April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಸುರಕ್ಷತಾ ಜಾಗೃತಿ

ಧರ್ಮಸ್ಥಳ : ಮೆಸ್ಕಾಂ ನಿಗಮ ಧರ್ಮಸ್ಥಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಧರ್ಮಸ್ಥಳ ಇದರ ಸಹಯೋಗದೊಂದಿಗೆ ಪ್ರಾಕೃತಿಕ ವಿಕೋಪಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಸುರಕ್ಷತಾ ಜಾಗೃತಿ ಕಾರ್ಯಕ್ರಮವು ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮೆಸ್ಕಾಂ ನಿಗಮ ಧರ್ಮಸ್ಥಳದ ಅಸಿಸ್ಟೆಂಟ್ ಎಂಜಿನಿಯರ್ ಸುಹಾಸ್ ರವರು ವಿದ್ಯುತ್ ಶಕ್ತಿಯಿಂದ ಆಗುವ ಅವಘಡಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಯಪಡಿಸಿದರು.
ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ| ಮಂಜು ಎಚ್ಆರ್ ಅವರು ಡೆಂಗ್ಯೂ ಜ್ವರದ ನಿರ್ಮೂಲನೆಯ ಬಗ್ಗೆ ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ನಿಗಮ ಧರ್ಮಸ್ಥಳದ ಅಧಿಕಾರಿಗಳಾಗಿರುವ ಅಶೋಕ್ ರವರು ಉಪಸಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ ಜೈನ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಲಿಂಗಪ್ಪ ಗೌಡ ಪಿ ಎನ್ ರವರು ಸ್ವಾಗತಿಸಿ, ಯುವರಾಜ ರವರು ನಿರೂಪಿಸಿ, ಶಶಿಧರ್ ರವರು ಧನ್ಯವಾದ ನೀಡಿದರು. ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ನೆರಿಯ: ತಿಮ್ಮಯ್ಯ ಗೌಡ ಹೃದಯಾಘಾತದಿಂದ ನಿಧನ

Suddi Udaya

ಪಟ್ರಮೆ: ಡೆಚ್ಚಾರು ನಿವಾಸಿ ತಿಮ್ಮಪ್ಪ ಗೌಡ ನಿಧನ

Suddi Udaya

ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ: ಮಚ್ಚಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಪೆರಿಂಜೆ ನಿವಾಸಿ ರಾಘು ಪೂಜಾರಿ ನಿಧನ

Suddi Udaya

ಅ.11: ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ , ಶ್ರೀ ಕ್ಷೇ.ಧ. ಗ್ರಾ.ಯೋ. ಹೆಚ್.ಡಿ ಕೋಟೆ ಇದರ ಆಶ್ರಯದಲ್ಲಿ ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರದ ಉದ್ಘಾಟನೆ

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿನ ಕೌಶಲ್ಯ, ಪರೀಕ್ಷೆಗಾಗಿ ಅಧ್ಯಯನ ಸಲಹೆಗಳು, ಸಮಯ ನಿರ್ವಹಣೆ ಮತ್ತು ತಯಾರಿ ಕುರಿತ ಕಾರ್ಯಾಗಾರ

Suddi Udaya
error: Content is protected !!