September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಶ್ರೀ ಕ್ಷೇತ್ರ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಥ ಸಮರ್ಪಣೆ: ಹಲೇಜಿ-ತನ್ನೋಜಿ  ಶ್ರೀ ಕ್ಷೇತ್ರದಲ್ಲಿ  ಶೋಭಾಯಾತ್ರೆಗೆ ಚಾಲನೆ

ಕಲ್ಲೇರಿ: 800 ನೂರು ವರ್ಷಗಳ ಇತಿಹಾಸವಿರುವ ಕರಾಯ ಗ್ರಾಮದ ಆರಾಧ್ಯಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬ್ರಹ್ಮರಥದ ಶೋಭಾಯಾತ್ರೆ ಎ.13 ರಂದು ಸೋಮವಾರ ಸಂಜೆ ನಡೆಯಿತು.

ಹಲೇಜಿ ಶ್ರೀ ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಬಳಿಯಿಂದ ವೈದಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರುಗಳಾದ ಶಾಸಕ ಹರೀಶ್ ಪೂಂಜಾ ಹಾಗೂ ನಾಗಾರ್ಜುನ್ ರಾವ್ ತೆಂಗಿನಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿದರು. ದಿ| ವಿಜಯ ಎನ್. ಬಂಗೇರ ಮತ್ತು ದಿ| ಕೆ. ನಾಣ್ಯಪ್ಪ ಬಂಗೇರ ಇವರ ಸ್ಮರಣಾರ್ಥವಾಗಿ ಮಕ್ಕಳ ಕೊಡುಗೆಯಾಗಿ ಬ್ರಹ್ಮರಥ ಅರ್ಪಿಸಲಾಯಿತು.

ಪೂರ್ಣಕುಂಭಸ್ವಾಗತ, ವೀರಗಾಸೆ, ಕೇರಳ ತೈಯಮ್, ಡೊಳ್ಳು ಕುಣಿತ, ವಾಯಲಿನ್, ಚೆಂಡೆ, ಭಜನ ತಂಡ, ಕೀಳು ಕುದರೆ, ವಾದ್ಯಗೋಷ್ಠಿಯಲ್ಲಿ ರಥವನ್ನು ದೇವಸ್ಥಾನಕ್ಕೆ ವೈಭವಪೂರ್ಣವಾಗಿ ತರಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ರಥದ ಜತೆಯಲ್ಲಿ ಹೆಜ್ಜೆ ಹಾಕಿದರು. ಅಲ್ಲಲ್ಲಿ ಬ್ರಹ್ಮರಥಕ್ಕೆ ಪುರ್ಷ್ಪಾಚನೆ ನಡೆಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತುಲ್ ಕುಮಾರ್ ಕೆ.ಎನ್.ಹಲೇಜಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ,  ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ಮೈರಾ ಹಾಗೂ ಜಯವಿಕ್ರಮ್ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ದುರ್ಗೇಶ್ ವಿ.ಕೆದಿಲಾಯ, ಕೋಶಾಧಿಕಾರಿ ಸಾಮ್ರಾಟ್ ಕರ್ಕೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್ ಸುಪ್ರಭಾತ ಕೊಲ್ಲಿ, ಉಪಾಧ್ಯಕ್ಷ ಯುವರಾಜ್ ಅನಾರು, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಉಪಾಧ್ಯಕ್ಷ ಸುನೀಲ್ ಅಣಾವು, ನಿದೇರ್ಶಕರಾದ
ಸುರೇಶ್ ಹೆಚ್ ಎಲ್, ರೋಹಿತ್,  ಪ್ರಮುಖರಾದ ಸುಧೀರ್ ಕೆ. ಎನ್., ಗುಣಾಕರ ಅಗ್ನಾಡಿ, ಪ್ರದೀಪ್ ಶೆಟ್ಟಿ, ಯೋಗೀಶ್ ಪೂಜಾರಿ ಕಡ್ತಿಲ,  ಪ್ರವೀಣ್ ಕುಪ್ಪೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಶಶಿಧರ ಅಧಿಕಾರ ಸ್ವೀಕಾರ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ, ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಜಾ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೈರ್ ವಿತರಣೆ

Suddi Udaya

ಎಕ್ಸೆಲ್‌ನಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮ: ಶೈಕ್ಷಣಿಕ ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಶಾಲೆಗಳಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಖಂಡಿಸಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಕಾರಿಂಜ ಶ್ರೀ ವನಶಾಸ್ತರ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯಿಂದ ಡಾ.ಡಿ ಹೆಗ್ಗಡೆಯವರ ಭೇಟಿ

Suddi Udaya
error: Content is protected !!