24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ ಮತ್ತು ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಇಂದು (ಜು.5) ಶಾಲಾ ಸರ್ಕಾರದ ಮಂತ್ರಿಮಂಡಲದ ಪದಗ್ರಹಣ ಮತ್ತು ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.


ಮುಖ್ಯ ಅತಿಥಿ, ವಿವೇಕಾನಂದ ಕಾನೂನು ವಿದ್ಯಾಲಯದ ಪುತ್ತೂರಿನ, ಲಕ್ಷ್ಮೀಕಾಂತ್, ಸಹಾಯಕ ಪ್ರಾಧ್ಯಾಪಕರು, ರಾಜಕೀಯ ಶಾಸ್ತ್ರವಿಭಾಗ ಇವರು ಮಂತ್ರಿಮಂಡಲದ ಕಾರ್ಯಚಟುವಟಿಕೆಗಳು ಮತ್ತು ಶಾಲಾ ಸಂಘಗಳ ವಾರ್ಷಿಕ ಕಾರ್ಯವೈಕರಿಗಳಿಗೆ ಚಾಲನೆ ನೀಡಿ ಮಾತನಾಡಿ “ನಾಯಕತ್ವದ ಮಹತ್ವ ಮತ್ತು ಗುರಿಯನ್ನು ಹೊಂದುವಲ್ಲಿ ಭಾಗವಹಿಸುವಿಕೆ, ಸತತ ಪ್ರಯತ್ನ, ಅಳವಡಿಕೆ, ಅನುಷ್ಠಾನ ಇವುಗಳ ಕಾರ್ಯನಿರ್ವಹಣೆಯ ಕಡೆ ಗಮನ ವಹಿಸುವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಪಂಚತಂತ್ರದ ಕಥೆಗಳಲ್ಲಿನ ಜ್ಞಾನ, ನಾಯಕತ್ವದ ಗುಣ, ನೀತಿಪಾಠಗಳು, ಸಾವಾಲುಗಳನ್ನು ಎದುರಿಸುವ ಸಾಮರ್ಥ್ಯ, ಉತ್ತಮ ನಾಯಕತ್ವಕ್ಕೆ ಮುನ್ನುಡಿಯಾಗಲಿ, ನಿಮ್ಮ ಜೀವನದ ಶಿಲ್ಪಿ ನೀವೇ. ಶಿಲ್ಪವು ಅದ್ಭುತವಾಗಿ ಮೂಡಿಬರಲಿ ಎಂದು ಹಾರೈಸಿದರು.

ಪದಾಧಿಕಾರಿಗಳಿಗೆ, ತರಗತಿ ನಾಯಕರಿಗೆ, ಪ್ರತಿಜ್ಞಾ ಸ್ವೀಕಾರ ನಡೆಯಿತು.


ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಯಾಗಿ ಹತ್ತನೇ ತರಗತಿಯ ಆಲಾಪ್, ಉಪಮುಖ್ಯಮಂತ್ರಿಯಾಗಿ ಒಂಬತ್ತನೇ ತರಗತಿಯ ತೌಫಿರ, ಶಿಸ್ತುಪಾಲನ ಮಂತ್ರಿಯಾಗಿ 9ನೇ ತರಗತಿಯ ಜ್ಞಾನ್ ಅನ್ವೇಶ್, ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಫಾಯಿಝಾ, ಕ್ರೀಡಾ ಮಂತ್ರಿಯಾಗಿ ಜಿತೆನ್, ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿಯಾಗಿ ಎಂಟನೇ ತರಗತಿಯ ಸಮನ್ವಿ ಮತ್ತು ಒಂಭತ್ತನೆ ತರಗತಿಯ ವಿಜಯ್, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಆದ್ಯತಾ ಬಿ.ಆರ್ , ಶಿಕ್ಷಣಮಂತ್ರಿಯಾಗಿ ಹತ್ತನೇ ತರಗತಿಯ ಐಶ್ವರ್ಯ,ಸಭಾಪತಿಯಾಗಿ ಮಧುಶ್ರೀ, ಪ್ರಮಾಣವಚನ ಸ್ವೀಕರಿಸಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿಯವರು ಮಾತನಾಡಿ ಶಾಲೆಯಲ್ಲಿ ನಡೆಯುವ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಉತ್ತಮವಾದ ಅವಕಾಶಗಳನ್ನು ಗಿಟ್ಟಿಸಿಕೊಳ್ಳಿ ಎಂದರು.


ಸಂಸತ್ತು ಸಂಯೋಜಕರಾದ ವಿವೇಕ್ ಜೈನ್ ಮತ್ತು ಕಾರ್ಯಕ್ರಮದ ಸಂಯೋಜಕರಾದ ಶಶಿಪ್ರಭಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅದಿಶ್ ಸ್ವಾಗತಿಸಿ, ದಿಶಾನ್ ಅತಿಥಿ ಪರಿಚಯ ನೀಡಿ, ಸಚಿತ್ ಭಟ್ ವಂದಿಸಿ, ಪ್ರವಲ್ ರಾಜ್ ಮತ್ತು ಶ್ರೇಯ ನಿರೂಪಿಸಿದರು.

Related posts

ಪ್ರಥಮ ಬಾರಿಗೆ ತಾಲೂಕಿನಲ್ಲಿ ಅಸ್ತಿತ್ವಕ್ಕೆ ಬಂದ ಕುಣಿತ ಭಜನೆಯ ತರಬೇತಿದಾರರ ಸಂಘದ ಸಂಚಾಲಕರಾಗಿ ಪಿ ಚಂದ್ರಶೇಖರ್ ಸಾಲ್ಯಾನ್ ಆಯ್ಕೆ

Suddi Udaya

ಪುದುವೆಟ್ಟು ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿಂಧೂ ಕೆ.ಎಸ್ ಯವರಿಂದ ನಾಮಪತ್ರ ಸಲ್ಲಿಕೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿವಾನಂದ ಪ್ರಭು ಅವರಿಗೆ ಶ್ರದ್ಧಾಂಜಲಿ

Suddi Udaya

ಆ 9-15 ಬೆಳ್ತಂಗಡಿಯಲ್ಲಿ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ,

Suddi Udaya

ಬಿಜೆಪಿ ಕೊಕ್ಕಡ 237ನೇ ಬೂತು ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್, ಕಾರ್ಯದರ್ಶಿಯಾಗಿ ಶ್ರೀಧರ್ ಆಯ್ಕೆ

Suddi Udaya

ವಿದ್ಯಾಶ್ರೀ ಅಡೂರ್ ಅವರ 3 ನೇ ಕವನಸಂಕಲನ “ಪಯಣ” ಕವನಗಳ ಹಾದಿಯಲ್ಲಿ ಬಿಡುಗಡೆ

Suddi Udaya
error: Content is protected !!