32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ NET-2024 ಮರು ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿಯಿಂದ ಕ್ರ್ಯಾಶ್ ಕೋರ್ಸ್: ಜು.10 ರಿಂದ ಆನ್ಲೈನ್ ತರಗತಿಗಳು ಪ್ರಾರಂಭ

ಪುತ್ತೂರು : ಕಳೆದ ಮೂರು ವರ್ಷಗಳ ಅವಧಿಯಲ್ಲಿ ಯುವ ಜನತೆಗೆ ಅತೀ ಹೆಚ್ಚೂ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ , ಯಶಸ್ವಿಯಾಗಿ ಮುನ್ನಡೆಯುತ್ತಿರುವ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯು ರಾಷ್ಟ್ರೀಯ ಅರ್ಹತಾ ಪರೀಕ್ಷೆಗೂ ಕೂಡಲೇ ತರಬೇತಿ ಪ್ರಾರಂಭಿಸಲಿದೆ.


ಕಾರಣಾಂತರದಿಂದ ತಡೆಹಿಡಿಯಲಾಗಿರುವ 2024 ರ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಇದರ ಮರು ಪರೀಕ್ಷೆಯನ್ನು ಸರಕಾರವು ಮುಂದಿನ ಆಗಸ್ಟ್ ತಿಂಗಳ ಕೊನೆಗೆ ಆಯೋಜಿಸಲು ತೀರ್ಮಾನಿಸಿದ್ದು , ಪರೀಕ್ಷೆ ಎದುರಿಸೋ ಆಭ್ಯರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯು ಒಂದು ತಿಂಗಳ ಅವಧಿಯ ಆನ್ಲೈನ್ ತರಬೇತಿ ನೀಡಲು ನುರಿತ ತರಬೇತು ತಂಡ ಇದರ ಮೂಲಕ ಯೋಜನೆ ಹಾಕಿಕೊಂಡಿದೆ.

N E T ಮರು ಪರೀಕ್ಷೆಯನ್ನು ಎದುರಿಸಲಿರೋ ಅಭ್ಯರ್ಥಿಗಳೆಲ್ಲಾ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಅಕಾಡೆಮಿ ಪ್ರಕಟಣೆ ಹೇಳಿದೆ.

ಕಳೆದ K-SET/KAR-TET ಪರೀಕ್ಷೆಯಲ್ಲೂ ಅಕಾಡೆಮಿ ಸಾಧನೆ ಅಮೋಘ :

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET), ಶಿಕ್ಷಕರ ನೇಮಕಾತಿ, ರಾಷ್ಟ್ರೀಯ ಅರ್ಹತಾ ಪರೀಕ್ಷೆ ಹಾಗೂ ಇತರೆ ಶಿಕ್ಷಕರ ನೇಮಕಾತಿ, ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿರುವ ವಿದ್ಯಾಮಾತಾ ಅಕಾಡೆಮಿಯ 150ಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಾರಾಗಿ, ನೇಮಕಾತಿಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಂದು ತಿಂಗಳ ಅವಧಿಯಲ್ಲಿ ನಡೆಯಲಿರುವ ಈ ತರಬೇತಿಯು ಆನ್ಲೈನ್ ಮೂಲಕ ಜು.10 ರಿಂದ ದಿನನಿತ್ಯ ಒಂದು ಗಂಟೆ ಸಮಯ , ಅಂದರೆ ರಾತ್ರಿ ಸಮಯ 8 ರಿಂದ 9 ರವರೆಗೆ ನಡೆಯಲಿದೆ. ಆಸಕ್ತ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದ್ದು , ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
ವಿವರಗಳಿಗಾಗಿ: ವಿದ್ಯಾಮಾತಾ ಅಕಾಡೆಮಿ ಇದರ ಪುತ್ತೂರು ಶಾಖೆ ದೂರವಾಣಿ ಸಂಖ್ಯೆ 96204 68869 , 9148935808 ಅಥವಾ ಸುಳ್ಯ ಶಾಖೆ ಇದರ ದೂರವಾಣಿ ಸಂಖ್ಯೆ 9448527606 ಅಥವಾ ಕಾರ್ಕಳ ಶಾಖೆ ಇದರ ದೂರವಾಣಿ ಸಂಖ್ಯೆ 8310484380 , 9740564044 ಸಂಪರ್ಕಿಸಬಹುದೆಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

Related posts

ಗರ್ಡಾಡಿ: ಮುಗೇರಡ್ಕ ನಿವಾಸಿ ಶೀಲಾವತಿ ನಿಧನ

Suddi Udaya

ಲಾಯಿಲ ಬಂಟರ ಗ್ರಾಮ ಸಮಿತಿ ವತಿಯಿಂದ ಆಟಿದ ಗಮ್ಮತ್ ಹಾಗೂ ವಿವಿಧ ಕ್ರೀಡಾಕೂಟ

Suddi Udaya

ಉಜಿರೆ: ಪಾರ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳಾಲು-ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯ ಶಾಲಾ ಪ್ರಾರಂಭೋತ್ಸವ

Suddi Udaya

ಭಾರತೀಯ ಸೇನೆಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಬೇದಾರ್ ಮೇಜರ್ ಶಿವಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಬಸವ ಜಯಂತಿ ಆಚರಣೆ

Suddi Udaya
error: Content is protected !!