25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ :ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

ಉಜಿರೆ : ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮವು ನಡೆಯಿತು.

ಪಿಯುಸಿ ನಂತರ ಏನು ಮಾಡೋದು? ಅನ್ನುವುದು ಪ್ರತಿಯೊಂದು ವಿದ್ಯಾರ್ಥಿಗೆ ಹಾಗೂ ಹೆತ್ತವರಿಗೆ ಕಾಡೋ ಪ್ರಶ್ನೆ, ಈ ಕುರಿತಾಗಿ ಕಾಲೇಜಿನ ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮುಂದೇನು ಮಾಡಿದರೆ ಅನುಕೂಲ, ಯಾವ ಕ್ಷೇತ್ರಗಳಲ್ಲಿ ಯಾರಿಗೆ ಅವಕಾಶ, ಅವಕಾಶಗಳನ್ನು ಗೆಲ್ಲುವ ಯಾವ ಪರೀಕ್ಷೆಗಳಿಗೆ ಯಾವ ಹಂತದಲ್ಲಿ ತಯಾರಿ ನಡೆಸಬೇಕು, CET /NEET/JEE ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಹೇಗೆ ಸಜ್ಜಾಗಬೇಕು ಎಂಬಿತ್ಯಾದಿ ವಿಷಯಗಳ ಸವಿಸ್ತಾರ ಮಾಹಿತಿಯನ್ನು ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ವಿಕ್ರಂ.ಪಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಉಪಸ್ಥಿತರಿದ್ದರು.

ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ಕೆ. ಪಿ ನಿರೂಪಿಸಿ ವಂದಿಸಿದರು.

Related posts

ದೇಶದ ಆರ್ಥಿಕತೆಯ ಸುಧಾರಣೆಯಲ್ಲಿ ಇಂದಿರಾಗಾಂಧಿ ಮಹತ್ವದ ಕೊಡುಗೆ : ರಕ್ಷಿತ್ ಶಿವರಾಂ

Suddi Udaya

ವೈದ್ಯರ ನಿರ್ಲಕ್ಷ್ಯಕ್ಕೆ ವೇಣೂರಿನ ಗರ್ಭಿಣಿ ಮಹಿಳೆ ಕೋಮಸ್ಥಿತಿಯಲ್ಲಿ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಯ೯ಕತ೯ರ ಸಭೆ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಆರಂಭ

Suddi Udaya

ನಾರಾವಿ ವಲಯ ಮಟ್ಟದ ಕ್ರೀಡಾಕೂಟ: ಪಡಂಗಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ರಿಲೇಯಲ್ಲಿ ಪ್ರಥಮ ಸ್ಥಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya
error: Content is protected !!