟ್ ಇವರನ್ನು ಸನ್ಮಾನಿಸಲಾಯಿತು. ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಲಿನಿ ಡಿಸೋಜ ಶಿಕ್ಷಕ- ಶಿಕ್ಷಕೇತರ ವೃಂದದವರನ್ನು ಪರಿಚಯಿಸಿದರು. ಹಾಗೂ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲವನ್ನು ಪರಿಚಯಿಸಿದರು.

ನೂತನ ಸಮಿತಿ ರಚನೆ
2024-25ನೇ ಸಾಲಿಗೆ ಶಿಕ್ಷಕ-ರಕ್ಷಕ ನೂತನ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರುಗಳಾಗಿ ಮೋಹನ್ ಹಾಗೂ ಅರವಿಂದ ಶೆಟ್ಟಿ ಖಂಡಿಗ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ 2023-24ನೇ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳಿಗೆ ಕಿರು ಕಾಣಿಕೆಯನ್ನು ನೀಡಿ ಅಭಿನಂದಿಸಿದರು.

ಬಳಿಕ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶಾಲಿನಿ ಡಿಸೋಜಾ, ಶಾಲಾ ಕಾರ್ಯ ಚಟುವಟಿಕೆ ಹಾಗೂ ನಿಯಮಗಳ ಬಗ್ಗೆ ತಿಳಿಸಿ, ಪೋಷಕರ ಸಹಕಾರವನ್ನು ಕೋರಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅರ್ಸುಲೈನ್ ಪ್ರಾನ್ಸಿಸ್ಕನ್ ಸೊಸೈಟಿಯ ಉಪಕಾರ್ಯದರ್ಶಿಗಳಾದ ವಂ| ಭ| ಜುಲಿಯಾನ ಪಾಯ್ಸ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಾಗೂ ಕರ್ತವ್ಯಗಳನ್ನು ಮನಮುಟ್ಟುವಂತೆ ಹಲವು ನಿದರ್ಶನಗಳ ಮೂಲಕ ತಿಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ಪದಾಧಿಕಾರಿಗಳನ್ನು ಕಿರುಕಾಣಿಕೆ ನೀಡಿ ಸ್ವಾಗತಿಸಲಾಯಿತು.

ಶಿಕ್ಷಕಿ ಸರಿತಾ ನಿರೂಪಿಸಿದಕಾರ್ಯಕ್ರಮದಲ್ಲಿ ಶಿಕ್ಷಕಿ ಕಾವ್ಯ ಸ್ವಾಗತಿಸಿ, ಶಿಕ್ಷಕಿ ನಿಶ್ವಿತಾ ಧನ್ಯವಾದವಿತ್ತರು.

Related posts

ತೋಟತ್ತಾಡಿ: ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅನಿಲ್ ಕಕ್ಕಿಂಜೆ

Suddi Udaya

ಶ್ರೀ ಕ್ಷೇತ್ರ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಥ ಸಮರ್ಪಣೆ: ಹಲೇಜಿ-ತನ್ನೋಜಿ  ಶ್ರೀ ಕ್ಷೇತ್ರದಲ್ಲಿ  ಶೋಭಾಯಾತ್ರೆಗೆ ಚಾಲನೆ

Suddi Udaya

ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜಯಂತಿಯ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಯವರಿಗೆ ಸನ್ಮಾನ

Suddi Udaya

ಕ್ರೈಸ್ಟ್ ಅಕಾಡಮೆ (ಐಸಿಎಸ್ಇ) ಮುಂಡಾಜೆ ಶಾಲೆಗೆ ಶೇ 100 ಫಲಿತಾಂಶ

Suddi Udaya

ಕಣಿಯೂರು ಗ್ರಾ.ಪಂ. ಸದಸ್ಯ ಪ್ರವೀಣ್‌ ಗೌಡರಿಗೆ ತಿಮರೋಡಿ ತಂಡದಿಂದ ಹಲ್ಲೆ: ಪುತ್ತೂರು ಆಸ್ಪತ್ರೆಗೆ ದಾಖಲು: ಆಸ್ಪತ್ರೆಗೆ ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಹರೀಶ್ ಪೂಂಜ ಆಕ್ರೋಶ

Suddi Udaya

ಜೆಸಿಐ ಬೆಳ್ತಂಗಡಿಯ ಉದ್ದೇಶಿತ ‘ಜೇಸಿ ಛೇಂಬರ್ ಆಫ್ ಕಾಮರ್ಸ್’ ಸ್ಥಾಪನೆ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!